ರಾತ್ರೋರಾತ್ರಿ ಇಸ್ರೇಲ್ ಮೇಲೆ ಕ್ಷಿಪಣಿಗಳಿಂದ ಇರಾನ್ ದಾಳಿ
ಕೆಂಪು ಸಮುದ್ರದಲ್ಲಿ ಸಾಗುವ ಹಡಗುಗಳ ಮೇಲೆ ಯೆಮೆನ್ ಕಣ್ಣು
ಹೆಜ್ಬೊಲ್ಲಾವನ್ನು ಸಂಪೂರ್ಣವಾಗಿ ಮಣಿಸಲು ಸಾಧ್ಯವಾಗದು
ಇರಾನ್ ರಾತ್ರೋರಾತ್ರಿ ಇಸ್ರೇಲ್ ಮೇಲೆ ಕ್ಷಿಪಣಿಗಳಿಂದ ದಾಳಿ ನಡೆಸಿದ್ದು, ಪಶ್ಚಿಮ ಏಷ್ಯಾದಲ್ಲಿ ಕದನ ತೀವ್ರಗೊಂಡಿದೆ. ಇದರ ಪರಿಣಾಮವಾಗಿ, ಜಾಗತಿಕ ಮತ್ತು ಭಾರತೀಯ ವ್ಯಾಪಾರಿಗಳು ದೀರ್ಘಾವಧಿಯಲ್ಲಿ ವ್ಯಾಪಾರದ ವ್ಯತ್ಯಯಗಳಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಕೆಂಪು ಸಮುದ್ರದ ಸಾಗಾಣಿಕಾ ಮಾರ್ಗ ನಿರೀಕ್ಷೆಗಿಂತಲೂ ಹೆಚ್ಚಿನ ಅವಧಿಗೆ ಮುಚ್ಚಲ್ಪಡುವ ಸಾಧ್ಯತೆಗಳಿದ್ದು, ಸುದೀರ್ಘ ಅವಧಿಯವರೆಗೆ ಸಾಗಾಣಿಕಾ ವೆಚ್ಚ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ.
ಗಾಜಾದಲ್ಲಿನ ಹಮಾಸ್ ಸಂಘಟನೆಯ ವಿರುದ್ಧದ ಯುದ್ಧವನ್ನು ಒಂದು ಹಂತಕ್ಕೆ ಕೊಂಡೊಯ್ದ ಇಸ್ರೇಲ್, ಬಳಿಕ ತನ್ನ ಗಮನವನ್ನು ಇರಾನ್ ಬೆಂಬಲಿತ, ಹೆಚ್ಚು ಶಕ್ತಿಯುತವಾದ ಹೆಜ್ಬೊಲ್ಲಾ ಮೇಲೆ ತಿರುಗಿಸಿತು. ಈ ಮೂಲಕ, ಕಳೆದ ಒಂದು ವರ್ಷದಿಂದ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಇನ್ನಷ್ಟು ತೀವ್ರತೆ ಕಂಡಿತು. ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ಸಂಘಟನೆಯ ಸದಸ್ಯರ ಪೇಜರ್‌ಗಳು, ವಾಕಿಟಾಕಿಗಳು ಸಾಲುಸಾಲಾಗಿ ಸ್ಫೋಟಗೊಂಡ ಬಳಿಕ, ಇಸ್ರೇಲ್ ಲೆಬನಾನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಿ, ಹೆಜ್ಬೊಲ್ಲಾದ ಸುದೀರ್ಘಾವಧಿಯ ನಾಯಕ ಹಸನ್ ನಸ್ರಲ್ಲಾನ ಹತ್ಯೆ ನಡೆಸಿತು.
ಇಸ್ರೇಲ್ ಪಾಲಿಗೆ ಕಾರ್ಯತಂತ್ರದ ಗೆಲುವು
ಹಲವರು ಅರಬ್ ಜಗತ್ತಿನ ಪ್ರಮುಖ ನಾಯಕನಾದ, ಇಸ್ರೇಲ್‌ನ 2006ರ ಆಕ್ರಮಣಕ್ಕೆ ತಡೆ ಒಡ್ಡಿದ್ದ ಹಸನ್ ನಸ್ರಲ್ಲಾ ಹತ್ಯೆ ಇಸ್ರೇಲ್ ಪಾಲಿಗೆ ಕಾರ್ಯತಂತ್ರದ ಗೆಲುವು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಇಸ್ರೇಲ್ ಮಾಜಿ ಪ್ರಧಾನಿ ಎಹುದ್ ಒಲ್ಮರ್ಟ್ ಸೇರಿದಂತೆ, ಇನ್ನೊಂದಷ್ಟು ಮಂದಿ ಇಸ್ರೇಲಿನ ಲೆಬನಾನ್ ಕಾರ್ಯಾಚರಣೆ ಅಸ್ತವ್ಯಸ್ತತೆಗೆ ಕಾರಣವಾದೀತು, ಅದು ನಿರೀಕ್ಷಿಸಿದಂತೆ ಹೆಜ್ಬೊಲ್ಲಾವನ್ನು ಸಂಪೂರ್ಣವಾಗಿ ಮಣಿಸಲು ಸಾಧ್ಯವಾಗದು ಎಂದು ಎಚ್ಚರಿಕೆ ನೀಡಿದ್ದಾರೆ.
ಹೆಚ್ಚುತ್ತಿರುವ ಚಕಮಕಿಯ ಕಾರಣದಿಂದಾಗಿ, ವ್ಯಾಪಾರ ವಹಿವಾಟಿಗೆ ಅಡಚಣೆ ಉಂಟಾಗುವ ಸಾಧ್ಯತೆಗಳು ದಟ್ಟವಾಗಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ, ಕೆಂಪು ಸಮುದ್ರದಲ್ಲಿ ಸಾಗುವ ಹಡಗುಗಳ ಮೇಲೆ ದಾಳಿ ನಡೆಸುವ ಯೆಮೆನ್‌ನ ಹೌತಿ ಬಂಡುಕೋರರೊಡನೆ ಹೆಜ್ಬೊಲ್ಲಾ ಉತ್ತಮ ಸಂಬಂಧ ಹೊಂದಿದೆ.
ಭಾರತ ಯುರೋಪ್, ಅಮೆರಿಕ, ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾಗಳ ಜೊತೆಗೆ ತನ್ನ ವ್ಯಾಪಾರಕ್ಕಾಗಿ ಸೂಯೆಜ್ ಕಾಲುವೆಯನ್ನು ಅವಲಂಬಿಸಿರುವುದರಿಂದ, ಕೆಂಪು ಸಮುದ್ರದ ಮಾರ್ಗ ಭಾರತಕ್ಕೆ ಮಹತ್ವದ್ದಾಗಿದೆ. ಕ್ರೈಸಿಲ್ ರೇಟಿಂಗ್ ವರದಿಯ ಪ್ರಕಾರ, ಈ ಪ್ರದೇಶಗಳು 2023ನೇ ಆರ್ಥಿಕ ವರ್ಷದಲ್ಲಿ 400 ಬಿಲಿಯನ್ ಡಾಲರ್ ತನಕ ವ್ಯಾಪಾರ ನಡೆಸಿವೆ.
ಇಸ್ರೇಲ್ ಮತ್ತು ಇರಾನ್ ನಡುವೆ ನೇರ ಯುದ್ಧ ನಡೆದರೆ, ಪ್ರಮುಖ ವ್ಯಾಪಾರ ಮಾರ್ಗವಾದ ಕೆಂಪು ಸಮುದ್ರದಲ್ಲಿ ಸುದೀರ್ಘಾವಧಿಯ ಸಮಸ್ಯೆ ತಲೆದೋರಬಹುದು ಎಂದು ಹಿಂದಿನಿಂದಲೂ ರಫ್ತುದಾರರು ಆತಂಕ ಹೊಂದಿದ್ದರು. ಇತ್ತೀಚಿನ ಕದನ ತೀವ್ರತೆಯ ಪರಿಣಾಮವಾಗಿ, ಭಾರತೀಯ ರಫ್ತುದಾರರಿಗೆ ಸಮಸ್ಯೆ ತಲೆದೋರಿದ್ದು, ಕೆಂಪು ಸಮುದ್ರದ ಬಿಕ್ಕಟ್ಟಿನಿಂದಾಗಿ ಭಾರತದ ರಫ್ತು ಆಗಸ್ಟ್ ತಿಂಗಳಲ್ಲಿ 9% ಇಳಿಕೆ ಕಂಡಿತ್ತು.
ಆಗಸ್ಟ್ ತಿಂಗಳಲ್ಲಿ ಭಾರತದ ಪೆಟ್ರೋಲಿಯಂ ರಫ್ತು 38% ಇಳಿಕೆ ಕಂಡಿದ್ದು, ಇದಕ್ಕೆ ಕೆಂಪು ಸಮುದ್ರದ ಬಿಕ್ಕಟ್ಟೇ ಪ್ರಮುಖ ಕಾರಣವಾಗಿತ್ತು. ಲಾಭದ ಪ್ರಮಾಣ ಇಳಿಮುಖವಾಗಿದ್ದು, ಸಾಗಾಣಿಕಾ ವೆಚ್ಚ ಹೆಚ್ಚಾಗಿದೆ. ಇದರಿಂದಾಗಿ ಆಮದುದಾರರು ಬೇರೆ ಪೂರೈಕೆದಾರರ ಹುಡುಕಾಟಕ್ಕೆ ತೊಡಗಿದ್ದಾರೆ ಎನ್ನುತ್ತವೆ ವರದಿಗಳು.
ಅಧಿಕೃತ ಅಂಕಿಅಂಶಗಳ ಪ್ರಕಾರ, ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಕಳೆದ ತಿಂಗಳು 5.95 ಬಿಲಿಯನ್ ಡಾಲರ್‌ಗೆ ಇಳಿಕೆ ಕಂಡಿವೆ. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಈ ಮೌಲ್ಯ 9.54 ಬಿಲಿಯನ್ ಡಾಲರ್ ಆಗಿತ್ತು. ಫೆಬ್ರವರಿ ತಿಂಗಳ ಕ್ರೈಸಿಲ್ ವರದಿ ಸಾಗಾಣಿಕಾ ಮಾರುಕಟ್ಟೆಯಲ್ಲಿ ರಫ್ತಿನ ಮೇಲೆ ದುಷ್ಪರಿಣಾಮ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿತ್ತು. 2023ರ ಹಣಕಾಸು ವರ್ಷದಲ್ಲಿ, ಭಾರತದ 21% ಪೆಟ್ರೋಲಿಯಂ ರಫ್ತು ಯುರೋಪ್‌ಗೆ ಆಗಿತ್ತು. ಆದರೆ, ಹೆಚ್ಚುತ್ತಿರುವ ಸಾಗಾಣಿಕಾ ವೆಚ್ಚದ ಪರಿಣಾಮವಾಗಿ, ಲಾಭಾಂಶ ಕಡಿಮೆಯಾಗಿ, ಸ್ವತಂತ್ರ ತೈಲ ಸಂಸ್ಕರಣಾಗಾರಗಳು ಸಮಸ್ಯೆ ಎದುರಿಸುವಂತಾಗಿದೆ.
ಪ್ರಾದೇಶಿಕ ಶಕ್ತಿಗಳಾದ ಸೌದಿ ಅರೇಬಿಯಾ, ಯುಎಇ, ಕುವೈತ್, ಮತ್ತು ಕತಾರ್‌ಗಳು ತಟಸ್ಥವಾಗಿ ಉಳಿದು, ಯುದ್ಧದಲ್ಲಿ ಪಾಲ್ಗೊಳ್ಳದಿರುವ ಪರಿಣಾಮವಾಗಿ, ಪಶ್ಚಿಮ ಏಷ್ಯಾದೊಡನೆ ಭಾರತದ ವ್ಯಾಪಾರ ಧನಾತ್ಮಕವಾಗಿತ್ತು. ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್ (ಜಿಟಿಆರ್‌ಐ) ವರದಿಯ ಪ್ರಕಾರ, ಗಲ್ಫ್ ಕೋಆಪರೇಶನ್ ಕೌನ್ಸಿಲ್‌ನ (ಜಿಸಿಸಿ) ಸದಸ್ಯ ರಾಷ್ಟ್ರಗಳೊಡನೆ ಭಾರತದ ವ್ಯಾಪಾರ 2024ರ ಜನವರಿ ಮತ್ತು ಜುಲೈ ನಡುವೆ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 17.8% ಹೆಚ್ಚಳ ಕಂಡಿದೆ. ಇದೇ ಅವಧಿಯಲ್ಲಿ, ಇರಾನ್‌ಗೆ ಭಾರತದ ರಫ್ತೂ 15.2% ಹೆಚ್ಚಳವಾಗಿದೆ.
ಸಾಗಾಣಿಕಾ ವೆಚ್ಚವನ್ನು ಹೆಚ್ಚಿಸಿದ ಸುದೀರ್ಘ ಮಾರ್ಗಗಳು
ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ವರದಿಗಳು ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ಮೊದಲ ಎರಡು ತಿಂಗಳಲ್ಲಿ ಸೂಯೆಜ್ ಕಾಲುವೆಯಲ್ಲಿನ ವ್ಯಾಪಾರ 50% ಕುಸಿತ ಕಂಡಿದೆ. ಇದೇ ವೇಳೆ, ಕೇಪ್ ಆಫ್ ಗುಡ್ ಹೋಪ್ ಅನ್ನು ಬಳಸಿಕೊಂಡು ಸಾಗುವ ವ್ಯಾಪಾರ ಸಾಗಾಣಿಕೆಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಅಂದಾಜು 74% ಹೆಚ್ಚಳ ಕಂಡಿವೆ. ಪ್ರಮುಖ ಸಮುದ್ರ ಮಾರ್ಗಗಳಲ್ಲಿ, ಅದರಲ್ಲೂ ಸೂಯೆಜ್ ಕಾಲುವೆ ಮತ್ತು ಕೆಂಪು ಸಮುದ್ರಗಳಲ್ಲಿನ ಅಡಚಣೆಗಳು ಹಡಗುಗಳು ಆಫ್ರಿಕಾವನ್ನು ಬಳಸಿ ಸಾಗುವ ಸುದೀರ್ಘ ಮಾರ್ಗದ ಮೂಲಕವೇ ಸಾಗುವಂತೆ ಮಾಡಿವೆ. ಇದರ ಪರಿಣಾಮವಾಗಿ, ಸಾಗಾಣಿಕಾ ವೆಚ್ಚ 15-20% ಏರಿಕೆಯಾಗಿದೆ.
ಇದು ಭಾರತೀಯ ಸಂಸ್ಥೆಗಳ ಲಾಭಾಂಶದ ಮೇಲೆ ಅಡ್ಡ ಪರಿಣಾಮಗಳನ್ನು ಬೀರಿದೆ. ಅದರಲ್ಲೂ ಕಡಿಮೆ ವೆಚ್ಚದ ಇಂಜಿನಿಯರಿಂಗ್ ಉತ್ಪನ್ನಗಳು, ವಸ್ತ್ರಗಳು, ಹಾಗೂ ಇತರ ಕಾರ್ಮಿಕ ಉತ್ಪನ್ನಗಳ ರಫ್ತುದಾರರಿಗೆ ಇದರ ಬಿಸಿ ಹೆಚ್ಚಾಗಿಯೇ ತಟ್ಟಿದೆ. ಮಾಜಿ ವ್ಯಾಪಾರ ಅಧಿಕಾರಿ, ಹಾಗೂ ಜಿಟಿಆರ್‌ಐ ಮುಖ್ಯಸ್ಥರ ಪ್ರಕಾರ, ಯುರೋಪಿಯನ್ ಒಕ್ಕೂಟಕ್ಕೆ ಭಾರತದ ಒಟ್ಟು ರಫ್ತು 6.8% ಹೆಚ್ಚಳ ಕಂಡಿದ್ದರೂ, ಯಂತ್ರೋಪಕರಣಗಳು, ಉಕ್ಕು, ಹರಳುಗಳು ಮತ್ತು ಆಭರಣಗಳು, ಪಾದರಕ್ಷೆಗಳ ರಫ್ತು ಇಳಿಕೆ ಕಂಡಿವೆ.
ಇದನ್ನೂ ಓದಿ: ಇಸ್ರೇಲ್ ಮತ್ತು ಇರಾನ್ ರಕ್ತಸಿಕ್ತ ಸಂಘರ್ಷ.. 200ಕ್ಕೂ ಹೆಚ್ಚು ಮಿಸೈಲ್ ಅಟ್ಯಾಕ್, 8 ಜನರು ಸಾವು
ಭಾರತದ ಉದ್ಯಮಗಳು, ಅದರಲ್ಲೂ ಹೆಚ್ಚಿನ ಪ್ರಮಾಣ- ಕಡಿಮೆ ಬೆಲೆಯ ವಸ್ತುಗಳ ರಫ್ತಿನ ಮೇಲೆ ಅವಲಂವಿತವಾಗಿರುವ ಸಂಸ್ಥೆಗಳು ಮುಂದಿನ ದಿನಗಳಲ್ಲಿ ಸವಾಲುಗಳನ್ನು ಎದುರಿಸಲಿವೆ ಎಂದು ಅವರು ಎಚ್ಚರಿಸಿದ್ದಾರೆ. ಹೆಚ್ಚುತ್ತಿರುವ ಸಾಗಾಣಿಕಾ ವೆಚ್ಚ ವ್ಯಾಪಾರದ ಮೇಲೆ ಹೆಚ್ಚಿನ ಒತ್ತಡ ಹೇರಲಿದೆ.
ಹೆಚ್ಚಿನ ಲಾಭ ಗಳಿಸಿದ ಜಾಗತಿಕ ಸಾಗಾಣಿಕಾ ಸಂಸ್ಥೆಗಳು
ಕೆಂಪು ಸಮುದ್ರದ ಬಿಕ್ಕಟ್ಟು ಆರಂಭವಾದ ಬಳಿಕ, ಭಾರತದ ರಫ್ತುದಾರರು ಜಾಗತಿಕವಾಗಿ ಗುರುತಿಸಲ್ಪಡುವ, ಭಾರತೀಯ ಸಾಗಾಣಿಕಾ ವ್ಯವಸ್ಥೆಯ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಆಗ್ರಹಿಸಿದ್ದಾರೆ. ಭಾರತದ್ದೇ ಆದ ಸಾಗಾಣಿಕಾ ವ್ಯವಸ್ಥೆ ಹೊಂದುವುದರಿಂದ, ವಿದೇಶಿ ಸಾಗಾಣಿಕಾ ಸಂಸ್ಥೆಗಳು ಭಾರತದ ಅತಿ ಸಣ್ಣ, ಸಣ್ಣ, ಮಧ್ಯಮ ಉದ್ಯಮಗಳ (ಎಂಎಸ್ಎಂಇಗಳು) ಮೇಲೆ ಅನಗತ್ಯ ಒತ್ತಡ ಹೇರದಂತೆ ತಡೆಯಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಜಾಗತಿಕ ಸಾಗಾಣಿಕಾ ಸಂಸ್ಥೆಗಳಂತೂ ಕೆಂಪು ಸಮುದ್ರದ ಬಿಕ್ಕಟ್ಟಿನ ಪ್ರಯೋಜನ ಪಡೆದು, ತಮ್ಮ ಲಾಭದ ಪ್ರಮಾಣದಲ್ಲಿ ಭಾರೀ ಏರಿಕೆ ದಾಖಲಿಸಿವೆ. ಡ್ಯಾನಿಶ್ ಕಂಪನಿಯಾದ ಮಾಯೆರ್ಸ್‌ಕ್ ಅನ್ನು ಜಾಗತಿಕ ವ್ಯಾಪಾರದ ಸೂಚಕ ಎಂದು ಪರಿಗಣಿಸಲಾಗಿದ್ದು, ಅದು ಆಗಸ್ಟ್ ತಿಂಗಳಲ್ಲಿ ಸತತ 3ನೇ ಬಾರಿಗೆ ತನ್ನ ಲಾಭದ ಪ್ರಮಾಣದಲ್ಲಿ ಹೆಚ್ಚಳ ನಿರೀಕ್ಷಿಸಿದೆ. ಇದಕ್ಕೆ ಹೆಚ್ಚಿನ ಸಾಗಾಣಿಕಾ ದರ ಮತ್ತು ಪ್ರಸ್ತುತ ಬಿಕ್ಕಟ್ಟಿನ ಪರಿಣಾಮವಾಗಿ ಹೆಚ್ಚಾಗಿರುವ ಕಂಟೇನರ್ ಸಾಗಾಣಿಕಾ ಬೇಡಿಕೆಗಳು ಕಾರಣವಾಗಿವೆ.
ಚಬಹಾರ್ ಬಂದರು: ಭಾರತದ ಕಾರ್ಯತಂತ್ರದ ಕೀಲಿಕೈ
ಇರಾನ್‌ನಲ್ಲಿ ಅಂದಾಜು 10,000 ಭಾರತೀಯರು ವಾಸವಾಗಿದ್ದರೆ, ಇಸ್ರೇಲ್‌ನಲ್ಲಿ ಅಂದಾಜು 18,000 ಭಾರತೀಯರಿದ್ದಾರೆ. ನವದೆಹಲಿ ಇರಾನ್ ಹಾಗೂ ಇಸ್ರೇಲ್ ಎರಡರ ಜೊತೆಗೂ ಸ್ನೇಹ ಸಂಬಂಧ ಹೊಂದಿದೆ. ಆದರೆ ಈ ಪ್ರದೇಶದಲ್ಲಿ ಯುದ್ಧದ ಹೆಚ್ಚಳ ಕಂಡರೆ, ಇಲ್ಲಿ ಭಾರತೀಯ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಭಾರತಕ್ಕೆ ಕಳವಳದ ವಿಚಾರವಾಗಿದೆ. ಇವರಲ್ಲಿ ಹಲವರು ಉದ್ಯಮ ಮತ್ತು ತೈಲ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಆ ದೇಶಗಳ ಆರ್ಥಿಕತೆಗೆ ನೆರವಾಗುತ್ತಿದ್ದಾರೆ.
ಆದರೆ, ಈ ಪ್ರದೇಶದಲ್ಲಿ ಭಾರತದ ಆಸಕ್ತಿಗಳು ಕೇವಲ ಇಷ್ಟಕ್ಕೇ ಸೀಮಿತವಾಗಿಲ್ಲ.
ಇತ್ತೀಚಿನ ವರ್ಷಗಳಲ್ಲಿ, ಟೆಹರಾನ್ ಜೊತೆಗಿನ ಭಾರತದ ಸಂಬಂಧ ಬಹುತೇಕ ಚಬಹಾರ್ ಬಂದರು ಅಭಿವೃದ್ಧಿಯ ಸುತ್ತಲೂ ಕೇಂದ್ರಿತವಾಗಿತ್ತು. ಈ ಬಂದರು, ಪಾಕಿಸ್ತಾನದಲ್ಲಿ ಚೀನಾ ಬೆಂಬಲಿತ ಗ್ವಾದರ್ ಬಂದರಿನಿಂದ ಕೇವಲ 200 ಕಿಲೋಮೀಟರ್ ದೂರದಲ್ಲಿದೆ. ಈ ವರ್ಷ ಜನವರಿ ತಿಂಗಳಲ್ಲಿ, ವಿದೇಶಾಂಗ ಸಚಿವರಾದ ಡಾ. ಎಸ್ ಜೈಶಂಕರ್ ಅವರು ಟೆಹರಾನ್‌ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ, ಉಭಯ ದೇಶಗಳು ಚಬಹಾರ್ ಬಂದರಿನ ಕುರಿತು ಸುದೀರ್ಘ ಸಹಕಾರಕ್ಕೆ ಒಪ್ಪಿಗೆ ಸೂಚಿಸಿದ್ದವು.
ಇದನ್ನೂ ಓದಿ: ಘೋರ ಯುದ್ಧಕ್ಕೆ ಸಾಕ್ಷಿ ಆಗ್ತಿದೆ ಜಗತ್ತು; ಭಾರತೀಯರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ..!
ಅದರೊಡನೆ, ರಷ್ಯಾದ ಜೊತೆಗೆ ಹೆಚ್ಚುತ್ತಿರುವ ಭಾರತದ ವ್ಯಾಪಾರ ಹಾಗೂ ಚಬಹಾರ್ ಬಂದರಿನ ಕುರಿತ ಅದರ ಆಸಕ್ತಿಗಳು, ಇರಾನ್ ಮೂಲಕ ಭಾರತ ಮತ್ತು ರಷ್ಯಾವನ್ನು ಸಂಪರ್ಕಿಸುವ ಇಂಟರ್ನ್ಯಾಷನಲ್ ನಾರ್ತ್- ಸೌತ್ ಟ್ರಾನ್ಸ್‌ಪೋರ್ಟ್ ಕಾರಿಡಾರ್ (ಐಎನ್ಎಸ್‌ಟಿಸಿ) ಕುರಿತು ಹೆಚ್ಚಿನ ಗಮನ ಸೆಳೆದಿವೆ. ಅಧ್ಯಯನಗಳ ಪ್ರಕಾರ, ಐಎನ್ಎಸ್‌ಟಿಸಿ ಮಾರ್ಗ ಭಾರತ, ರಷ್ಯಾ, ಇರಾನ್ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳ ನಡುವೆ ವ್ಯಾಪಾರ ನಡೆಸಲು ಸೂಯೆಜ್ ಕಾಲುವೆಯ ಮಾರ್ಗಕ್ಕಿಂತಲೂ ಕಡಿಮೆ ವೆಚ್ಚದಾಯಕ ಮತ್ತು ವೇಗದ ಮಾರ್ಗ ಎನ್ನಲಾಗಿದೆ.
ಇರಾನ್ ಮತ್ತು ಇಸ್ರೇಲ್ ನಡುವಿನ ಕದನ ಈ ಪ್ರದೇಶದಲ್ಲಿನ ಭಾರತದ ಹೆಚ್ಚುತ್ತಿರುವ ಆಸಕ್ತಿಗೂ ತೊಂದರೆ ಉಂಟುಮಾಡಬಹುದು. ಅದರಲ್ಲೂ ಭಾರತ ಈಗ ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕತೆಯಾಗಿದ್ದು, ಈ ಸಮಯದಲ್ಲಿ ಇಂತಹ ಬೆಳವಣಿಗೆಗಳು ಭಾರತಕ್ಕೆ ಪೂರಕವಾಗಿಲ್ಲ.
ವಿಶೇಷ ವರದಿ: ಗಿರೀಶ್ ಲಿಂಗಣ್ಣ (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ