/newsfirstlive-kannada/media/post_attachments/wp-content/uploads/2024/10/GREATER-ISRAEL.jpg)
ಮಧ್ಯಪ್ರಾಚ್ಯ ಸದ್ಯ ಹೊತ್ತಿ ಉರಿಯುತ್ತಿದೆ. ಕಾಲಿಟ್ಟಲ್ಲೆಲ್ಲಾ ಕೇವಲ ಮದ್ದು ಗುಂಡುಗಳೇ ಮಾತನಾಡುತ್ತಿವೆ. ಮೊದಲು ಪ್ಯಾಲಿಸ್ತೇನ್, ಬಳಿಕ ಲೆಬನಾನ್ ಈಗ ಇರಾನ್ ಮೂರು ದೇಶಗಳು ಈಗ ಇಸ್ರೇಲ್ನ್ನು ಕೆಣಕಿ ಮಹಾಸಂಕಷ್ಟವೊಂದನ್ನು ಮೈಮೇಲೆ ಎಳೆದುಕೊಂಡಿವೆ. ಇಸ್ರೇಲ್ ತಾನು ಸೃಷ್ಟಿಯಾದಾಗಿನಿಂದ ತನ್ನನ್ನು ಕೆಣಕಿದವರನ್ನು ಸುಮ್ಮನೆ ಇರಲು ಬಿಟ್ಟ ಇತಿಹಾಸವೇ ಇಲ್ಲ. ನುಗ್ಗಿ ಹೊಡೆಯುವುದೊಂದೆ ಅದರ ಮೊದಲ ಗುರಿ. ಇದು 1948 ರಿಂದಲೂ ಅದನ್ನು ಇಸ್ರೇಲ್ ಸಾಕ್ಷೀಕರಿಸುತ್ತಲೇ ಬಂದಿದೆ.
ಇದನ್ನೂ ಓದಿ:ಬೈರತ್ನಲ್ಲಿ ಯಹೂದಿ ಪಡೆಯ ರಣಭೀಕರ ದಾಳಿ! ಮತ್ತೊಬ್ಬ ಹಿಜ್ಬುಲ್ಲಾ ಮುಖಂಡನನ್ನು ಯಮಪುರಿಗೆ ಅಟ್ಟಿದ ಇಸ್ರೇಲ್?
ಈಗ ಮಧ್ಯಪ್ರಾಚ್ಯದಲ್ಲಿನ ಕದನೋತ್ಸಾಹ ಇಸ್ರೇಲ್ನ ಆ ಒಂದು ಕನಸಿಗೆ ಮತ್ತಷ್ಟು ಪುಷ್ಟಿಕೊಟ್ಟಿದೆ ಅನ್ನುವ ಮಾತುಗಳು ಹರಿದಾಡುತ್ತಿವೆ. ಈ ಮಾತನ್ನು ಹೇಳಿದ್ದು ಯಾರೋ ಸಾಧಾರಣ ವ್ಯಕ್ತಿಯಲ್ಲ, ಸ್ವತಃ ರಷ್ಯಾದ ಅಧ್ಯಕ್ಷ ವ್ಲಾಡಮೀರ್ ಪುಟೀನ್ ಅವರನ್ನು ಗುರುವೆಂದು ಪರಿಗಣಿಸುತ್ತಾರೆ. ವಿಶ್ವವೇ ಅವರನ್ನು ನುರಿತ ರಾಜನೀತಿತಜ್ಞ ಎಂದು ಗುರುತಿಸುತ್ತದೆ. ಆ ವ್ಯಕ್ತಿಯೇ ಅಲೆಕ್ಸಾಂಡರ್ ದುಗಿನ್.
ಇದನ್ನೂ ಓದಿ:ವಿಶ್ವವನ್ನೇ ಇಭ್ಭಾಗ ಮಾಡಿತಾ ಇಸ್ರೇಲ್-ಇರಾನ್ ವಾರ್? ಯಾವ ಯಾವ ರಾಷ್ಟ್ರ ಯಾರ ಬೆನ್ನಿಗೆ ನಿಲ್ಲಲಿವೆ?
ಅಲೆಕ್ಸಾಂಡರ್ ದುಗಿನ್ ಎಂತಹ ರಾಜನೀತ ತಜ್ಞರು ಅಂದ್ರೆ ಇದುವರೆಗೂ ಅವರ ರಾಜನೀತಿ ಲೆಕ್ಕಾಚಾರಗಳು, ವಿಶ್ಲೇಷಣೆಗಳು ತಪ್ಪಾದ ಉದಾಹರಣೆಗಳೇ ಇಲ್ಲ ಅಂತಹ ಪ್ರಖ್ಯಾತ ರಾಜನೀತಿ ತಜ್ಞ ಈಗ ಇಸ್ರೇಲ್ನ ಆ ಒಂದು ಕನಸಿನ ಬಗ್ಗೆ ಮಾತನಾಡಿದ್ದಾರೆ. ದಶಕಗಳಿಂದ ಇಸ್ರೇಲ್ ಕಾಣುತ್ತಿರುವ ಕನಸು ನನಸಾಗುವ ಬಗ್ಗೆ ಅಲೆಕ್ಸಾಂಡರ್ ದುಗಿನ್ ಮಾಡಿರುವ ಆ ಒಂದು ಟ್ವೀಟ್ ಈಗ ಮಧ್ಯಪ್ರಾಚ್ಯದಲ್ಲಿ ಇನ್ನೊಂದು ತಳಮಳ ಸೃಷ್ಟಿಸುತ್ತಿದೆ.
ಅಲೆಕ್ಸಾಂಡರ್ ದುಗಿನ್ ಅವರು ಹೇಳುವ ಪ್ರಕಾರ ಇನ್ನು ಕೇವಲ ಹತ್ತು ವರ್ಷಗಳಲ್ಲಿ ಇಸ್ರೇಲ್ ತನ್ನ ಕನಸಾದ ಗ್ರೇಟರ್ ಇಸ್ರೇಲ್ನ್ನು ನನಸು ಮಾಡಿಕೊಳ್ಳಲಿದೆ ಎಂದು ಹೇಳಿದ್ದಾರೆ. ಅದು ಮಾತ್ರವಲ್ಲ ಈ ಒಂದು ಕನಸನ್ನು ತಡೆಯಲು ವಿಶ್ವದಲ್ಲಿ ಯಾವ ಶಕ್ತಿಗೂ ಕೂಡ ಸಾಧ್ಯವಿಲ್ಲ ಎಂದ ದುಗಿನ್ ಹೇಳಿದ್ದಾರೆ. ಹಿಜ್ಬುಲ್ಲಾ ಉಗ್ರ ಸಂಘಟನೆಯ ನಾಯಕ ಹಸನ್ ನಸ್ರಲ್ಹಾ ಹತ್ಯೆಯ ಬಳಿಕ ದುಗಿನ್ ಈ ಒಂದು ಮಾತು ಹೇಳಿದ್ದು ಮಧ್ಯಪ್ರಾಚ್ಯದಲ್ಲಿ ಹೊಸ ತಳಮಳವನ್ನು ಸೃಷ್ಟಿಸುತ್ತಿದೆ. ಅಷ್ಟಕ್ಕೂ ಏನಿದು ಗ್ರೇಟರ್ ಇಸ್ರೇಲ್
ಇದನ್ನೂ ಓದಿ:ಕ್ಷಿಪಣಿ ದಾಳಿಯ ನಡುವೆ ವಿವಾಹ.. ಅಚ್ಚರಿ ಮೂಡಿಸಿದ ಇಸ್ರೇಲ್ ಯಹೂದಿ ಜೋಡಿ ಮದ್ವೆ
ಗ್ರೇಟರ್ ಇಸ್ರೇಲ್. ಇಸ್ರೇಲ್ ಈ ಕನಸು ಕಾಣುತ್ತಿರುವುದೇಕೆ?
ಗ್ರೇಟರ್ ಇಸ್ರೇಲ್ ಅನ್ನೋದು ಇಸ್ರೇಲ್ನ ವಿಸ್ತರಣಾವಾದ ಒಂದು ಉದ್ದೇಶ. ಮೊಟ್ಟ ಮೊದಲ ಬಾರಿಗೆ ಸ್ಥಾಪನೆಯಾದ ಇಸ್ರೇಲ್ಗೂ ಈಗೀನ ಇಸ್ರೇಲ್ಗೂ ತುಂಬಾ ವ್ಯತ್ಯಾಸವಿದೆ. ಇಸ್ರೇಲ್ ಹುಟ್ಟಿದಾಗ ಗುಬ್ಬಿ ಗೂಡಿನ ಗಾತ್ರದಷ್ಟಿತ್ತು. 1967ರಲ್ಲಿ ನಡೆದ ಆರು ದೇಶಗಳ ವಿರುದ್ಧದ ಭೀಕರ ಕಾಳಗದಲ್ಲಿ ಇಸ್ರೇಲ್ ವೆಸ್ಟ್ಬ್ಯಾಂಕ್, ಗಾಜಾಪಟ್ಟಿ ಮತ್ತು ಗೋಲನ್ ಹೈಟ್ಸ್ನಲ್ಲಿ ತನ್ನ ಧ್ವಜವನ್ನು ನೆಟ್ಟು ಇದು ನನ್ನ ಜಾಗ ಎಂದು ಮೊಹರೆ ಒತ್ತಿತ್ತು 1981ರಲ್ಲಿ ನಡೆದ ಮತ್ತೊಂದು ಭೀಕರ ಕಾಳಗದಲ್ಲಿ ಮತ್ತೆ ಶತ್ರುಗಳ ಪಾಳಯಕ್ಕೆ ಹೋಗಿದ್ದ ಗೋಲನ್ ಹೈಟ್ಸ್ ಹಾಗೂ ಪೂರ್ವ ಜೇರುಸೇಲಂನ್ನು ತನ್ನದಾಗಿಸಿಕೊಂಡಿತು. ಹೀಗೆ ತನ್ನದೇ ಒಂದು ಗೂಡು ಕಟ್ಟಿಕೊಂಡ ಮೇಲೆ ಇಸ್ರೇಲ್ ತನ್ನ ಜಾಗವನ್ನು ವಿಸ್ತರಿಸುತ್ತಲೇ ಸಾಗಿದೆ. ಆದ್ರೆ ಅದರ ಪಟ್ಟಿ ಇನ್ನೂ ಇಲ್ಲಿಗೆ ನಿಂತಿಲ್ಲ. ಅದು ಒಟ್ಟಾಗಿ ಕೆಲವು ಪ್ರದೇಶಗಳ ಮೇಲೆ ಕಣ್ಣಿಟ್ಟಿದೆ. ಅದು ತನ್ನ ತೆಕ್ಕೆಗೆ ಬಂದ ದಿನವೇ ಇಸ್ರೇಲ್ ಗ್ರೇಟರ್ ಇಸ್ರೇಲ್ ಆಗಿ ಬದಲಾಗಲಿದೆ.
ಇದು ಯಹೂದಿಗಳ ಅಥವಾ ಜಿಯೋನಿಸ್ಟ್ಗಳ ಶತಮಾನಗಳ ಕನಸು. ಜಿಯೋನಿಯಸಂನ ಸಂಸ್ಥಾಪಕ ಥಿಯೋಡರ್ ಹರ್ಜ್ಲ್ ಅವರ ಕನಸು. ಯಹೂದಿ ಸಾಮ್ರಾಜ್ಯವನ್ನು ಬ್ರೂಕ್ ಆಫ್ ಈಜಿಪ್ಟ್ನಿಂದ ಪಶ್ಚಿಮ ಏಷ್ಯಾದ ಯೂಫ್ರಟೀಸ್ ನದಿ ತೀರದವರೆಗೂ ವಿಸ್ತರಿಸುವುದು. ಅದರಲ್ಲಿ ಪ್ಯಾಲಿಸ್ತೇನ್ ಲಿಟಾನಿ ನದಿಯವರೆಗಿನ ಲೆಬನಾನ್ನ ಸಿಡೋನ್, ಸಿರಿಯಾದ ಗೋಲನ್ ಹೈಟ್ಸ್ ಜೊತೆಗೆ ಹೌರಾನ್ ಪ್ಲೈನ್ ಮತ್ತು ದೀರಾ, ದೀರಾದ ಹೇಜಲ್ ರೈಲ್ವೆಯಿಂದ ಅಮ್ಮಾನ್, ಜೊರ್ಡಾನ್ ಅದರ ಜೊತೆ ಜೊತೆಗೆ ಗಲ್ಫ್ ಆಫ್ ಅರಬ್ ಕೂಡ ಅದರ ಪಟ್ಟಿಯಲ್ಲಿದೆ. ಇವೆಲ್ಲವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ತನ್ನನ್ನು ತಾನು ಗ್ರೇಟರ್ ಇಸ್ರೇಲ್ ಎಂದು ಘೋಷಿಸಿಕೊಳ್ಳುವ ಕನಸು ಇಸ್ರೇಲ್ನದ್ದು. ಆ ಒಂದು ಕನಸು ನನಸಾಗುವ ದಿನಗಳು ಹತ್ತಿರುವಾಗುತ್ತಿವೆ ಎಂದೇ ಸದ್ಯ ಅಲೆಕ್ಸಾಂಡರ್ ದುಗಿನ್ ಹೇಳುತ್ತಿರುವುದು. ಇನ್ನು ಕೇವಲ ಹತ್ತೇ ವರ್ಷಗಳಲ್ಲಿ ಇಸ್ರೇಲ್ ಗ್ರೇಟ್ ಇಸ್ರೇಲ್ ಆಗಿ ಬದಲಾಗಲಿದೆ ಎಂದು ಹೇಳಿದ್ದಾರೆ. ಈಗಾಗಲೇ ಹೇಳಿದಂತೆ ಅಲೆಕ್ಸಾಂಡರ್ ದುಗಿನ್ ಅವರ ರಾಜಕೀಯ ಲೆಕ್ಕಾಚಾರಗಳು ಯಾವತ್ತೂ ಹುಸಿಯಾದ ಉದಾಹರಣೆಗಳೇ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ