ಇಸ್ರೇಲ್-ಇರಾನ್ ಸಮರ; ಧಗಧಗಿಸುತ್ತಿದೆ ಯುದ್ಧದ ಬಿಸಿ.. 2 ರಾಷ್ಟ್ರಗಳ ಮಿಲಿಟರಿ ಬಲಾಬಲ ಹೇಗಿದೆ?

author-image
Bheemappa
Updated On
ಇಸ್ರೇಲ್-ಇರಾನ್ ಸಮರ; ಧಗಧಗಿಸುತ್ತಿದೆ ಯುದ್ಧದ ಬಿಸಿ.. 2 ರಾಷ್ಟ್ರಗಳ ಮಿಲಿಟರಿ ಬಲಾಬಲ ಹೇಗಿದೆ?
Advertisment
  • ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದು ಚರ್ಚೆಗೆ ಕಾರಣವಾಗಿದೆ
  • ಕೇವಲ ಇರಾನ್​ಗೆ ಮಾತ್ರವಲ್ಲ ಇನ್ನೀತರ ರಾಷ್ಟ್ರಗಳಿಗೂ ಢವಢವ
  • ಸ್ಫೋಟಕ ಹೇಳಿಕೆ ನೀಡಿದ ಇಸ್ರೇಲ್​ ಪ್ರಧಾನಿ ಬೆಂಜಮಿನ್, ಏನಂದ್ರು?

ಉಗ್ರರ ಹುಟ್ಟಡಗಿಸಲು ಟೊಂಕ ಕಟ್ಟಿ ನಿಂತಿರುವ ಇಸ್ರೇಲ್ ಮೇಲೆ ಇರಾನ್ ರಣ ಭೀಕರ ದಾಳಿ ನಡೆಸಿದೆ. ಇಸ್ರೇಲ್‌ ರಾಜಧಾನಿ ಟೆಲ್‌ ಅವೀವ್‌, ಜೆರುಸಲೆಂ ನಗರವನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಇರಾನ್​ ದಾಳಿಯಿಂದ ಇಸ್ರೇಲ್​ ಪ್ರಧಾನಿ ನೆತನ್ಯಾಹು ನಿಗಿನಿಗಿ ಕೆಂಡವಾಗಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧದ ಕಾರ್ಮೋಡ ಆವರಿಸತೊಡಗಿದೆ. ಪುಟ್ಟ ರಾಷ್ಟ್ರ ಇಸ್ರೇಲ್​ನ ದೊಡ್ಡ ಶಕ್ತಿಯೇ ಅಲ್ಲಿನ ಮಿಲಿಟರಿ ವ್ಯವಸ್ಥೆ. ಸೀಜ್​ ಫೈರ್​ ಅನ್ನ ಘೋಷಣೆ ಮಾಡಲ್ಲ, ಹೆಜ್ಬುಲ್ಲಾ ಉಗ್ರರನ್ನ ಬಿಡಲ್ಲ. ನಮ್ಮ ತಂಟೆಗೆ ಬಂದ್ರೆ ಸಹಿಸಲ್ಲ ಅಂತ ಇಸ್ರೇಲ್ ಟೊಂಕ ಕಟ್ಟಿ ನಿಂತು ಬಿಟ್ಟಿದೆ. ಇದು ಇರಾನ್​ಗೆ ಮಾತ್ರವಲ್ಲ ಇನ್ನೀತರ ರಾಷ್ಟ್ರಗಳಿಗೂ ಢವ ಢವ ಶುರುಮಾಡಿದೆ.

ಇದನ್ನೂ ಓದಿ:ಘೋರ ಯುದ್ಧಕ್ಕೆ ಸಾಕ್ಷಿ ಆಗ್ತಿದೆ ಜಗತ್ತು; ಭಾರತೀಯರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ..!

publive-image

ಇನ್ನು ಒಂದು ವೇಳೆ ಇರಾನ್ ಹಾಗೂ ಇಸ್ರೇಲ್ ನಡುವೆ ಯುದ್ಧ ನಡೆದದ್ದೇ ಆದ್ರೆ ಯಾರು ಗೆಲ್ತಾರೆ ಅನ್ನೋ ಕುತೂಹಲ, ಕಳವಳ ಇದ್ದೇ ಇದೆ. ತನ್ನ ಸುತ್ತಲೂ ಇರುವ ವೈರಿಗಳಿಂದ ತನ್ನ ಜನರನ್ನು ರಕ್ಷಿಸಲು ಇಸ್ರೇಲ್​ನ ಬತ್ತಳಿಕೆಯಲ್ಲಿ ಹಲವು ವಿಶೇಷ ಅಸ್ತ್ರಗಳಿವೆ. ಇರಾನ್​ ಸೇನೆ ಕೂಡ ಬಲಿಷ್ಠವಾಗಿದೆ. ಎರಡೂ ರಾಷ್ಟ್ರಗಳ ಶಕ್ತಿ ಹೇಗಿದೆ ಎನ್ನುವ ಒಂದು ಇಣುಕು ನೋಟ ಇಲ್ಲಿದೆ.

ಇರಾನ್ ಶಕ್ತಿ

  • ಒಟ್ಟು ಜನ ಸಂಖ್ಯೆ: 8,75,90,873
  • ಸೇವೆಗೆ ಸೂಕ್ತವಾಗಿರುವವರು: 4,11,67,710
  • ಸಕ್ರಿಯ ಸಿಬ್ಬಂದಿ: 6,10,000
  • ಮೀಸಲು ಸಿಬ್ಬಂದಿ: 3,50,000
  • ಅರೆಸೈನಿಕ ಪಡೆಗಳು: 2,20,000
  • ರಕ್ಷಣಾ ಬಜೆಟ್: $9,95,44,51,000
  • ಯುದ್ಧ ವಿಮಾನ: 551
  • ಹೆಲಿಕಾಪ್ಟರ್‌ಗಳು: 129
  • ಟ್ಯಾಂಕರ್​ಗಳು: 1,996
  • ಶಸ್ತ್ರಸಜ್ಜಿತ ವಾಹನಗಳು: 65,765
  • ಜಲಾಂತರ್ಗಾಮಿಗಳು: 19

ಇನ್ನೂ ಇಸ್ರೇಲ್ ಜನ ಸಂಖ್ಯೆಯಲ್ಲಿ ಕಮ್ಮಿ ಇದ್ರೂ ಶಕ್ತಿಯಲ್ಲಿ ಯಾರಿಗೇನು ಕಡಿಮೆ ಇಲ್ಲ.

  • ಒಟ್ಟು ಜನ ಸಂಖ್ಯೆ: 90,43,387
  • ಸೇವೆಗೆ ಸೂಕ್ತವಾಗಿರುವವರು: 31,56,142
  • ಸಕ್ರಿಯ ಸಿಬ್ಬಂದಿ: 1,70,000
  • ಮೀಸಲು ಸಿಬ್ಬಂದಿ: 4,65,000
  • ಅರೆಸೈನಿಕ ಪಡೆಗಳು: 35,000
  • ರಕ್ಷಣಾ ಬಜೆಟ್: $24,40,00,00,000
  • ಯುದ್ಧ ವಿಮಾನ: 612
  • ಹೆಲಿಕಾಪ್ಟರ್‌ಗಳು: 146
  • ಟ್ಯಾಂಕರ್​ಗಳು: 1,370
  • ಶಸ್ತ್ರಸಜ್ಜಿತ ವಾಹನಗಳು: 43,407
  • ಜಲಾಂತರ್ಗಾಮಿಗಳು: 5

ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟಿನ ವಾತಾವರಣ ಹೆಚ್ಚಾಗಿ ಜನಜೀವನ ಹದಗೆಡುತ್ತಿದೆ. ಈ ಕುರಿತು ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಗ್ರೂಪ್ ಆಫ್ ಸೆವೆನ್ ಅಂದ್ರೆ G7 ನಾಯಕರ ಕರೆಯನ್ನ ಆಯೋಜಿಸಲಿದ್ದಾರೆ. ಸಭೆಯಲ್ಲಿ ಸಂಧಾನ ಮತ್ತು ಶಾಂತಿ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆ.

ಇದನ್ನೂ ಓದಿ: ಇಸ್ರೇಲ್​ ಮತ್ತು ಇರಾನ್​ ರಕ್ತಸಿಕ್ತ ಸಂಘರ್ಷ.. 200ಕ್ಕೂ ಹೆಚ್ಚು ಮಿಸೈಲ್ ಅಟ್ಯಾಕ್, 8 ಜನರು ಸಾವು

publive-image

ಇದರ ನಡುವೆ ಇಸ್ರೇಲ್​ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಫೋಟಕ ಹೇಳಿಕೆಯೊಂದನ್ನ ನೀಡಿದ್ದಾರೆ. ಮಧ್ಯಪ್ರಾಚ್ಯದ ಯಾವುದೇ ಭಾಗದ ಮೇಲೆ ದಾಳಿ ಮಾಡುವ ಶಕ್ತಿ ನಮ್ಮಲ್ಲಿದೆ ಅಂತಾ ಖಡಕ್​ ಎಚ್ಚರಿಕೆ ಕೊಟ್ಟಿದ್ದಾರೆ. ಇತ್ತ ಅಮೆರಿಕ ಅಧ್ಯಕ್ಷ ಜೋ ಬೈಡನ್, ಇರಾನ್‌ನ ಪರಮಾಣು ತಾಣಗಳ ಮೇಲೆ ಇಸ್ರೇಲ್ ದಾಳಿಯನ್ನ ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ. ಯುದ್ಧ ಕಾವು ಬಿಸಿ ಏರುತ್ತಿರುವಾಗಲೇ ಜೋ ಬೈಡನ್​ನ ಈ ಹೇಳಿಕೆ ಬಾರೀ ಚರ್ಚೆಗೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment