newsfirstkannada.com

×

ಡೇಂಜರ್ ಝೋನ್​​ ತಲುಪಿದ KL ರಾಹುಲ್​; ಗೇಟ್ ಪಾಸ್​ ಕೊಡಲು ನಿರ್ಧರಿಸಿತಾ ಬಿಸಿಸಿಐ

Share :

Published September 21, 2024 at 9:40am

Update September 21, 2024 at 12:41pm

    ಮೊದಲ ಇನ್ನಿಂಗ್ಸ್​ನಲ್ಲಿ ಕೆ.ಎಲ್.ರಾಹುಲ್ ಫೇಲ್

    ರಾಹುಲ್ ಟುಕ್​.. ಟುಕ್ ಇನ್ನಿಂಗ್ಸ್​ಗೆ ಟೀಕೆ..!

    3 ವರ್ಷ.. 17 ಇನ್ನಿಂಗ್ಸ್​.. 1 ಶತಕ.. 2 ಫಿಫ್ಟಿ.. 24 ಸರಾಸರಿ

ಕೆ.ಎಲ್.ರಾಹುಲ್.. ಟೀಮ್ ಇಂಡಿಯಾದ ಕ್ಲಾಸ್ ಬ್ಯಾಟ್ಸ್​ಮನ್. ತನ್ನ ಸಾಲಿಡ್​ ಆಟದಿಂದ ಮೋಡಿ ಮಾಡಿದ್ದ ಈ ಕ್ಲಾಸ್​ ಹೀರೋ. ಈಗ ಫ್ಲಾಪ್​ ಹೀರೋ. ಟೀಕೆಗಳ ನಡುವೆ ಸ್ಥಾನಗಿಟ್ಟಿಸಿಕೊಂಡ ರಾಹುಲ್​, ಮತ್ತೆ ಫ್ಲಾಪ್​ ಶೋ ನೀಡಿದ್ದಾರೆ. ಒಂದು ಕಳಪೆಯಾಟದಿಂದ ತನ್ನ ಸ್ಥಾನಕ್ಕೆ ತಾವೇ ಕಂಟಕ ತಂದುಕೊಂಡಿದ್ದಾರೆ.

ಬಾಂಗ್ಲಾ ಎದುರಿನ ಮೊದಲ ಟೆಸ್ಟ್​, ಕರ್ನಾಟಕದ ಬ್ಯಾಟರ್​​ ಕೆ.ಎಲ್.ರಾಹುಲ್ ಮೋಸ್ಟ್ ಇಂಪಾರ್ಟೆಂಟ್ ಪಂದ್ಯವಾಗಿತ್ತು. ಈ ಟೆಸ್ಟ್​ನ ಪ್ಲೇಯಿಂಗ್​ ಇವೆಲೆನ್​​ ರಾಹುಲ್​ಗೆ ಸ್ಥಾನ ಸಿಕ್ಕಿದ್ದೇ ಅದೃಷ್ಟದಲ್ಲಿ. ಈ ಹಿಂದಿನ ಟೆಸ್ಟ್​ ಸರಣಿಯಲ್ಲಿ ಇಂಪ್ರೆಸ್ಸಿವ್​ ಪ್ರದರ್ಶನ ನೀಡಿದ್ದ ಸರ್ಫರಾಜ್​ನ ಡ್ರಾಪ್​ ಮಾಡಿ, ರಾಹುಲ್​ನ ಆಡಿಸಲಾಗಿತ್ತು. ರಾಹುಲ್​​ ಆ ಅವಕಾಶವನ್ನೂ ಕೈ ಚೆಲ್ಲಿದ್ರು.

ಇದನ್ನೂ ಓದಿ:ಬೂಮ್ರಾ ದಾಳಿಗೆ ಕುಸಿದು ಬಿದ್ದ ಬಾಂಗ್ಲಾ.. ಕೊಹ್ಲಿ, ರೋಹಿತ್ ಮೇಲೆ ಗಂಭೀರ್​ ಮತ್ತೆ ಕೆಂಗಣ್ಣು..!

ಟೀಮ್​ ಇಂಡಿಯಾ 96 ರನ್​​​ಗೆ 4 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಕ್ರೀಸ್​ಗೆ ಆಗಮಿಸಿದ ಕೆ.ಎಲ್.ರಾಹುಲ್​ ಮುಂದೆ ಬಿಗ್ ಇನ್ನಿಂಗ್ಸ್​ ಕಟ್ಟುವ ಜವಾಬ್ದಾರಿ ಇತ್ತು. ಎದುರಾಳಿಗಳ ಗೇಮ್​ ಪ್ಲಾನ್ಸ್​ಗೆ ಕೌಂಟರ್ ಸಹ ನೀಡದ ರಾಹುಲ್, 52 ಎಸೆತಗಳನ್ನ ಎದುರಿಸಿ ಗಳಿಸಿದ್ದು ಕೇವಲ 16 ರನ್​. ಈ ವೈಫಲ್ಯ​ ಕೆ.ಎಲ್.ರಾಹುಲ್, ಬ್ಯಾಟಿಂಗ್ ಶೈಲಿಯನ್ನ ಮಾತ್ರವೇ ಪ್ರಶ್ನೆ ಮಾಡ್ತಿಲ್ಲ. ಮಿಡಲ್ ಆರ್ಡರ್​ಗೆ ರಾಹುಲ್​​ನಂಥ ಆಟಗಾರ ಬೇಕಿದೆಯಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ರಾಹುಲ್​ ವೈಫಲ್ಯ ಒಂದು ಇನ್ನಿಂಗ್ಸ್​ನ ಕಥೆಯಲ್ಲ. ಕಳೆದ 3 ವರ್ಷದ ವ್ಯಥೆ.

3 ವರ್ಷದಿಂದ ರಾಹುಲ್ ಬ್ಯಾಟಿಂಗ್ ಅಧೋಗತಿ
2021ರ ಡಿಸೆಂಬರ್​ನಲ್ಲಿ ಸೆಂಚೂರಿಯನ್​​​ನಲ್ಲಿ ರಾಹುಲ್​ ಸೆಂಚೂರಿ ಸಿಡಿಸಿದ್ರು. ಈ ಶತಕದ ಇನ್ನಿಂಗ್ಸ್​ ಬಳಿಕ, ರಾಹುಲ್ ಸಾಲಿಡ್ ಕಮ್​​ಬ್ಯಾಕ್ ಮಾಡಿದ್ರು ಅಂತಾನೇ ಎಲ್ಲರೂ ಊಹಿಸಿದ್ರು. ಕೆ.ಎಲ್.ರಾಹುಲ್​​ರ ಕಳಪೆಯಾಟ ಶುರುವಾಗಿದ್ದೆ ಇಲ್ಲಿಂದ. 2022ಕ್ಕೆ ಅದ್ಯಾವ ಗಳಿಗೆಯಲ್ಲಿ ರಾಹುಲ್ ಕಾಲಿಟ್ರೋ ಏನೋ.. ಅವತ್ತಿನಿಂದ ರಾಹುಲ್​ ಬ್ಯಾಟಿಂಗ್ ನಿಜಕ್ಕೂ ಅಧೋಗತಿಗೆ ತಲುಪಿದೆ. ಅದು ಯಾವ ಮಟ್ಟಕ್ಕೆ ಅಂದ್ರೆ, 2021ರ ಡಿಸೆಂಬರ್​ನಲ್ಲಿ ಸೆಂಚೂರಿಯನ್​​ನಲ್ಲಿ ಶತಕ ಸಿಡಿಸಿದ್ದ ರಾಹುಲ್​​, ಮತ್ತೊಂದು ಸೆಂಚುರಿ ಸಿಡಿಸಿದ್ದು, 2023ರ ಡಿಸೆಂಬರ್​ನಲ್ಲಿ ಅದೇ ಸ್ಟೇಡಿಯಂನಲ್ಲಿ. ಈ 3 ವರ್ಷದ ಅವಧಿಯಲ್ಲಿ ಕೆ.ಎಲ್.ರಾಹುಲ್, ಬ್ಯಾಟ್​​ನಿಂದ ಬಂದಿರೋದು ಅದೊಂದೇ 1 ಶತಕ.

ಇದನ್ನೂ ಓದಿ:RCB ರಿಟೈನ್​ ಲಿಸ್ಟ್​ನಿಂದ ಸಿರಾಜ್​ ಔಟ್; ಟೀಂ ಇಂಡಿಯಾದ ಸ್ಟಾರ್ ಎಂಟ್ರಿ, ದಯಾಳ್ ಅಲ್ಲ..!

3 ವರ್ಷಗಳಿಂದ ಕೆ.ಎಲ್.ರಾಹುಲ್
ಕಳೆದ 3 ವರ್ಷಗಳಿಂದ 10 ಟೆಸ್ಟ್​ ಪಂದ್ಯಗಳ 17 ಇನ್ನಿಂಗ್ಸ್​ಗಳಲ್ಲಿ ಬ್ಯಾಟಿಂಗ್ ನಡೆಸಿರುವ ಕೆ.ಎಲ್.ರಾಹುಲ್, 412 ರನ್ ಗಳಿಸಿದ್ದಾರೆ. ಕೇವಲ 24.23ರ ಬ್ಯಾಟಿಂಗ್​ ಸರಾಸರಿ ಹೊಂದಿದ್ದಿ, 1 ಶತಕ, 2 ಅರ್ಧಶತಕ ಸಿಡಿಸಿದ್ದಾರೆ. ಹೈ-ಫ್ರೆಷರ್ ಮ್ಯಾಚ್​ಗಳಲ್ಲಿ ಕೆ.ಎಲ್.ರಾಹುಲ್, ಟೀಮ್ ಇಂಡಿಯಾ ಪಾಲಿನ ಸಂಕಷ್ಟಹರ ಅನ್ನೋ ಮಾತಿದೆ. ಆಮಾತು ನಿಜ ಕೂಡ. ವರ್ಷಕ್ಕೊಮ್ಮೆ ಮಾತ್ರವೇ ಉತ್ತಮ ಪರ್ಫಾಮೆನ್ಸ್ ನೀಡಿ ಉಳಿದ ದಿನ ನೀಡ್ತಿರೋ ಅಸ್ಥಿರ ಪರ್ಫಾಮೆನ್ಸ್ ಟೀಮ್ ಇಂಡಿಯಾಗೆ ಮಾರಕವಾಗಿದೆ. ಟೀಮ್ ಇಂಡಿಯಾ ಮಾತ್ರವಲ್ಲ. ಇದ್ರಿಂದ ಕೆ.ಎಲ್.ರಾಹುಲ್​​ ಕರಿಯರ್​ ಕೂಡ ಸಂಕಷ್ಟಕ್ಕೆ ಸಿಲುಕ್ತಾ ಇದೆ. ಈಗಾಗಲೇ ಸರ್ಫರಾಜ್, ಧೃವ್ ಜುರೇಲ್​ರಂಥ ಆಟಗಾರರು, ಮಿಡಲ್ ಆರ್ಡರ್​ನಲ್ಲಿ ಬ್ಯಾಟಿಂಗ್ ಮಾಡೋಕೆ ನಾವ್ ರೆಡಿ ಅನ್ನೋ ಸಂದೇಶವನ್ನು ರವಾನಿಸಿದ್ದಾರೆ. ಹೀಗಾಗಿ ಕೆ.ಎಲ್.ರಾಹುಲ್, ಮುಂದಿನ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡದಿದ್ರೆ ಕಷ್ಟ!

ಇದನ್ನೂ ಓದಿ:ಮೂರು ಅನ್​ಕ್ಯಾಪ್ಡ್​ ಸ್ಟಾರ್​ ಮೇಲೆ RCB ಕಣ್ಣು; ಅವರಲ್ಲಿ ಓರ್ವ ದುಲೀಪ್ ಟ್ರೋಫಿ ಹೀರೋ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಡೇಂಜರ್ ಝೋನ್​​ ತಲುಪಿದ KL ರಾಹುಲ್​; ಗೇಟ್ ಪಾಸ್​ ಕೊಡಲು ನಿರ್ಧರಿಸಿತಾ ಬಿಸಿಸಿಐ

https://newsfirstlive.com/wp-content/uploads/2024/09/KL-RAHUL-1.jpg

Load More