newsfirstkannada.com

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮತ್ತೋರ್ವ ಆರೋಪಿ ಅರೆಸ್ಟ್​; ದೇಶ ಬಿಟ್ಟು ಪರಾರಿಯಾಗಲು ಯತ್ನಿಸುವಾಗ ಬಂಧನ

Share :

Published June 4, 2024 at 8:21pm

    ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ

    ನೆಟ್ಟಾರ್ ಹತ್ಯೆ ಪ್ರಕರಣದ ಬಂಧಿತ ಆರೋಪಿಗಳ ಸಂಖ್ಯೆ 19ಕ್ಕೆ ಏರಿಕೆ

    ವಿದೇಶಕ್ಕೆ ಹಾರುವ ಪ್ಲಾನ್​ ಮಾಡಿಕೊಂಡಿದ್ದ ಆರೋಪಿ NIA ಸಿಕ್ಕಿದ್ದೆಲ್ಲಿ?

ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧಿಸಿ N I A ಮತ್ತೋರ್ವ ಆರೋಪಿಯನ್ನು ಬಂಧಿಸಿದೆ. ದೇಶ ಬಿಟ್ಟು ಪರಾರಿಯಾಗಲು ಯತ್ನಿಸುತ್ತಿದ್ದಾಗ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ರಿಯಾಜ್ ಯೂಸಫ್ ಹಾರಳ್ಳಿ ಎಂದು ಗುರುತಿಸಲಾಗಿದೆ.

ರಿಯಾಜ್ ಯೂಸಫ್ ಹಾರಳ್ಳಿಯನ್ನ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಸದ್ಯ ಪ್ರವೀಣ್​ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಸಂಖ್ಯೆ 19 ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: ಪ್ರವೀಣ್​ ನೆಟ್ಟಾರು ಹತ್ಯೆಯ A4 ಆರೋಪಿ ಬಂಧನ.. ಎನ್​ಐಎ ಅಧಿಕಾರಿಗಳಿಗೆ ಈತ ಸಿಕ್ಕಿದ್ದೆಲ್ಲಿ ಗೊತ್ತಾ?

ಕಳೆದ ತಿಂಗಳಿನಲ್ಲಿ ಪ್ರವೀಣ್​ ನೆಟ್ಟಾರು ಹತ್ಯೆಯ ಪ್ರಮುಖ 4ನೇ ಆರೋಪಿಯನ್ನು ಬಂಧಿಸಲಾಗಿತ್ತು. ಸುಳ್ಯದ‌ ಶಾಂತಿ ನಗರ ನಿವಾಸಿಯಾಗಿದ್ದ ಮುಸ್ತಫಾ ಪೈಚಾರ್​ನನ್ನು ಅರೆಸ್ಟ್​ ಮಾಡಲಾಗಿತ್ತು. ಈತ ಪ್ರವೀಣ್​ ಹತ್ಯೆ ಬಳಿಕ ತಲೆಮರೆಸಿಕೊಂಡಿದ್ದನು. NIA ತಂಡ ಈತನಿಗಾಗಿ ಹುಡುಕಾಡಿ ಕೊನೆಗೆ ಹಾಸನದ‌ ಸಕಲೇಶಪುರ ಬಳಿ ಆತನನ್ನು ಅರೆಸ್ಟ್​ ಮಾಡಲಾಗಿತ್ತು.

ಮುಸ್ತಫಾ ಪೈಚಾರ್

ಇದನ್ನೂ ಓದಿ: ಕಾರು-ಟ್ರ್ಯಾಕ್ಟರ್​ ಅಪಘಾತ.. ಕಾರಿನಲ್ಲೇ ಸಜೀವ ದಹನಗೊಂಡ 30 ವರ್ಷದ ವ್ಯಕ್ತಿ

ಮುಸ್ತಫಾ ಪೈಚಾರ್ ಸುಳಿವು ನೀಡಿದವರಿಗೆ​ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್​ಐಎ ಅಧಿಕಾರಿಗಳು ಘೋಷಿಸಿದ್ದರು. ಕೊನೆಗೆ ಹಾಸನ ಜಿಲ್ಲೆ ಸಕಲೇಶಪುರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಅಡಗಿರೋದು ತಿಳಿದು ಬಂತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮತ್ತೋರ್ವ ಆರೋಪಿ ಅರೆಸ್ಟ್​; ದೇಶ ಬಿಟ್ಟು ಪರಾರಿಯಾಗಲು ಯತ್ನಿಸುವಾಗ ಬಂಧನ

https://newsfirstlive.com/wp-content/uploads/2024/06/Praveen-Nettar.jpg

Load More