ಪೋಷಕರೇ ಎಚ್ಚರ ನಿಮ್ಮ ಮಕ್ಕಳ ಆಹಾರದ ಮೇಲೆ ಇರಲಿ ಗಮನ
ವಯಸ್ಸಿಗೂ ಮೀರಿ ದಪ್ಪ ಆಗುತ್ತಿರುವ ಈಗಿನ ಮಕ್ಕಳು, ವಯಸ್ಕರು
ಮಕ್ಕಳು, ವಯಸ್ಕರು ಏನು ಮಾಡಬೇಕು, ಏನು ಮಾಡಬಾರದು?
ಮಾನವರಲ್ಲಿ ಹೆಚ್ಚುತ್ತಿರುವ ಅಧಿಕ ತೂಕ, ಸ್ಥೂಲಕಾಯತೆ, ಮಧುಮೇಹ ಹಾಗೂ ಕ್ಯಾನ್ಸರ್‌ಗಳಂತ ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ಎದುರಿಸಲು ಎಲ್ಲಾ ರಾಷ್ಟ್ರಗಳು ಮುಂದಾಗಬೇಕು. ಆರೋಗ್ಯಕರ ಆಹಾರ ಮತ್ತು ದೈಹಿಕ ಚಟುವಟಿಕೆಗಳನ್ನು ಉತ್ತೇಜಿಸುವ ಪಾಲಿಸಿಗಳನ್ನು ಬಲಪಡಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಹೆಚ್ಒ) ಎಲ್ಲಾ ದೇಶಗಳಿಗೆ ಕರೆ ನೀಡಿದೆ.
ಆಗ್ನೇಯ ಏಷ್ಯಾದಲ್ಲಿ ಇತ್ತೀಚೆಗೆ ಮಕ್ಕಳು ವಯಸ್ಸಿಗೂ ಮೀರಿ ದಪ್ಪವಾಗುತ್ತಿದ್ದಾರೆ. ಇದರಿಂದ ಅವರಲ್ಲಿ ಚಯಾಪಚಯ ಸಮಸ್ಯೆ ಕಾಡುತ್ತಿವೆ. ವಯಸ್ಕರಲ್ಲಿಯೂ ಇದು ಸಾಮಾನ್ಯವಾಗಿದ್ದು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಇವುಗಳಿಂದ ದೇಹದಲ್ಲಿ ಹೃದಯದ ರಕ್ತನಾಳಗಳಿಗೆ ಸಂಬಂಧಿಸಿದ ಸಮಸ್ಯೆ, ಮಧುಮೇಹ, ಕ್ಯಾನ್ಸರ್ನಂತಹ ಸಾಂಕ್ರಾಮಿಕವಲ್ಲದ ಕಾಯಿಲೆ ಪ್ರಕರಣಗಳು ಹೆಚ್ಚುತ್ತಿವೆ. ಮಾನವರು ಸಾವನ್ನಪ್ಪಿದ್ದರೆ ಅದರಲ್ಲಿ ಮೂರನೇ ಎರಡರಷ್ಟು ಈ ಕಾಯಿಲೆಗಳೇ ಕಾರಣವಾಗಿವೆ ಎಂದು ಡಬ್ಲುಹೆಚ್ಒ ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕರಾದ ಸೈಮಾ ವಾಝೆದ್ ತಿಳಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ದೈನಂದಿನ ಜೀವನ ಹೇಗಿದೆ? ಈ ಹವ್ಯಾಸ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು!
ಕೇವಲ 5 ವರ್ಷದ ಒಳಗಿನ ಸುಮಾರು 50 ಲಕ್ಷ ಮಕ್ಕಳು ಅಧಿಕ ತೂಕ ಹೊಂದಿರುವುದು ಆಘಾತಕಾರಿ ಸಂಗತಿಯಾಗಿದೆ. ಇತ್ತೀಚೆಗೆ ಕ್ಷಿಪ್ರ ನಗರೀಕರಣ ಜೊತೆಗೆ ಜನಸಂಖ್ಯೆ ಹೆಚ್ಚುತ್ತಿದೆ. ಫಾಸ್ಟ್ಫುಡ್ನಂತ ಅನಾರೋಗ್ಯಕರ ಆಹಾರಗಳು ತಿಂದು ದೈಹಿಕ ಚಟುವಟಿಕೆ ಕಡೆ ಗಮನ ಹರಿಸದಿರುವುದು. ಈ ಎಲ್ಲ ಕಾರಣಗಳಿಂದ ಮಕ್ಕಳು ಹಾಗೂ ವಯಸ್ಕರು ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇದರಿಂದ 2030ರ ವೇಳೆಗೆ ದೊಡ್ಡ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇವುಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಎಲ್ಲ ದೇಶಗಳು ತೆಗೆದುಕೊಂಡರೇ 2030ರ ವೇಳೆಗೆ ಇದರಲ್ಲಿ ಯಶಸ್ಸನ್ನು ಗಳಿಸಬಹುದು. ಈ ಕಾಯಿಲೆಗಳಿಂದ ಸಾವನ್ನಪ್ಪುವವರನ್ನು 3ನೇ ಒಂದರಷ್ಟು ಕಡಿಮೆ ಮಾಡಬಹುದು. ಇದಕ್ಕೆ ಆರೋಗ್ಯಕರ ಆಹಾರ ಹಾಗೂ ದೈಹಿಕ ಚಟುವಟಿಕೆಗಳನ್ನು ಕೈಗೊಳ್ಳಬೇಕು. ದೈಹಿಕ ಚಟುವಟಿಕೆಗಳಿಗೆ ಬೇಕಾದ ಪೂರಕ ಪರಿಸರವನ್ನು ನಿರ್ಮಾಣ ಮಾಡಬೇಕಿದೆ ಎಂದು ಅವರು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ