Advertisment

ಲೆಬನಾನ್ ಮೇಲೆ ಇಸ್ರೇಲ್ ಭಯಂಕರ ದಾಳಿ; ನಿನ್ನೆ ಒಂದೇ ದಿನ 492 ಜನರು ಸಾವು

author-image
Ganesh
Updated On
ಲೆಬನಾನ್ ಮೇಲೆ ಇಸ್ರೇಲ್ ಭಯಂಕರ ದಾಳಿ; ನಿನ್ನೆ ಒಂದೇ ದಿನ 492 ಜನರು ಸಾವು
Advertisment
  • ಇಲ್ಲಿಯವರೆಗೆ ಮೃತರ ಸಂಖ್ಯೆ 2006ಕ್ಕೆ ಏರಿಕೆ ಆಗಿದೆ
  • ನಮ್ಮ ಹೋರಾಟ ಲೆಬನಾನ್ ಜನರ ವಿರುದ್ಧ ಅಲ್ಲ ಎಂದ ನೆತನ್ಯಾಹು
  • ಇಸ್ರೇಲ್​​ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ

ಹೆಜ್ಬೊಲ್ಲಾ ಉಗ್ರರ ವಿರುದ್ಧ ಸಮರ ಸಾರಿರುವ ಇಸ್ರೇಲ್ ಮತ್ತೆ ಲೆಬನಾನ್​ ಮೇಲೆ ದಾಳಿ ನಡೆಸಿದೆ. ಲೆಬನಾನ್‌ನ ರಾಜಧಾನಿ ಬೈರುತ್​ ಪ್ರದೇಶವನ್ನು ಇಸ್ರೇಲ್ ಗುರಿಯಾಗಿಸಿ ಹೊರಟಿದೆ. ನಿನ್ನೆ ಭಾರೀ ದೊಡ್ಡ ಮಟ್ಟದಲ್ಲಿ ವೈಮಾನಿಕ ದಾಳಿ ನಡೆಸಿದ್ದು, ಪರಿಣಾಮ 492 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

Advertisment

ದಕ್ಷಿಣ ಮತ್ತು ಪೂರ್ವ ಲೆಬನಾನ್‌ನಲ್ಲಿ 300ಕ್ಕೂ ಹೆಚ್ಚು ಹೆಜ್ಬೊಲ್ಲಾ (Hezbollah) ಉಗ್ರರ ಕೇಂದ್ರವನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಹೆಜ್ಬೊಲ್ಲಾ ಸುಮಾರು 200 ರಾಕೆಟ್​ಗಳನ್ನು ಉಡಾಯಿಸಿದೆ. ದಕ್ಷಿಣ ಲೆಬನಾನ್ ಮತ್ತು ಬೆಕಾ ಕಣಿವೆಯಲ್ಲಿ ದಾಳಿಗಳು ಕೇಂದ್ರೀಕೃತವಾಗಿವೆ. ಇಲ್ಲಿಯವರೆಗೆ ಮೃತರ ಸಂಖ್ಯೆ ಸುಮಾರು 2006ಕ್ಕೆ ಏರಿಕೆ ಆಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಟೀಮ್ ಇಂಡಿಯಾ ಗೆಲುವಿಗೆ ಮುಖ್ಯ ಕಾರಣ ರಿವೀಲ್; ತೆರೆ ಹಿಂದಿನ ಈ ವ್ಯಕ್ತಿಗೆ ಗೌರವ ಸಿಗಬೇಕು

publive-image

ಇಸ್ರೇಲ್ ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ವಿರುದ್ಧ ಮಿಲಿಟರಿ ಕ್ರಮ ತೆಗೆದುಕೊಳ್ತಿರುವುದಾಗಿ ಪ್ರಧಾನಿ ನೆತನ್ಯಾಹು ಹೇಳಿದ್ದಾರೆ. ಲೆಬನಾನ್​​ನ ಸಾಮಾನ್ಯ ಜನರು ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಮನವಿಯನ್ನು ಗಂಭೀರವಾಗಿ ಪರಿಗಣಿಸುವಂತೆ ಕೇಳಿಕೊಂಡಿದ್ದಾರೆ. ಇಸ್ರೇಲ್‌ನ ಹೋರಾಟ ನಿಮ್ಮ ವಿರುದ್ಧ ಅಲ್ಲ, ಅದು ಹೆಜ್ಬೊಲ್ಲಾ ವಿರುದ್ಧ ಎಂದು ನೆತನ್ಯಾಹು ಲೆಬನಾನ್ ಜನರಿಗೆ ತಿಳಿಸಿದ್ದಾರೆ.

Advertisment

ಇಸ್ರೇಲ್ ಗುರಿ ಲೆಬನಾನ್‌ನ ರಾಜಧಾನಿಯಾಗಿದೆ. ದಕ್ಷಿಣ ಲೆಬನಾನ್‌ನಿಂದ ಕನಿಷ್ಠ 10 ಸಾವಿರ ಜನರು ಪಲಾಯನ ಮಾಡುತ್ತಿದ್ದಾರೆ. ಇಸ್ರೇಲ್‌ನಲ್ಲಿ ಒಂದು ವಾರ ತುರ್ತು ಪರಿಸ್ಥಿತಿಯನ್ನು ಸಹ ಘೋಷಿಸಲಾಗಿದೆ. ಮಿಲಿಟರಿ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 30ರವರೆಗೆ ತುರ್ತು ಪರಿಸ್ಥಿತಿಯನ್ನು ಹೇರಿದ್ದಾರೆ.

ಇದನ್ನೂ ಓದಿ:ಹಿಜಬುಲ್​ನ ಟಾಪ್ ಕಮಾಂಡರ್​ನ ಕಥೆ ಮುಗಿಸಿದ ಇಸ್ರೇಲ್ ! ಯಾರು ಈ ಇಬ್ರಾಹಿಮ್ ಅಕಿಲ್​..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment