newsfirstkannada.com

×

ಬೂಮ್ರಾ ದಾಳಿಗೆ ಕುಸಿದು ಬಿದ್ದ ಬಾಂಗ್ಲಾ.. ಕೊಹ್ಲಿ, ರೋಹಿತ್ ಮೇಲೆ ಗಂಭೀರ್​ ಮತ್ತೆ ಕೆಂಗಣ್ಣು..!

Share :

Published September 21, 2024 at 8:48am

Update September 21, 2024 at 8:52am

    ಭಾರತ - ಬಾಂಗ್ಲಾದೇಶ ಮೊದಲ ಟೆಸ್ಟ್​ ಪಂದ್ಯ

    2ನೇ ದಿನದಾಟದಲ್ಲೂ ಟೀಮ್​ ಇಂಡಿಯಾ ಮೇಲುಗೈ

    ಶತಕದಂಚಿನಲ್ಲಿ ಎಡವಿದ ಜಡೇಜಾ, 376ಕ್ಕೆ ಆಲೌಟ್​​

ಚೆಪಾಕ್​ ಟೆಸ್ಟ್​ನ 2ನೇ ದಿನದಾಟದಲ್ಲೀ ಟೀಮ್​ ಇಂಡಿಯಾದ್ದೇ ದರ್ಬಾರ್​. ಭಾರತೀಯ ಬೌಲರ್​ಗಳ ಬೆಂಕಿ ದಾಳಿಗೆ ಬಾಂಗ್ಲಾ ಬ್ಯಾಟ್ಸ್​ಮನ್​ಗಳು ತತ್ತರಿಸಿ ಹೋದ್ರು. ಬಿರುಗಾಳಿಯಂತ ಎಸೆತಗಳಿಗೆ ಬೆಚ್ಚಿಬಿದ್ದ ಬಾಂಗ್ಲಾ ಜಸ್ಟ್​​ 47.1 ಓವರ್​​ಗಳಲ್ಲೇ, ಆಲೌಟ್​ ಆಯ್ತು.

6 ವಿಕೆಟ್​ ನಷ್ಟಕ್ಕೆ 339ರನ್​ಗಳೊಂದಿಗೆ ಟೀಮ್​ ಇಂಡಿಯಾ 2ನೇ ದಿನದಾಟ ಆರಂಭಿಸಿತು. ಶತಕದ ನಿರೀಕ್ಷೆ ಮೂಡಿಸಿದ್ದ ರವೀಂದ್ರ ಜಡೇಜಾ, ನಿರಾಸೆ ಮೂಡಿಸಿದ್ರು. ಜಡೇಜಾ 86 ರನ್​ಗಳಿಸಿ ಔಟಾದ್ರೆ, ಶತಕವೀರ ಅಶ್ವಿನ್​ 113 ರನ್​ಗಳಿಸಿ ನಿರ್ಗಮಿಸಿದ್ರು. 2ನೇ ದಿನದಾಟದಲ್ಲಿ ಕೇವಲ 37 ರನ್​ಗಳಿಸಿದ 376 ರನ್​ಗಳಿಗೆ ಆಲೌಟ್​ ಆಯ್ತು.

ಇದನ್ನೂ ಓದಿ:ಮೂರು ಅನ್​ಕ್ಯಾಪ್ಡ್​ ಸ್ಟಾರ್​ ಮೇಲೆ RCB ಕಣ್ಣು; ಅವರಲ್ಲಿ ಓರ್ವ ದುಲೀಪ್ ಟ್ರೋಫಿ ಹೀರೋ

ಟೀಮ್​ ಇಂಡಿಯಾ ವೇಗಿಗಳ ಆರ್ಭಟ
ಮೊದಲ ಇನ್ನಿಂಗ್ಸ್​ ಆರಂಭಿಸಿದ ಬಾಂಗ್ಲಾಗೆ ಮೊದಲ ಓವರ್​ನಲ್ಲೇ ಜಸ್​ಪ್ರಿತ್​ ಬೂಮ್ರಾ ಶಾಕ್ ನೀಡಿದ್ರು. ಬೂಮ್ರಾ ಬೊಂಬಾಟ್​ ಎಸೆತಕ್ಕೆ ಶದ್ಮಾನ್​​ ಇಸ್ಲಾಂ ಕ್ಲೀನ್​ ಬೋಲ್ಡ್​ ಆದ್ರು. 9ನೇ ಓವರ್​​ನಲ್ಲಿ ವೇಗಿ ಆಕಾಶ್​​ದೀಪ್​ ಬಾಂಗ್ಲಾಗೆ ಡಬಲ್​ ಶಾಕ್​ ನೀಡಿದ್ರು. ಬ್ಯಾಕ್​ ಟು ಬ್ಯಾಕ್​​ ಝಾಕೀರ್​ ಹಸನ್​, ಮೊಮಿನುಲ್​ ಹಖ್​​ ವಿಕೆಟ್​ ಉರುಳಿಸಿದ್ರು. ಕ್ಯಾಪ್ಟನ್​ ನಜ್ಮುಲ್​ ಹುಸೈನ್​ ಶಾಂಟೋ, ಮೊಹಮ್ಮದ್​ ಸಿರಾಜ್​ಗೆ ಬಲಿಯಾದ್ರೆ, ಅನುಭವಿ ಮುಷ್ಪಿಕರ್​ ರಹೀಮ್​ ಆಟಕ್ಕೆ ಬೂಮ್ರಾ ಫುಲ್​ ಸ್ಟಾಫ್​ ಇಟ್ರು. ಬಳಿಕ ಜೊತೆಯಾದ ಶಕಿಬ್​ ಆಲ್​ ಹಸನ್-ಲಿಟನ್​ ದಾಸ್ ಹಾಫ್​ ಸೆಂಚುರಿ ಜೊತೆಯಾಟವಾಡಿ​ ತಂಡಕ್ಕೆ ಚೇತರಿಕೆ ನೀಡೋ ಯತ್ನ ಮಾಡಿದ್ರು. ಈ ಪ್ರಯತ್ನಕ್ಕೆ ಜಡೇಜಾ ಫುಲ್​ ಸ್ಟಾಫ್ ಹಾಕಿದ್ರು. ಶಕೀಬ್​, ಲಿಟನ್​ ಇಬ್ಬರಿಗೂ ಗೇಟ್​ಪಾಸ್​ ನೀಡಿದರು.

ಒಂದೂವರೆ ಸೆಷನ್​, 47.1 ಓವರ್, ಬಾಂಗ್ಲಾ ಖೇಲ್​ ಖತಂ
ಬಳಿಕ ಕಣಕ್ಕಿಳಿದ ಹಸನ್​ ಮಹ್ಮದ್​, ಟಸ್ಕಿನ್​ ಅಹ್ಮಮ್​ ಬೂಮ್ರಾಗೆ ಸವಾಲಾಗಲೇ ಇಲ್ಲ. 47.1ನೇ ಓವರ್​​ನಲ್ಲಿ ನಿಹಿದ್​ ರಾಣಾನ ಕ್ಲೀನ್​ ಬೋಲ್ಡ್​ ಮಾಡಿದ ಸಿರಾಜ್​​ ಬಾಂಗ್ಲಾ ಆಟಕ್ಕೆ ಅಂತ್ಯ ಹಾಡಿದ್ರು. ಒಂದೂವರೆ ಸೆಷನ್​ನಲ್ಲಿ 47.1 ಓವರ್​ ಬ್ಯಾಟಿಂಗ್​ ಮಾಡಿದ ಬಾಂಗ್ಲಾ, 149 ರನ್​ಗಳಿಗೆ ಆಲೌಟ್​ ಆಯ್ತು.

2ನೇ ಇನ್ನಿಂಗ್ಸ್​ ಆರಂಭಿಸಿದ ಟೀಮ್​ ಇಂಡಿಯಾಗೆ ಶಾಕ್
227 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿದ ಟೀಮ್​ ಇಂಡಿಯಾಗೆ ಶಾಕ್​ ಎದುರಾಯ್ತು. ಟೀಮ್​ ಇಂಡಿಯಾ ಕ್ಯಾಪ್ಟನ್ ರೋಹಿತ್​ ಶರ್ಮಾ ಜಸ್ಟ್​ 5 ರನ್​ಗಳಿಸಿ ಪೆವಿಲಿಯನ್​ ಸೇರಿದ್ರು. 10 ರನ್​ಗಳಿಸಿದ್ದಾಗ ಯಶಸ್ವಿ ಜೈಸ್ವಾಲ್​ ವಿಕೆಟ್​ ಒಪ್ಪಿಸಿದ್ರು. ಉತ್ತಮ ಇನ್ನಿಂಗ್ಸ್​ ಕಟ್ಟೋ ಸೂಚನೆ ನೀಡಿದ ಕೊಹ್ಲಿ ಮತ್ತೊಮ್ಮೆ ಕೂಡ ಫ್ಲಾಪ್​ ಆದರು. ರನ್​ಗಳಿಸಿದ್ದಾಗ ಸ್ಪಿನ್ನರ್​ ಮೆಹದಿ ಹಸನ್ ಬಲೆಗೆ ಬಿದ್ರು.
5ನೇ ವಿಕೆಟ್​ಗೆ ಕ್ರಿಸ್​ನಲ್ಲಿ ಜೊತೆಯಾಗಿರುವ ಶುಭ್​ಮನ್ ಗಿಲ್​-ರಿಷಭ್​ ಪಂತ್​ ತಂಡಕ್ಕೆ ಆಸರೆಯಾಗಿದ್ದಾರೆ. 2ನೇ ಇನ್ನಿಂಗ್ಸ್​ನಲ್ಲಿ ಟೀಮ್​ ಇಂಡಿಯಾ 3 ವಿಕೆಟ್​ ನಷ್ಟಕ್ಕೆ 81 ರನ್​ಗಳಿಸಿದ್ದು, ಒಟ್ಟಾರೆ 308 ರನ್​ಗಳ ಮುನ್ನಡೆಯಲ್ಲಿದೆ. 33 ರನ್​ಗಳೊಂದಿಗೆ ಗಿಲ್​, 12 ರನ್​ಗಳೊಂದಿಗೆ ಪಂತ್​ ಇಂದಿಗೆ ಕ್ರಿಸ್​ ಕಾಯ್ದುಕೊಂಡಿದ್ದು, ಬಿಗ್​ಸ್ಕೋರ್​​ಗಳಿಸೋ ಲೆಕ್ಕಾಚಾರದಲ್ಲಿದ್ದಾರೆ. ಕೊಹ್ಲಿ, ರೋಹಿತ್ ಮೇಲೆ ಭರವಸೆ ಇಟ್ಟಿದ್ದ ಗಂಭೀರ್​ಗೆ ನಿರಾಸೆ ಆಗಿದೆ.

ಇದನ್ನೂ ಓದಿ:RCB ರಿಟೈನ್​ ಲಿಸ್ಟ್​ನಿಂದ ಸಿರಾಜ್​ ಔಟ್; ಟೀಂ ಇಂಡಿಯಾದ ಸ್ಟಾರ್ ಎಂಟ್ರಿ, ದಯಾಳ್ ಅಲ್ಲ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಬೂಮ್ರಾ ದಾಳಿಗೆ ಕುಸಿದು ಬಿದ್ದ ಬಾಂಗ್ಲಾ.. ಕೊಹ್ಲಿ, ರೋಹಿತ್ ಮೇಲೆ ಗಂಭೀರ್​ ಮತ್ತೆ ಕೆಂಗಣ್ಣು..!

https://newsfirstlive.com/wp-content/uploads/2024/09/GUATAM-GAMBHIR-1.jpg

Load More