newsfirstkannada.com

‘ನನ್ನ ಅಣ್ಣ ಗೆದ್ದು ಬಿಟ್ಟ’.. ಯೂಸುಫ್​ ಪಠಾಣ್​ ಗೆಲುವಿನ ಸಂತಸವನ್ನು ಕೊಂಡಾಡಿದ ಇರ್ಫಾನ್​

Share :

Published June 4, 2024 at 9:47pm

    ಕಾಂಗ್ರೆಸ್​ ಅಭ್ಯರ್ಥಿಗೆ ಸೋಲಿನ ರುಚಿ ತೋರಿಸಿದ​​ ಯೂಸುಫ್​ ಪಠಾಣ್

    ತೃಣಮೂಲ ಕಾಂಗ್ರೆಸ್​ನಿಂದ ಸ್ಪರ್ಧಿಸುವ ಮೂಲಕ ಗೆದ್ದ ಮಾಜಿ ಆಟಗಾರ

    ನನಸಾಗುತ್ತಾ ಯೂಸುಫ್​ ಪಠಾಣ್ ನೀಡಿದ ಮೊದಲ ಭರವಸೆ?

ಟೀಂ ಇಂಡಿಯಾದ ಮಾಜಿ ಆಲ್​ ರೌಂಡರ್​​ ಯೂಸುಫ್​ ಪಠಾಣ್​ ಈ ಬಾರಿಯಬ ಲೋಕ ಸಭಾ ಚುನಾವಣೆಯಲ್ಲಿ ವಿಜಯ ಸಾಧಿಸಿದ್ದಾರೆ. ಪಶ್ಚಿಮ ಬಂಗಾಳದ ಬಹ್ರಂಪುರದಿಂದ ತೃಣಮೂಲ ಕಾಂಗ್ರೆಸ್​ನಿಂದ ಸ್ಪರ್ಧಿಸಿದ ಯೂಸುಫ್​ ಪಠಾಣ್​ ಅಜೇಯ ಮುನ್ನಡೆ ಸಾಧಿಸಿದ್ದಾರೆ. ಅತ್ತ ಕಿರಿಯ ಸಹೋದರನ ಜಯವನ್ನು ಇರ್ಫಾನ್​ ಪಠಾಣ್​ ಕೊಂಡಾಡಿದ್ದಾರೆ.

ಅಚ್ಚರಿಯ ಸಂಗತಿ ಎಂದರೆ ಯೂಸುಫ್​ ಪಠಾಣ್ ತೃಣಮೂಲ ಕಾಂಗ್ರೆಸ್​ನಿಂದ ಸ್ಪರ್ಧಿಸುವ ಮೂಲಕ ​ ಹೊಸ ದಾಖಲೆ ಬರೆದಿದ್ದಾರೆ. ಕಾಂಗ್ರೆಸ್​ ಪಕ್ಷದಿಂದ ಸ್ಪರ್ಧಿಸಿದ್ದ ಅಧೀರ್​ ರಂಜನ್​ ಚೌಧರಿಯನ್ನು ಸೋಲಿಸಿದ್ದಾರೆ. ವಿಶೇಷ ಸಂಗತಿ ಎಂದರೆ 25 ವರ್ಷಗಳಲ್ಲಿ ಮೊದಲ ಬಾರಿಗೆ ಅಧೀರ್​ ರಂಜನ್ ಮೊದಲ ಸೋಲನ್ನು ಅನುಭವಿಸಿದ್ದಾರೆ.

ಕಳೆದ ತಿಂಗಳು ಸಹೋದರನ ಪರವಾಗಿ ಇರ್ಫಾನ್​ ಪಠಾನ್​ ಚುನಾವಣಾ ಪ್ರಚಾರ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. ಆದರೀಗ ಸಹೋದರ ಜಯಭೇರಿ ಬಾರಿಸಿದ್ದು, ಇರ್ಫಾನ್​ಗೆ ಇನ್ನಿಲ್ಲದ ಸಂತೋಷವಾಗಿದೆ. 524516 ಮತಗಳಲ್ಲಿ ಯೂಸುಫ್​​ ಜಯಭೇರಿ ಬಾರಿಸಿದ್ದಾರೆ.

ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮತ್ತೋರ್ವ ಆರೋಪಿ ಅರೆಸ್ಟ್​; ದೇಶ ಬಿಟ್ಟು ಪರಾರಿಯಾಗಲು ಯತ್ನಿಸುವಾಗ ಬಂಧನ

ಯೂಸುಫ್​ ಪಠಾಣ್​ ಬಹ್ರಂಪುರದ ಜನರಿಗೆ ಭರವಸೆಯನ್ನು ನೀಡಿದ್ದರು, ತಮ್ಮ ಕ್ಷೇತ್ರವನ್ನು ಕ್ರೀಡೆ ಮತ್ತು ವಾಣಿಜ್ಯದ ಮೂಲಕ ಅಭಿವೃದ್ಧಿಪಡಿಸಲು ಸಹಾಯ ಮಾಡುವುದ್ದಾಗಿ ಹೇಳಿದ್ದರು.

ಇದನ್ನೂ ಓದಿ: ‘ಲೋಕ’ ಜಯದ ಬೆನ್ನಲ್ಲೇ ಪ್ರಧಾನಿ ಮೋದಿ ಮೊದಲ ಟ್ವೀಟ್​.. ಏನಂದ್ರು ಗೊತ್ತಾ?

‘‘ನಾನು ಮೊದಲು ಕ್ರೀಡಾ ಅಕಾಡೆಮಿ ಮಾಡುತ್ತೇನೆ, ಇದರಿಂದ ಜನರ ವೃತ್ತಿಜೀವನವನ್ನು ನಿರ್ಮಿಸುತ್ತೇನೆ, ನಾನು ಕೈಗಾರಿಕೆಗಳಿಗಾಗಿಯೂ ಕೆಲಸ ಮಾಡುತ್ತೇನೆ. ನಾನು ಇಲ್ಲಿ ವಾಸಿಸುತ್ತೇನೆ ಮತ್ತು ಜನರಿಗಾಗಿ ಕೆಲಸ ಮಾಡುತ್ತೇನೆ’’ ಎಂದು ಹೇಳಿದ್ದರು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘ನನ್ನ ಅಣ್ಣ ಗೆದ್ದು ಬಿಟ್ಟ’.. ಯೂಸುಫ್​ ಪಠಾಣ್​ ಗೆಲುವಿನ ಸಂತಸವನ್ನು ಕೊಂಡಾಡಿದ ಇರ್ಫಾನ್​

https://newsfirstlive.com/wp-content/uploads/2024/06/Yusuf-pathan.jpg

Load More