newsfirstkannada.com

×

KL ರಾಹುಲ್​ಗೆ ರವಿ ಶಾಸ್ತ್ರಿ ವಾರ್ನಿಂಗ್; ಈ ಬಾರಿ ಕನ್ನಡಿಗ ಮಾಡಿದ ತಪ್ಪೇನು?

Share :

Published September 23, 2024 at 12:56pm

    ಬಾಂಗ್ಲಾ ಸರಣಿಯಲ್ಲಿ ರಾಹುಲ್​​ ಹಳೇ ಖದರ್​ ಮಾಯ

    ರಾಹುಲ್​ಗೆ ಅವಕಾಶಕ್ಕಾಗಿ ಇರೋದು ಕೊನೆಯ ಆಟ

    ರಾಹುಲ್​ ವೈಫಲ್ಯಕ್ಕೆ ಸ್ವಯಂಕೃತ ಮಿಸ್ಟೆಕ್ಸ್​ ಕಾರಣ!

ಕೆಎಲ್ ರಾಹುಲ್​​​​​​​​​​​​​​. ಬೊಂಬಾಟ್ ಪ್ರದರ್ಶನಿಂದಲೇ ಹೆಚ್ಚು ಸೌಂಡ್ ಮಾಡಿದ ಹೆಸರಿದು. ಆದ್ರೀಗ ರಾಹುಲ್​​ ಹೆಸ್ರು ಕಳಪೆ ಆಟದಿಂದಲೇ ಸುದ್ದಿಯಲ್ಲಿದೆ. ಪ್ರತಿಭಾನ್ವಿತ ಕ್ರಿಕೆಟರ್​​​​​​ಗೆ ಇದ್ದಕ್ಕಿದ್ದಂತೆ ಏನಾಯ್ತು? ಅನ್ನೋ ಪ್ರಶ್ನೆ ಹುಟ್ಟುವಂತಾಗಿದೆ. ಇದ್ರ ನಡುವೆ ಕರ್ನಾಟಕದ ಲಯನ್​​​ಗೆ ಮಾಜಿ ಕೋಚ್​​​​​ ವಾರ್ನಿಂಗ್ ಕೊಟ್ಟಿದ್ದಾರೆ.

ರಾಹುಲ್​ಗೆ ರವಿಶಾಸ್ತ್ರಿ ವಾರ್ನಿಂಗ್​​​​​..!
ಕೆ.ಎಲ್ ರಾಹುಲ್​​. ಟ್ಯಾಲೆಂಟ್​ ಆಫ್​​ ಬಂಡಲ್​ ಕ್ರಿಕೆಟರ್​​. ಟೆಕ್ನಿಕಲಿ ಸಖತ್​​​​ ಸ್ಟ್ರಾಂಗ್. ಇವರ ಕ್ಲಾಸಿಕ್​​​​​ ಶಾಟ್ಸ್​​​​​​ ನೋಡಲು ಎರಡು ಕಣ್ಣುಗಳು ಸಾಲದು. ಕನ್ನಡದ ಲಯನ್​​​ ಕ್ಲಾಸ್ ಆಟಕ್ಕೂ ಸೈ, ಮಾಸ್​ ಆಟಕ್ಕೂ ಸೈ. ಇಂತಹ ಸೂಪರ್ ಸ್ಟಾರ್ ಕಳಪೆ ಫಾರ್ಮ್​ನ ಸುಳಿಗೆ ಸಿಲುಕಿ ಟಿ20 ತಂಡದಿಂದ ಹೊರಬಿದ್ದಿದ್ದಾರೆ. ಇದೀಗ ರೆಡ್​​ಬಾಲ್​ ಕ್ರಿಕೆಟ್​​ ಟೆಸ್ಟ್​​ನಲ್ಲೂ ತನ್ನ ಸ್ಥಾನಕ್ಕೆ ರಾಹುಲ್​ ಕುತ್ತು ತಂದುಕೊಳ್ತಾರಾ ಅನ್ನೋ ಆತಂಕ ಹುಟ್ಟಿದೆ.

ಇದನ್ನೂ ಓದಿ:ಡೇಂಜರ್ ಝೋನ್​​ ತಲುಪಿದ KL ರಾಹುಲ್​; ಗೇಟ್ ಪಾಸ್​ ಕೊಡಲು ನಿರ್ಧರಿಸಿತಾ ಬಿಸಿಸಿಐ

ಇಂಜುರಿ ಬಳಿಕ ತಂಡಕ್ಕೆ ಮರಳಿದ ರಾಹುಲ್​​ ಬಾಂಗ್ಲಾ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ. ಮೊದಲ ಇನ್ನಿಂಗ್ಸ್​​​ 16 ಹಾಗೂ ಎರಡನೇ ಇನ್ನಿಂಗ್ಸ್​ನಲ್ಲಿ ಅಜೇಯ 22 ರನ್ ಗಳಿಸಿದ್ರು. ಮೊದಲ ಇನ್ನಿಂಗ್ಸ್​ನಲ್ಲಿ ಸ್ಲೋ ಬ್ಯಾಟಿಂಗ್ ಮಾಡಿ ಟೀಕೆಗೂ ಗುರಿಯಾಗಿದ್ರು. ಇದೀಗ ಇದೇ ವಿಚಾರವಾಗಿ ಸದ್ಯ ಕನ್ನಡಿಗನಿಗೆ ಟೀಮ್ ಇಂಡಿಯಾ ಮಾಜಿ ಹೆಡ್​​ ಕೋಚ್​​ ರವಿ ಶಾಸ್ತ್ರಿ ವಾರ್ನಿಂಗ್ ಕೊಟ್ಟಿದ್ದಾರೆ.

ರಾಹುಲ್​ ಪ್ರತಿಭೆ ಅರಿಯಬೇಕು
ಕೆಎಲ್ ರಾಹುಲ್ ಸಾಕಷ್ಟು ಪ್ರತಿಭೆ ಹೊಂದಿದ್ದಾರೆ ಅನ್ನೋದನ್ನ ಅರ್ಥಮಾಡಿಕೊಳ್ಳಬೇಕಿದೆ. ಅದನ್ನ ಅರಿತುಕೊಂಡು ಆ ಶೈಲಿಯ ಮನಸ್ಥಿತಿ ಮತ್ತು ಆಲೋಚನೆಯೊಂದಿಗೆ ಹೊರಬರಬೇಕಿದೆ. ಆ ದಿನ, ಅವರು ವಿಭಿನ್ನ ಆಟಗಾರರಾಗುತ್ತಾರೆ-ರವಿ ಶಾಸ್ತ್ರಿ, ಮಾಜಿ ಕೋಚ್​
ಮಾಜಿ ಹೆಡ್​ಕೋಚ್​ ರವಿಶಾಸ್ತ್ರಿ ಹೇಳಿದ ಮಾತು ನೂರರಷ್ಟು ಸತ್ಯ. ರಾಹುಲ್​ ವೆಲ್​ ಟ್ಯಾಲೆಂಟ್​ ಕ್ರಿಕೆಟರ್​. ಅದನ್ನ ಕನ್ನಡಿಗ ಅರ್ಥಮಾಡಿಕೊಳ್ಳಬೇಕಿದೆ. ಅತಿಯಾದ ಸ್ಲೋ ಬ್ಯಾಟಿಂಗ್​ಗೆ ಕಡಿವಾಣ ಹಾಕಿ ಅಗ್ರೆಸ್ಸಿವ್​ ಮೈಂಡ್​​ಸೆಟ್​ನಲ್ಲಿ ಬೀಸಬೇಕು. ಆಗಲಷ್ಟೇ ಬಿಗ್ ಇನ್ನಿಂಗ್ಸ್ ಕಟ್ಟಿ ಟೀಕಾಕಾರರ ಬಾಯಿ ಮುಚ್ಚಿಸಬಹುದು.

ಸ್ಲಾಟ್ ಬದಲಾವಣೆ ಕಾರಣ ಇಲ್ಲಿದೆ
ರಾಹುಲ್​ ಬ್ಯಾಟ್​ನಲ್ಲಿ ಹಿಂದಿನ ಹಳೇ ಖದರ್ ಕಾಣಿಸ್ತಿಲ್ಲ. ಇದಕ್ಕೆ ಸ್ಲೋ ಬ್ಯಾಟಿಂಗ್​​ ಕಡೆ ಎಲ್ಲರೂ ಬೊಟ್ಟು ಮಾಡ್ತಿದ್ದಾರೆ. ಈ ಸ್ಟ್ರಗಲ್​ಗೆ ರಾಹುಲ್​ ಅವರಷ್ಟೇ ಕಾರಣ ಅಲ್ಲ, ಟೀಮ್ ಮ್ಯಾನೇಮೆಂಟ್​​​​​ ಕೂಡ ಹೊಣೆ. ಯಾಕಂದ್ರೆ ಕಳೆದ 9 ವರ್ಷಗಳಲ್ಲಿ ರಾಹುಲ್​​ ಐದು ಕ್ರಮಾಂಕದಲ್ಲಿ ಆಡಿದ್ದಾರೆ. ಎಲ್ಲಾ ಆಟಗಾರರಿಗೂ ಫಿಕ್ಸ್ ಸ್ಲಾಟ್ ಅನ್ನೋದಿದೆ. ಆದ್ರೆ ರಾಹುಲ್​​​​ಗೆ ಮಾತ್ರ ಆ ಭಾಗ್ಯ ಇಲ್ಲ. ಪದೇ ಪದೆ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಅವರಲ್ಲಿ ಅಭದ್ರತೆ ಮೂಡಿಸಿದೆ. ಇದೇ ಒತ್ತಡದಿಂದಾಗಿ ಅವರು ನೈಜ ಪ್ರದರ್ಶನ ನೀಡುವಲ್ಲಿ ಎಡವುತ್ತಿದ್ದಾರೆ.

ಇದನ್ನೂ ಓದಿ: ಅಂದು.. ಟೀಂ ಇಂಡಿಯಾದ ಈ ವ್ಯಕ್ತಿಗಾಗಿ ಧೋನಿ ಒಂದು ತಿಂಗಳ ಮಾಂಸ ಸೇವನೆ ಬಿಟ್ಟಿದ್ದರು..!

ಟೆಸ್ಟ್​ ಕ್ರಿಕೆಟ್​​ನಲ್ಲಿ ರಾಹುಲ್
ಕೆ.ಎಲ್​​ ರಾಹುಲ್​ ತಮ್ಮ ಕರಿಯರ್​ನಲ್ಲಿ 41 ಬಾರಿ 1ನೇ ಕ್ರಮಾಂಕದಲ್ಲಿ ಆಡಿದ್ದಾರೆ. ಎರಡನೇ ಸ್ಲಾಟ್​ನಲ್ಲಿ 34 ಬಾರಿ ಹಾಗೂ 3ನೇ ಸ್ಲಾಟ್​​ನಲ್ಲಿ 5 ಬಾರಿ ಕಣಕ್ಕಿಳಿದಿದ್ದಾರೆ. ಇನ್ನು 4ನೇ ಸ್ಲಾಟ್​ನಲ್ಲಿ 2 ಬಾರಿ ಆಡಿದ್ರೆ 6ನೇ ಕ್ರಮಾಂಕದಲ್ಲಿ 6 ಬಾರಿ ಆಡಿದ್ದಾರೆ.

ಕಾನ್ಪುರ ‘ಟೆಸ್ಟ್’​ ಕೊನೆ ಚಾನ್ಸ್​​​?
ರಾಹುಲ್ ಟೀಮ್ ಇಂಡಿಯಾದ ಆಪತ್ಬಾಂಧವ. ಸಂಕಷ್ಟದಲ್ಲಿ ವೀರ ಸೇನಾನಿಯಂತೆ ಹೋರಾಡಿ ಅದೆಷ್ಟೋ ಪಂದ್ಯಗಳನ್ನ ಭಾರತಕ್ಕೆ ಗೆಲ್ಲಿಸಿಕೊಟ್ಟಿದ್ದಾರೆ. ಆದ್ರೀಗ ಅದೇ ನಂಬಿಗಸ್ಥ ಬ್ಯಾಟರ್ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಚೆಪಾಕ್ ಟೆಸ್ಟ್​ನಲ್ಲಿ ಬಿಗ್​ ಇನ್ನಿಂಗ್ಸ್ ಕಟ್ಟದೇ ಟೀಮ್​ ಮ್ಯಾನೇಜ್​ಮೆಂಟ್​ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಶುಕ್ರವಾರದಿಂದ ಆರಂಭಗೊಳ್ಳುವ ಕಾನ್ಪುರ ಟೆಸ್ಟ್​ ಕೊನೆ ಚಾನ್ಸ್ ಆಗುವ ಸಾಧ್ಯತೆ ಇದೆ. ಹಾಗಾಗಿ ಎರಡನೇ ಟೆಸ್ಟ್​ನಲ್ಲಿ ರನ್ ಭರಾಟೆ ನಡೆಸುವ ಒತ್ತಡಕ್ಕೆ ಸಿಲುಕಿದ್ದಾರೆ.

ಕೆ.ಎಲ್​​ ರಾಹುಲ್ ತಮ್ಮ ಕರಿಯರ್​ನಲ್ಲಿ ಹಿಂದೆ ಅದೆಷ್ಟೋ ಬಾರಿ ಟೀಕೆ ಟಿಪ್ಪಣಿಗಳನ್ನ ಎದುರಿಸಿದ್ದಾರೆ. ಬ್ಯಾಟ್​ನಿಂದ ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ ಕೂಡ. ಕಾನ್ಪುರ ಟೆಸ್ಟ್​​ ಕನ್ನಡದ ಲಯನ್​ಗೆ ಅಗ್ನಿಪರೀಕ್ಷೆಯ ಕಣವಾಗಿದ್ದು, ಅದ್ರಲ್ಲಿ ಗೆದ್ದು ಬೀಗಲಿ ಅನ್ನೋದೇ ಎಲ್ಲಾ ಕನ್ನಡಿಗರ ಆಶಯವಾಗಿದೆ.

ಇದನ್ನೂ ಓದಿ:ಗುರು ಧೋನಿಗೆ ಚಮಕ್ ಕೊಟ್ಟ ಪಂತ್; ಗಿಲ್​​ ಕ್ರಿಸ್ಟ್​ ಕೂಡ ಶಾಕ್ ಆಗಿದ್ದಾರೆ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

KL ರಾಹುಲ್​ಗೆ ರವಿ ಶಾಸ್ತ್ರಿ ವಾರ್ನಿಂಗ್; ಈ ಬಾರಿ ಕನ್ನಡಿಗ ಮಾಡಿದ ತಪ್ಪೇನು?

https://newsfirstlive.com/wp-content/uploads/2024/09/KL-RAHUL-2.jpg

Load More