/newsfirstlive-kannada/media/post_attachments/wp-content/uploads/2024/10/IIT-KANPUR-1.jpg)
ಕಾನ್ಪುರ್ನ ಐಐಟಿ ಕೇಂದ್ರದಿಂದ ಮಹತ್ತರ ಸಾಧನೆಯೊಂದಾಗಿದೆ. ಇಲ್ಲಿ ನಡೆದ ಸಂಶೋಧನೆ ಹಾಗೂ ಅನೇಕ ಪ್ರಯೋಗಗಳ ಪ್ರತಿಫಲವಾಗಿ ಕೇವಲ ಒಂದು ನಿಮಿಷದೊಳಗೆ ಓರಲ್ ಕ್ಯಾನ್ಸರ್ ಕಂಡು ಹಿಡಿಯುವ ಸಾಧನವನ್ನು ಆವಿಷ್ಕಾರ ಮಾಡಿದೆ ಐಐಟಿ ಟೀಮ್. ಅತ್ಯಂತ ಅತ್ಯಾಧುನಿಕ ಪರಿಕರಗಳಿಂದ ಸಿದ್ಧಗೊಂಡಿರುವ ಈ ಸಾಧನ ಅತ್ಯಂತ ನಿಖರವಾಗಿ ಕೆಲವೇ ನಿಮಿಷಗಳಲ್ಲಿ ಮನುಷ್ಯನಲ್ಲಿರುವ ಓರಲ್ ಕ್ಯಾನ್ಸರ್ನ್ನು ಪತ್ತೆ ಹಚ್ಚುತ್ತದೆ ಎಂದು ಹೇಳಲಾಗಿದೆ. ಭಾರತದಲ್ಲಿ ಕ್ಯಾನ್ಸರ್ ಪತ್ತೆ ಮಾಡುವ ವಿಚಾರದಲ್ಲಿ ಇದು ದೊಡ್ಡ ಸಾಧನೆಯೇ ಸರಿ. ಇದರಿಂದಾಗಿ ಬೇಗನೇ ಕ್ಯಾನ್ಸರ್ ಪತ್ತೆಯಾಗುವುದರಿಂದ ಅಷ್ಟೇ ಬೇಗ ಗುಣಮುಖರಾಗಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:Adani big Deal: ದೇಶದ ಅತ್ಯಂತ ಹಳೆಯ ಕಂಪನಿ ಖರೀದಿಸಿದ ಗೌತಮ್ ಅದಾನಿ
ಹೊಸದಾಗಿ ಆವಿಷ್ಕಾರಗೊಂಡ ಈ ಡಿವೈಸ್ಗೆ ಮುನ್ಹ್ ಪರೀಕ್ಷಕ್ ಎಂದು ಹೆಸರಿಡಲಾಗಿದೆ ಎಂದು ಪ್ರೊಫೆಸರ್ ಜಯಂತ್ ಕುಮಾರ್ ಸಿಂಗ್ ಹೇಳಿದ್ದಾರೆ. ಓರಲ್ ಕ್ಯಾನ್ಸರ್ ಡಿಟೆಕ್ಟಿಂಗ್ ಡಿವೈಸ್ ಕಂಡು ಹಿಡಿದವರು ಇದೇ ಜಯಂತ್ ಕುಮಾರ್ ಸಿಂಗ್. ಅವರು ಹೇಳುವ ಪ್ರಕಾರ ವಿಶೇಷ ಪ್ರಕಾರದ ಲೈಟ್ ಹಾಗೂ ಕ್ಯಾಮರಾಗಳನ್ನು ಹೊಂದಿರುವ ಈ ಡಿವೈಸ್ ಬಾಯಿಯೊಳಗೆ ಹಾಕಿ ಪರೀಕ್ಷೆ ಮಾಡುವುದರ ಮೂಲಕ ಓರಲ್ ಕ್ಯಾನ್ಸರ್ನ್ನು ಬಹುಬೇಗ ಪತ್ತೆ ಮಾಡಬಹುದು ಎಂದು ಹೇಳಿದ್ದಾರೆ. ಬಾಯಿಯೊಳಗೆ ಬಿಡಲಾಗುವ ಡಿವೈಸ್ ತೋರಿಸುವ ದೃಶ್ಯಗಳನ್ನು ಆ್ಯಂಡ್ರಾಯ್ಡ್ ಫೋನ್ ಅಥವಾ ಟ್ಯಾಬ್ಗಳಲ್ಲಿ ಆ್ಯಪ್ ಮೂಲಕ ನೋಡಿ ಕ್ಯಾನ್ಸರ್ನ್ನು ಕಂಡು ಹಿಡಿಯಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಪೋಷಕರೇ ಹುಷಾರ್.. ನಿಮ್ಮ ಮಕ್ಕಳು ದಿಢೀರ್ ದಪ್ಪ ಆದ್ರೆ ಅಪಾಯ; ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ!
ಮುನ್ಹ್ ಪರೀಕ್ಷಕ್ ಒಂದು ವೈದ್ಯರ ಸ್ನೇಹಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ. ಇದನ್ನು ವೈರ್ಲೆಸ್ ಮೂಲಕ ಐಪಾಡ್, ಸ್ಮಾರ್ಟ್ಫೋನ್ ಟ್ಯಾಬ್ಲೆಟ್ನೊಂದಿಗೆ ಕನೆಕ್ಟ್ ಮಾಡಬಹುದು. ಪವರ್ ಬ್ಯಾಕಪ್ನ ಶಕ್ತಿ ಇದರಲ್ಲಿ ಹೆಚ್ಚಿರುವುದರಿಂದ ನಾವು ಇದರಲ್ಲಿ ಪರೀಕ್ಷೆಗೊಳಪಟ್ಟವರ ಆರೋಗ್ಯದ ಸಮಸ್ಯೆಗಳ ಡಾಟಾಗಳನ್ನು ಸಂಗ್ರಹಿಸಿ ಇಡಬಹುದು ಎಂದು ಹೇಳಿದ್ದಾರೆ. ಅದು ಅಲ್ದೆ ಇದು ಟೆಸ್ಟ್ ಮಾಡುವಾಗ ವ್ಯಕ್ತಿಗೆ ಯಾವುದೇ ರೀತಿಯ ನೋವಿಲ್ಲದಂತೆ ಸರಳವಾಗಿ ಮಾಡಬಹುದು ಎಂದು ಸಿಂಗ್ ಹೇಳಿದ್ದಾರೆ. ಈ ಒಂದು ಸಾಧನ ಅತ್ಯಂತ ಸುರಕ್ಷಿತ ಹಾಗೂ ಅಷ್ಟೇ ನಿಖರವಾಗಿ ಸಮಸ್ಯೆಯನ್ನು ಪತ್ತೆ ಮಾಡುತ್ತದೆ ಎಂದು ಸಿಂಗ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ