ಬಾಂಗ್ಲಾ ಎದುರು ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ
ಜೈಸ್ವಾಲ್ ಒನ್ ಹ್ಯಾಂಡೆಡ್ ಕ್ಯಾಚ್ಗೆ ಝಾಕಿರ್ ಸ್ಟನ್..!
ರಾಹುಲ್ ಫೆಂಟಾಸ್ಟಿಕ್ ಕ್ಯಾಚ್ಗೆ ರಹೀಮ್ ಸೈಲೆಂಟ್
ಟೀಮ್ ಇಂಡಿಯಾ. ವಿಶ್ವ ಕ್ರಿಕೆಟ್ನ ಅಧಿಪತಿ.. ಮೂರು ಫಾರ್ಮೆಟ್ನಲ್ಲಿ ಅದ್ಭುತ ಪ್ರದರ್ಶನವನ್ನೇ ನೀಡ್ತಾ ಮುನ್ನಡೆಯುತ್ತಿದೆ. ಆದ್ರೂ, ಒಂದು ವೀಕ್ನೆಸ್ ಟೀಮ್ ಇಂಡಿಯಾವನ್ನ ಕಾಡ್ತಾನೇ ಇತ್ತು. ಬಾಂಗ್ಲಾ ಎದುರಿನ ಮೊದಲ ಟೆಸ್ಟ್ ಸರಣಿಯಲ್ಲಿ ಆ ಕೊರಗು ನೀಗಿದೆ. ಟೀಮ್ ಇಂಡಿಯಾ ಗೆಲುವಿನ ಹಿಂದಿನ ಮುಖ್ಯ ಕಾರಣವೂ ಅದೇ ಆಗಿದೆ.
ಕ್ಯಾಚಸ್ ವಿನ್ ಮ್ಯಾಚಸ್. ಕ್ರಿಕೆಟ್ ಲೋಕದ ಫೇಮಸ್ ಮಾತಿದು. ಅದೆಷ್ಟೋ ಪಂದ್ಯಗಳಲ್ಲಿ ಸಂಘಟಿತ ಹೋರಾಟ ನಡೆಸೋ ಟೀಮ್ಸ್, ಕ್ಯಾಚ್ ಕೈ ಬಿಟ್ಟು, ಪಂದ್ಯಗಳನ್ನ ಸೋತ ಅದೆಷ್ಟೋ ಎಕ್ಸಾಂಪಲ್ಗಳಿವೆ. ಈ ವಿಚಾರದಲ್ಲಿ ಟೀಮ್ ಇಂಡಿಯಾ ಕೂಡ ಹೊರತಾಗಿಲ್ಲ.
ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್ನ ಅಧಿಪತಿಯಾಗಿದ್ರೂ, ಫೀಲ್ಡಿಂಗ್ ವಿಕ್ನೇಸ್ನಿಂದ ಪದೇ ಪದೇ ಮುಜುಗರಕ್ಕೀಡು ಮಾಡ್ತಿತ್ತು. ವಿಶ್ವದ ಗ್ರೇಟ್ ಫೀಲ್ಡರ್ಗಳನ್ನೇ ಹೊಂದಿದ್ರೂ, ಆನ್ಫೀಲ್ಡ್ನಲ್ಲಿ ಬಟರ್ ಫಿಂಗರ್ ಫೀಲ್ಡರ್ಗಳು ಅನ್ನೋ ಟೀಕೆಗೂ ಗುರಿಯಾಗಿದ್ದಿದೆ. ಇದೀಗ ಆ ಎಲ್ಲದಕ್ಕೂ ಬಾಂಗ್ಲಾ ಸರಣಿ ಉತ್ತರ ನೀಡಿದೆ. ಟೀಮ್ ಇಂಡಿಯಾದ ಫೀಲ್ಡಿಂಗ್ ಸ್ಟ್ಯಾಂಡರ್ಡ್ ಬಗ್ಗೆ ಅಂದು ಟೀಕಿಸಿದವರು ಇದೀಗ ಬಹುಪರಾಕ್ ಅಂತಿದ್ದಾರೆ.
ಇದನ್ನೂ ಓದಿ:ನೆಚ್ಚಿನ ಆಟಗಾರನ ನೋಡಲು ಸ್ಕೂಲ್ಗೆ ಬಂಕ್ ಹಾಕಿ ಟೀಚರ್ ಕೈಯಲ್ಲಿ ಸಿಕ್ಕಿಬಿದ್ದಿದ್ದ ರೋಹಿತ್ ಶರ್ಮಾ
ಜೈಸ್ವಾಲ್ ಒನ್ ಹ್ಯಾಂಡೆಡ್ ಕ್ಯಾಚ್ಗೆ ಝಾಕಿರ್ ಸ್ಟನ್
2ನೇ ಇನ್ನಿಂಗ್ಸ್ನಲ್ಲಿ ಆರಂಭಿಕ ಝಾಕಿರ್ ಹುಸೇನ್ ಆ್ಯಂಡ್ ಶಾದ್ಮನ್ ಇಸ್ಲಾಂ ಬಾಂಗ್ಲಾಗೆ ಸಾಲಿಡ್ ಓಪನಿಂಗ್ ನೀಡಿದ್ದರು. ಟೀಮ್ ಇಂಡಿಯಾ ಬೌಲರ್ನ ಕಾಡಿದ್ರು. 17ನೇ ಓವರ್ನಲ್ಲಿ ಬೂಮ್ರಾ ಎಸೆದ ಆಫ್ ಸ್ಟಂಪ್ ಲೆಂಥ್ ಎಸೆತವನ್ನು ಡ್ರೈವ್ ಮಾಡಲು ಝಾಕಿರ್ ಮುಂದಾದ್ರು. ಆಗ ಬ್ಯಾಟ್ಗೆ ಸವರಿದ ಚೆಂಡು ಥರ್ಡ್ ಮ್ಯಾನ್ನತ್ತ ಹಾರಿತು. ಆಗ ಸ್ಲಿಪ್ನಲ್ಲಿ ಅಲರ್ಟ್ ಆಗಿದ್ದ ಜೈಸ್ವಾಲ್, 0.64 ಮಿಲಿ ಸೆಕೆಂಡ್ನಲ್ಲೇ ಡೈವ್ ಹೊಡೆದು ಅದನ್ನ ಕ್ಯಾಚ್ ಆಗಿ ಪರಿವರ್ತಿಸಿದ್ರು. ಜೈಸ್ವಾಲ್ ಎಷ್ಟು ಆ್ಯಕ್ಟೀವ್ ಅನ್ನೋಕೆ ಶಕಿಬ್ ಅಲ್ ಹಸನ್ ಮತ್ತೊಂದು ಕ್ಯಾಚ್ ಕೂಡ ಬೆಸ್ಟ್ ಎಕ್ಸಾಂಪಲ್. ಶಕೀಬ್ ಬ್ಯಾಟಿಂಗ್ ವೇಳೆ ಗಲ್ಲಿಯಲ್ಲಿ ಫೀಲ್ಡಿಂಗ್ ಮಾಡ್ತಿದ್ದ ಯಶಸ್ವಿ ಜೈಸ್ವಾಲ್, ಎಡ್ಜ್ ಆದ ಚೆಂಡನ್ನ ಕ್ಷಣಾರ್ದದಲ್ಲೇ ತೆಕ್ಕೆಗೆ ತೆಗೆದುಕೊಂಡರು.
ರಾಹುಲ್ ಫೆಂಟಾಸ್ಟಿಕ್ ಕ್ಯಾಚ್
2ನೇ ಇನ್ನಿಂಗ್ಸ್ನ 34ನೇ ಓವರ್ನಲ್ಲಿ ಕೆ.ಎಲ್.ರಾಹುಲ್ ಹಿಡಿದ ಕ್ಯಾಚ್ ನಿಜಕ್ಕೂ ಫೆಂಟಾಸ್ಟಿಕ್. ಆರ್.ಅಶ್ವಿನ್ರ ಎಸೆತವನ್ನು ಬಾಂಗ್ಲಾ ಬ್ಯಾಟರ್ ಮುಶ್ಫಿಕರ್ ರಹೀಮ್ ಮಿಡ್ ಆನ್ ಕಡೆಗೆ ಬಾರಿಸಿದ್ರು. ಅಲ್ಲೇ ಫೀಲ್ಡಿಂಗ್ ನಡೆಸ್ತಿದ್ದ ಕೆ.ಎಲ್.ರಾಹುಲ್, ಲೋವರ್ ಕ್ಯಾಚ್ನ ಮುಂದಕ್ಕೆ ಡೈವ್ ಹೊಡೆದು ಹಿಡಿದ್ರು.
ಗಿಲ್ ಸ್ಟನ್ನಿಂಗ್ ಕ್ಯಾಚ್!
ಬಾಂಗ್ಲಾ ಓಪನರ್ ಶಾದ್ಮನ್ ಇಸ್ಲಾಂ ಬಿಗ್ ಇನ್ನಿಂಗ್ಸ್ ಕಟ್ಟುವ ಲೆಕ್ಕಾಚಾರದಲ್ಲಿದ್ರು. ಈ ವೇಳೆ 22ನೇ ಓವರ್ನಲ್ಲಿ ಆಶ್ವಿನ್ ಎಸೆತವನ್ನು ಶಾದ್ಮನ್ ಇಸ್ಲಾಂ ಫ್ಲಿಕ್ ಮಾಡಿದ್ರು. ಈ ವೇಳೆ ಶಾರ್ಟ್ ಮಿಡ್ ವಿಕೆಟ್ನಲ್ಲಿ ಫೀಲ್ಡಿಂಗ್ ಮಾಡ್ತಿದ್ದ ಗಿಲ್, ಶಾರ್ಪ್ ಡೈವ್ ಮಾಡಿ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ:KL ರಾಹುಲ್ಗೆ ರವಿ ಶಾಸ್ತ್ರಿ ವಾರ್ನಿಂಗ್; ಈ ಬಾರಿ ಕನ್ನಡಿಗ ಮಾಡಿದ ತಪ್ಪೇನು?
ಬೂಮ್ರಾ ರನ್ನಿಂಗ್ ಕ್ಯಾಚ್ಗೆ ಬಹುಪರಾಕ್
2ನೇ ಇನ್ನಿಂಗ್ಸ್ನ 59ನೇ ಓವರ್.. 82 ರನ್ ಗಳಿಸಿದ್ದ ಬಾಂಗ್ಲಾ ಕ್ಯಾಪ್ಟನ್ ಶ್ಯಾಂಟೋ ಶತಕದತ್ತ ಮುನ್ನುಗ್ಗುತ್ತಿದ್ದರು. ಜಡೇಜಾ ಎಸೆದ 59ನೇ ಓವರ್ನಲ್ಲಿ ಶ್ಯಾಂಟೋ ಭಾರೀ ಹೊಡೆತಕ್ಕೆ ಕೈಹಾಕಿದರು. ಈ ವೇಳೆ ಮಿಡ್ ಆನ್ನಲ್ಲೇ ಫಿಲ್ಡಿಂಗ್ ಮಾಡ್ತಿದ್ದ ಬೂಮ್ರಾ, ಬರೋಬ್ಬರಿ 15.3 ಮೀಟರ್ ಹಿಂಬದಿಯಾಗಿ ಓಡಿ ಅದ್ಭುತ ಕ್ಯಾಚ್ ಹಿಡಿದರು. 2ನೇ ಇನ್ನಿಂಗ್ಸ್ನ ಈ 4 ಕ್ಯಾಚ್ಗಳು ಮಾತ್ರವೇ ಅಲ್ಲ. ಮೊದಲ ಇನ್ನಿಂಗ್ಸ್ನಲ್ಲಿ ಕೆ.ಎಲ್.ರಾಹುಲ್, ಸ್ಲಿಪ್ನಲ್ಲಿ ಹಿಡಿದ ರಹೀಮ್ ಕ್ಯಾಚ್ ಕೂಡ ಸಖತ್. ಇದೆಲ್ಲದರ ಕ್ರೆಡಿಟ್ ಫೀಲ್ಡಿಂಗ್ ಕೋಚ್ ಟಿ ದಿಲೀಪ್ಗೆ ಸೇರಬೇಕು. ಟೆಸ್ಟ್ ಆರಂಭಕ್ಕೂ ಮುನ್ನ ಆಟಗಾರರ ಸ್ಪೆಷಲ್ ಫೀಲ್ಡಿಂಗ್ ಡ್ರಿಲ್ ಮಾಡಿಸಿದ್ದ ಟಿ.ದಿಲೀಪ್ ಶ್ರಮಕ್ಕೆ ಮೊದಲ ಟೆಸ್ಟ್ನಲ್ಲಿ ರಿಸಲ್ಟ್ ಸಿಕ್ಕಿದೆ. ಹೈ ಸ್ಟ್ಯಾಂಡರ್ಡ್ ಫೀಲ್ಡಿಂಗ್ ಹೀಗೆ ಮುಂದುವರಿಯಲಿ ಅನ್ನೋದೇ ಎಲ್ಲರ ಆಶಯ.
ಇದನ್ನೂ ಓದಿ:ಡೇಂಜರ್ ಝೋನ್ ತಲುಪಿದ KL ರಾಹುಲ್; ಗೇಟ್ ಪಾಸ್ ಕೊಡಲು ನಿರ್ಧರಿಸಿತಾ ಬಿಸಿಸಿಐ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್