/newsfirstlive-kannada/media/post_attachments/wp-content/uploads/2024/07/HYD_IRS_OFFICER.jpg)
ಹೈದರಾಬಾದ್: ಭಾರತೀಯ ಕಂದಾಯ ಸೇವೆ (IRS) ಅಧಿಕಾರಿಯೊಬ್ಬರು ತಮ್ಮ ಹೆಸರು ಮತ್ತು ಲಿಂಗವನ್ನು ಬದಲಾಯಿಸಿಕೊಳ್ಳಲು ಮುಂದಾಗಿದ್ದು ಇದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈಗ ಇವರು ಮಹಿಳೆಯಾಗಿದ್ದು ಪುರುಷನಾಗಲು ಬಯಸಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕೆ ಈಗಾಗಲೇ ಅನುಮೋದನೆ ಸಿಕ್ಕಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:RCB ಕೋಚ್ ಆಗ್ತಾರಾ ರಾಹುಲ್ ದ್ರಾವಿಡ್..? ಚಾಂಪಿಯನ್ ಕೋಚ್ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್!
ಐಆರ್ಎಸ್ ಅಧಿಕಾರಿಯಾಗಿರುವ ಎಂ.ಅನುಸೂಯಾ ಅವರು ಹೈದರಾಬಾದ್ನ ಅಬಕಾರಿ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ ಮುಖ್ಯ ಆಯುಕ್ತರ ಕಚೇರಿಯಲ್ಲಿ ಜಂಟಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಈಗ ಮಹಿಳೆಯಾಗಿದ್ದು ಪುರುಷನಾಗಿ ಬದಲಾವಣೆಯಾಗಲು ಬಯಸಿದ್ದಾರೆ. ಅಲ್ಲದೇ ತಮ್ಮ ಹೆಸರನ್ನು ಎಂ.ಅನುಕತಿರ್ ಸೂರ್ಯ ಎಂದು ಬದಲಾವಣೆ ಮಾಡಿಕೊಳ್ಳುವುದಾಗಿ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಒಂದೇ ಶಾಲೆಯ ಹತ್ತಾರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ.. ಕಿರಾತಕ ಯಾರನ್ನ ಟಾರ್ಗೆಟ್ ಮಾಡ್ತಿದ್ದ?
M Anusuya, IRS (C&IT: 2013), presently posted as Joint Commissioner in 0/o Chief Commissioner (AR), CESTAT, Hyderabad requested for change of her name from Ms M Anusuya to Mr M Anukathir Surya and Gender from Female to Male@CNBCTV18Live@CNBCTV18News@ShereenBhan@cbic_indiapic.twitter.com/lSikrP6mBf
— Timsy Jaipuria (@TimsyJaipuria)
M Anusuya, IRS (C&IT: 2013), presently posted as Joint Commissioner in 0/o Chief Commissioner (AR), CESTAT, Hyderabad requested for change of her name from Ms M Anusuya to Mr M Anukathir Surya and Gender from Female to Male@CNBCTV18Live@CNBCTV18News@ShereenBhan@cbic_indiapic.twitter.com/lSikrP6mBf
— Timsy Jaipuria (@TimsyJaipuria) July 9, 2024
">July 9, 2024
ಎಂ.ಅನುಸೂಯಾ ಅವರ ಕೋರಿಕೆಯನ್ನು ಕಂದಾಯ ಇಲಾಖೆ (ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ) ಹಾಗೂ ಹಣಕಾಸು ಸಚಿವಾಲಯದ ಅಧೀನ ಕಾರ್ಯದರ್ಶಿ ಕಚೇರಿಯ ಅಧಿಕಾರಿಗಳು ಮನವಿಯನ್ನು ಸ್ವೀಕರಿಸಿದ್ದಾರೆ. ಹೀಗಾಗಿ ಎಂ.ಅನಸೂಯಾ ಅವರನ್ನು ಇನ್ಮುಂದೆ ಎಲ್ಲ ಅಧಿಕೃತ ದಾಖಲೆಗಳಲ್ಲಿ ಎಂ.ಅನುಕತಿರ್ ಸೂರ್ಯ ಎಂದು ಗುರುತಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ