ಐಪಿಎಲ್ ಮೆಗಾ ಹರಾಜಿನ ತಯಾರಿಯಲ್ಲಿ ಆರ್‌ಸಿಬಿ
ಮೂವರು ಆಟಗಾರರ ಮೇಲೆ ಕಣ್ಣಿಟ್ಟ ಬೆಂಗಳೂರ ತಂಡ
ಬಲಿಷ್ಠ ತಂಡ ಕಟ್ಟಲು ನಮ್ಮ ಆರ್‌ಸಿಬಿ ಮೆಗಾ ಪ್ಲಾನ್
ಐಪಿಎಲ್ ಹೊಸ ಸೀಸನ್‌ಗೂ ಮುನ್ನ ಮೆಗಾ ಹರಾಜು ನಡೆಯಲಿದೆ. ಮೆಗಾ ಹರಾಜಿನಲ್ಲಿ ಹೊಸ ಆಟಗಾರರ ಮೇಲೆ ಹಣದ ಸುರಿಮಳೆಯಾಗಬಹುದು. ಉತ್ತಮ ಯುವ ಆಟಗಾರರನ್ನು ತಮ್ಮ ತಂಡಗಳಲ್ಲಿ ಸೇರಿಸಿಕೊಳ್ಳಲು ಎಲ್ಲಾ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಇಂತಹ ಪರಿಸ್ಥಿತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಮೂವರು ಅನ್‌ಕ್ಯಾಪ್ಡ್ ಆಟಗಾರರ ಮೇಲೆ ಕಣ್ಣಿಟ್ಟಿದೆ. ಈ ಮೂವರಲ್ಲಿ ಇಬ್ಬರು ಐಪಿಎಲ್‌ನಲ್ಲಿ ಛಾಪು ಮೂಡಿಸಿದ್ದಾರೆ.
ಮುಶೀರ್ ಖಾನ್
ಟೀಂ ಇಂಡಿಯಾದ ಸ್ಟಾರ್ ಡ್ಯಾಶಿಂಗ್ ಆಟಗಾರ ಸರ್ಫರಾಜ್ ಖಾನ್ ಸಹೋದರ ಮುಶೀರ್ ಖಾನ್. ದುಲೀಪ್ ಟ್ರೋಫಿಯ ಮೊದಲ ಪಂದ್ಯದಲ್ಲೇ ಮುಶೀರ್ ಅದ್ಭುತ ಶತಕ ಬಾರಿಸಿದ್ದರು. ಈ ಪಂದ್ಯದಲ್ಲಿ ಮುಶೀರ್ ದ್ವಿಶತಕದಿಂದ ವಂಚಿತರಾದರು. ಅಂಡರ್-19 ವಿಶ್ವಕಪ್‌ನಲ್ಲಿ ಹಲವು ಶತಕಗಳನ್ನು ಗಳಿಸಿದ್ದರು. ಹೀಗಾಗಿ ಮೆಗಾ ಹರಾಜಿನಲ್ಲಿ ಮುಶೀರ್ ಅವರನ್ನು ಆರ್‌ಸಿಬಿ ಗುರಿಯಾಗಿಸಬಹುದು.
ಇದನ್ನೂ ಓದಿ:RCB ರಿಟೈನ್ ಲಿಸ್ಟ್ನಿಂದ ಸಿರಾಜ್ ಔಟ್; ಟೀಂ ಇಂಡಿಯಾದ ಸ್ಟಾರ್ ಎಂಟ್ರಿ, ದಯಾಳ್ ಅಲ್ಲ..!
ಶಶಾಂಕ್ ಸಿಂಗ್
ಶಶಾಂಕ್ ಸಿಂಗ್ ಕಳೆದ ಐಪಿಎಲ್ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದರು. ಪಂಜಾಬ್ ಪರ ಶಶಾಂಕ್ ಅದ್ಭುತ ಪ್ರದರ್ಶನ ನೀಡಿದ್ದರು. ಐಪಿಎಲ್ 2024 ಅವರಿಗೆ ಅದ್ಭುತವಾಗಿತ್ತು. ಕಳೆದ ಋತುವಿನಲ್ಲಿ, ಶಶಾಂಕ್ 14 ಪಂದ್ಯಗಳನ್ನು ಆಡಿದರು.ಅದರಲ್ಲಿ ಅವರು 354 ರನ್ ಗಳಿಸಿದರು. ಈ ಅವಧಿಯಲ್ಲಿ ಅವರ ಬ್ಯಾಟ್‌ನಿಂದ ಎರಡು ಅರ್ಧ ಶತಕ ಬಂದಿದೆ. ಹರಾಜಿಗೂ ಮುನ್ನ ಪಂಜಾಬ್ ತಂಡ ಅವರನ್ನು ಬಿಡುಗಡೆ ಮಾಡಿದರೆ RCB ಖರೀದಿಸುವ ಲೆಕ್ಕಾಚಾರದಲ್ಲಿದೆ.
ನಿತೀಶ್ ಕುಮಾರ್ ರೆಡ್ಡಿ
ಐಪಿಎಲ್-2024 ನಿತೀಶ್ ಕುಮಾರ್ ರೆಡ್ಡಿಗೆ ತುಂಬಾ ಚೆನ್ನಾಗಿತ್ತು. ನಿತೀಶ್ ಕುಮಾರ್ ರೆಡ್ಡಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ ಐಪಿಎಲ್-2024ರಲ್ಲಿ 15 ಪಂದ್ಯಗಳನ್ನು ಆಡಿದ್ದಾರೆ. ಅವರ ಬ್ಯಾಟ್‌ನಿಂದ 303 ರನ್ ಬಂದಿದೆ. ಬೌಲಿಂಗ್ ಕೂಡ ಮಾಡಬಲ್ಲರು, ಕಳೆದ ಐಪಿಎಲ್‌ನಲ್ಲಿ ಮೂರು ವಿಕೆಟ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:RCB ಅಭಿಮಾನಿಗಳಿಗೆ ಗುಡ್ನ್ಯೂಸ್; ಬಲಿಷ್ಠ ಟೀಂ ಇಂಡಿಯಾದಲ್ಲಿ 4 ಮಂದಿ ಆರ್‌ಸಿಬಿ ಆಟಗಾರರು..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್