newsfirstkannada.com

×

ನೆಚ್ಚಿನ ಆಟಗಾರನ ನೋಡಲು ಸ್ಕೂಲ್​ಗೆ ಬಂಕ್ ಹಾಕಿ ಟೀಚರ್​ ಕೈಯಲ್ಲಿ ಸಿಕ್ಕಿಬಿದ್ದಿದ್ದ ರೋಹಿತ್ ಶರ್ಮಾ

Share :

Published September 23, 2024 at 2:42pm

    ರೋಹಿತ್​ಗೆ ಸ್ಫೂರ್ತಿ ನೀಡಿದ್ದ ಆ ಆಟಗಾರ ಯಾರು?

    ರೋಹಿತ್ ಇವರ ಆಟವನ್ನೇ ನೋಡುತ್ತ ಬೆಳೆದವರು

    ಅದೇ ಹೀರೋ ಜೊತೆ ಡ್ರೆಸ್ಸಿಂಗ್ ರೂಮ್ ಶೇರಿಂಗ್

ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್​ ಶರ್ಮಾ, ಇದೀಗ ವಿಶ್ವದ ಹಲವು ಯಂಗ್​​ ಕ್ರಿಕೆಟರ್ಸ್​ಗೆ ಸ್ಫೂರ್ತಿಯಾಗಿದ್ದಾರೆ. ಇದೇ ಹಿಟ್​​ಮ್ಯಾನ್ ತಮ್ಮ ಸ್ಫೂರ್ತಿಯ ಚಿಲುಮೆಯನ್ನ ಭೇಟಿಯಾಗಲು ಸ್ಕೂಲ್​​ಗೆ ಬಂಕ್​​ ಹಾಕಿ, ಟೀಚರ್​ ಕೈಯಲ್ಲಿ ತಗಲಾಕ್ಕೊಂಡಿದ್ರು.

ರೋಹಿತ್​ ಶರ್ಮಾ.. ಇವರ ಅಟ್ಯಾಕಿಂಗ್ ಸ್ಟೈಲ್ ಆಟಕ್ಕೆ ಫಿದಾ ಆಗದೋರಿಲ್ಲ. ಅದೆಂಥಾ ಬೌಲರ್​​ ಆಗಿರಲಿ. ನಿರ್ದಯವಾಗಿ ದಂಡಿಸಿ ಸಿಕ್ಸರ್​-ಬೌಂಡ್ರಿಗಳ ಸರಮಾಲೆ ಕಟ್ತಾರೆ. ರೋಹಿತ್​​ ಅಗ್ರೆಸ್ಸಿವ್​ ಆಟದ ಶೈಲಿ ನೋಡಿದೋರಿಗೆ ಸಿಡಿಲಮರಿ ವಿರೇಂದ್ರ ಸೆಹ್ವಾಗ್ ನೆನಪಾಗದೇ ಇರಲ್ಲ. ಯಾಕಂದ್ರೆ ಇಬ್ಬರೂ ಡಿಸ್ಟ್ರಕ್ಟಿವ್ ಬ್ಯಾಟರ್ಸ್​!

ಇದನ್ನೂ ಓದಿ:ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಣೆ; ಈ ಬಾರಿ ಎಷ್ಟು ದಿನ ರಜೆ ಗೊತ್ತಾ?

ಅಂದ್ಹಾಗೆ ಈ ಸೆಹ್ವಾಗ್​​, ರೋಹಿತ್​​ ಶರ್ಮಾರ ಬಾಲ್ಯದ ಹೀರೋ. ರೋಹಿತ್​​ ಶರ್ಮಾ ದಂಡಂ ದಶಗುಣಂ ಆಟದ ಸೀಕ್ರೆಟ್​ ಇದೇ. ರೋಹಿತ್​ ವೀರೂನ ಎಷ್ಟು ಫಾಲೋ ಮಾಡ್ತಿದ್ರು ಅನ್ನೋದಕ್ಕೆ ಈ ಇಂಟರೆಸ್ಟಿಂಗ್ ಸಂಗತಿ ಬೆಸ್ಟ್​ ಎಕ್ಸಾಂಪಲ್​​. ಅದಿನ್ನೂ ರೋಹಿತ್​ ಶರ್ಮಾ ಸ್ಕೂಲ್​ಡೇಸ್​. ಆಗ ಸೆಹ್ವಾಗ್​ನ ನೋಡಲು​ ರೋಹಿತ್​​ ಕ್ಲಾಸ್​​ಗೆ ಬಂಕ್​​​​​ ಹಾಕಿ ಲೆಕ್ಕವಿಲ್ಲದಷ್ಟು ಬಾರಿ ಅಲೆದಾಡಿದ್ದಾರೆ.

ಹಿಟ್​ಮ್ಯಾನ್ ಚಿಕ್ಕಂದಿನಲ್ಲಿ​​​ ಸೆಹ್ವಾಗ್​ ಆಟ ನೋಡುತ್ತ ಅವರಂತೆ ತಾನು ದೊಡ್ಡ ಕ್ರಿಕೆಟರ್ ಆಗಬೇಕೆಂಬ ಕನಸು ಕಂಡವರು. ಅವರ ಭೇಟಿ ಮಾಡುವುದ್ಕಾಗಿ ಅನೇಕ ಬಾರಿ ಕ್ಲಾಸ್​​ಗೆ ಬಂಕ್​​​​​ ಹಾಕಿ ಮೈದಾನದ ಬಳಿ ಹೋಗ್ತಿದ್ರಂತೆ. ಈ ವಿಷ್ಯ ಒಮ್ಮೆ ಟೀಚರ್ಸ್​ಗೆ ಗೊತ್ತಾಗುತ್ತೆ. ರೋಹಿತ್​​​ ಕ್ಲಾಸ್​​ನಲ್ಲಿ ಎಲ್ಲರ ಮುಂದೆ ಬೈಸಿಕೊಳ್ತಾರೆ. ಅಂದು ಸೆಹ್ವಾಗ್ ನೋಡಲು ಬಂಕ್​​​​ ಹಾಕಿ ಬೈಸಿಕೊಂಡ ರೋಹಿತ್, ಕೆಲ ವರ್ಷಗಳ ಬಳಿಕ​​ ತನ್ನ ಬಾಲ್ಯದ ಕ್ರಿಕೆಟ್ ಹೀರೋ ಜೊತೆ ಡ್ರೆಸ್ಸಿಂಗ್ ರೂಮ್​ ಹಂಚಿಕೊಳ್ತಾರೆ. ಯಶಸ್ಸು ಅಂದ್ರೆ ಇದೇ ಅಲ್ವಾ?

ಇದನ್ನೂ ಓದಿ:ಕಾಯುವಿಕೆ ಮುಗೀತು..! BIGG BOSS​ ಥೀಮ್ ರಿವೀಲ್.. ಉತ್ಸಾಹ ಇಮ್ಮಡಿಗೊಳಿಸಿದ ಪ್ರೋಮೋ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೆಚ್ಚಿನ ಆಟಗಾರನ ನೋಡಲು ಸ್ಕೂಲ್​ಗೆ ಬಂಕ್ ಹಾಕಿ ಟೀಚರ್​ ಕೈಯಲ್ಲಿ ಸಿಕ್ಕಿಬಿದ್ದಿದ್ದ ರೋಹಿತ್ ಶರ್ಮಾ

https://newsfirstlive.com/wp-content/uploads/2024/08/ROHIT-SHARMA-4-1.jpg

Load More