ಉತ್ತರ ಇಸ್ರೇಲ್ ಮೇಲೆ ರಾಕೆಟ್ ಉಡಾವಣೆ ಮಾಡಿದ್ದ ಹೆಜ್ಬುಲ್ಲಾ
ನಸ್ರಲ್ಲಾ ಹತ್ಯೆ ಬೆನ್ನಲ್ಲೇ 11 ಉಗ್ರರನ್ನು ಹೊಡೆದಿರುವ ಇಸ್ರೇಲ್ ಸೇನೆ
ಲೆಬನಾನ್‌ನಲ್ಲಿ ಭಾರೀ ಪ್ರಭಾವಿ ವ್ಯಕ್ತಿಯಾಗಿದ್ದನು ಹಸನ್ ನಸ್ರಲ್ಲಾ
ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಹೆಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಹಾಗೂ ಆತನ ಪುತ್ರಿ ಸಾವನ್ನಪ್ಪಿರುವುದಾಗಿ ಶಂಕೆಗಳು ವ್ಯಕ್ತವಾಗಿತ್ತು. ಇದನ್ನ ಇಸ್ರೇಲ್ ಕ್ಲಿಯರ್ ಆಗಿ ಸ್ಪಷ್ಟಪಡಿಸಿತ್ತು. ಆದ್ರೆ ಹಿಜ್ಬುಲ್ಲಾ ಸಂಘಟನೆ ಇಲ್ಲವೇ ಇಲ್ಲ ಅಂತ ಹೇಳಿ. ಆಡಿದ ನಾಟಕ ಇದೀಗ ಬೆಳಕಿಗೆ ಬಂದಿದೆ.
ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಫಿನಿಷ್
ಲೆಬನಾನ್ -ಇಸ್ರೇಲ್ ನಡುವಿನ ಯುದ್ಧ ವಿಶ್ವದ ಗಮನ ಸೆಳೆಯುತ್ತಿದೆ. ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಬೇಟೆಗೆ ಹೊರಟಿದ್ದ ಇಸ್ರೇಲ್ ಸೇನೆ. ಕೊನೆಗೂ ಅದರಲ್ಲಿ ಯಶಸ್ವಿಯಾಗಿದೆ. ಇಸ್ರೇಲ್ನ ಯಶಸ್ಸು ಅಮೆರಿಕಾಗೂ ಒಳಗೊಳಗೆ ಸಂತಸ ತರಿಸಿದೆ.
ಇದನ್ನೂ ಓದಿ: ಕುಮಾರಸ್ವಾಮಿ ಆರೋಪಕ್ಕೆ ಎಡಿಜಿಪಿ ಕೌಂಟರ್; ಗಂಗೇನಹಳ್ಳಿ ಕೇಸ್ಗೆ ಹೊಸ ತಿರುವು..!
ಲೆಬನಾನ್‌ನಲ್ಲಿ ಪೇಜರ್, ವಾಕಿಟಾಕಿ ಸ್ಫೋಟದ ಬಳಿಕ ಉಭಯ ದೇಶಗಳ ಮಧ್ಯೆ ಸಂಘರ್ಷ ತಾರಕಕ್ಕೇರಿತ್ತು. ಕಳೆದ 6 ದಿನಗಳಿಂದ ಉಭಯ ದೇಶಗಳು ಪರಸ್ಪರ ರಾಕೆಟ್ ದಾಳಿಗೆ ಇಳಿದಿದ್ವು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನೆತನ್ಯಾಹು ಎಚ್ಚರಿಕೆ ಸಂದೇಶ ರವಾನೆ ಮಾಡ್ತಿದ್ದಂತೆ, ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ ತೀವ್ರಗೊಳಿಸಿತ್ತು. ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ತೇನ್ ಅಧ್ಯಕ್ಷ, ಅಮೆರಿಕಾ ವಿರುದ್ಧ ಗುಡುಗಿದ್ರು. ಇಸ್ರೇಲ್ನ ಯುದ್ಧಕ್ಕೆ ಅಮೆರಿಕಾ ಬೆಂಬಲವಾಗಿ ನಿಂತಿದೆ ಎಂದು ಆರೋಪ ಮಾಡಿದ್ರು. ಇದೀಗ ಇಸ್ರೇಲ್.. ಮುಖ್ಯ ಟಾರ್ಗೆಟ್ ಆಗಿದ್ದ ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾನನ್ನ ಬೇಟೆಯಾಡಿ ಮುಗಿಸಿಬಿಟ್ಟಿದೆ.
ನಸ್ರಲ್ಲಾ ಮರಣ ನ್ಯಾಯದ ಕ್ರಮ ಎಂದ ಅಮೆರಿಕಾ ಅಧ್ಯಕ್ಷ
ಕಟ್ಟರ್ ಮೂಲಭೂತವಾದಿಯಾಗಿದ್ದ ನಸ್ರಲ್ಲಾ.. ವಿಶ್ವದಲ್ಲಿ ಭಯೋತ್ಪಾದನೆಯನ್ನು ಪೋಷಿಸುತ್ತಿದ್ದ. ಹಿಜ್ಬುಲ್ಲಾ ಸಂಘಟನೆ ಸೇರಿದವರಿಗೆ ಉಗ್ರ ತರಬೇತಿ ನೀಡುತ್ತಿದ್ದ. ನಸ್ರಲ್ಲಾ ಹತ್ಯೆ ಬೆನ್ನಲ್ಲೇ ಈವರೆಗೆ 11 ಉಗ್ರರನ್ನು ಹೊಡೆದಿರುವುದಾಗಿ ಇಸ್ರೇಲ್ ಸೇನೆ ಫೋಟೋ-ಹುದ್ದೆ ಸಮೇತ ಟ್ವೀಟ್ ಮಾಡಿದೆ. ಇನ್ನು ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಮರಣವನ್ನು ನ್ಯಾಯದ ಕ್ರಮ ಎಂದು ಕರೆದಿದ್ದಾರೆ. ಬೈರೂತ್ನಲ್ಲಿರುವ ತನ್ನ ರಾಯಭಾರಿ ಅಧಿಕಾರಿಗಳಿಗೆ ಲೆಬನಾನ್ ತೊರೆಯುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: RCBಗೆ ಕೊಹ್ಲಿ, ವಿಲ್ ಜಾಕ್ಸ್ ಸೇರಿ 5 ಪ್ಲೇಯರ್ಸ್ ರಿಟೈನ್.. ಫ್ರಾಂಚೈಸಿಯಿಂದ ಕ್ಯಾಪ್ಟನ್ಗೆ ಬಿಗ್ ಶಾಕ್?
ಇಸ್ರೇಲ್‌ನಲ್ಲಿ ಹೈಅಲರ್ಟ್.. ನೆತನ್ಯಾಹು ಅಮೆರಿಕಾ ಪ್ರವಾಸ ರದ್ದು
ನಸ್ರಲ್ಲಾ ಹತ್ಯೆ ಒಪ್ಪಿಕೊಂಡಿರುವ ಹಿಜ್ಬುಲ್ಲಾ, ಗಾಜಾ, ಪ್ಯಾಲೆಸ್ತೀನ್‌ಗೆ ನಮ್ಮ ಬೆಂಬಲ ಮುಂದುರಿಯುತ್ತೆ. ನಮ್ಮ ವಿರೋಧಿಗಳ ವಿರುದ್ಧ ಹೋರಾಟ ಮುಂದುವರಿಸ್ತೇವೆ ಅಂತ ಇಸ್ರೇಲ್ ವಿರುದ್ಧ ಹಿಜ್ಬುಲ್ಲಾ ಶಪಥ ಮಾಡಿದೆ. ಇದರ ಬೆನ್ನಲ್ಲೇ ಇಸ್ರೇಲ್‌ನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಅಮೆರಿಕಾ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಇತ್ತ, ಹಿಜ್ಬುಲ್ಲಾ ಲೀಡರ್ ನಸ್ರಲ್ಲಾ ಸಾವಿನ ಬೆನ್ನಲ್ಲೇ ಇರಾನ್‌ನ ನಾಯಕ ಅಲಿ ಖಮೇನೀ ಟೈಟ್‌ಸೆಕ್ಯೂರಿಟಿ ಜೊತೆಗೆ ಸುರಕ್ಷಿತ ಅಜ್ಞಾತ ಸ್ಥಳ ತಲುಪಿದ್ದಾನೆ.
ಬೈರುತ್ನಲ್ಲಿರೋ ಹೆಜ್ಬುಲ್ಲಾ ಹೆಡ್ಕ್ವಾರ್ಟರ್ಸ್ ಮೇಲೆ 180 ಬಾಂಬ್ಗಳು ಅಂದ್ರೆ ಸುಮಾರು 80 ಟನ್ ಬಾಂಬ್ಗಳನ್ನ ಇಸ್ರೇಲ್ ಹಾಕಿದೆ. ಶನಿವಾರ ನಡೆದ ಈ ದಾಳಿಯಲ್ಲಿ 33 ಮಂದಿ ಸಾವನ್ನಪ್ಪಿದ್ದು, 195 ಜನರು ಗಾಯಗೊಂಡಿದ್ದಾರೆ. ನಸ್ರಲ್ಲಾ ಸಾವಿನ ಬೆನ್ನಲ್ಲೇ ಲೆಬನಾನ್ 3 ದಿನಗಳ ಶೋಕಾಚಾರಣೆ ಘೋಷಿಸಿದೆ. ಇಸ್ರೇಲ್ನ ರಣೋತ್ಸಕ್ಕೆ ವಿಶ್ವ ಕೆಲವು ದೇಶಗಳು ಖಂಡಿಸಿವೆ. ನಸ್ರಲ್ಲಾ ಹತ್ಯೆ ಖಂಡಿಸಿ ಜಮ್ಮು -ಕಾಶ್ಮೀರದಲ್ಲಿ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಹಿಜ್ಬುಲ್ಲಾ ವಿರುದ್ಧದ ಹೋರಾಟದಲ್ಲಿ ಇಸ್ರೇಲ್ ದೊಡ್ಡ ಬೇಟೆ ಹಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ