newsfirstkannada.com

ದರ್ಶನ್​ಗೆ ಜೈಲಿನಲ್ಲೇ IT ಅಧಿಕಾರಿಗಳಿಂದ ಡ್ರಿಲ್, ಇಂದು ಕೂಡ ವಿಚಾರಣೆ.. ನಟನಿಗೆ ಬೇಲ್ ಸಿಗುತ್ತಾ?

Share :

Published September 27, 2024 at 7:06am

    ಅಷ್ಟೊಂದು ಹಣ ಹೇಗೆ ಬಂತು, ಆ ದುಡ್ಡು ಯಾರಿಗೆ ಸೇರಿದ್ದು?

    ಐಟಿ ಅಧಿಕಾರಿಗಳಿಗೆ ದಾಖಲೆ ನೀಡಿರುವ ಎಂ.ಆರ್​​ ರಾವ್

    ಕೃತ್ಯದ ಬಳಿಕ ಸಾಕ್ಷ್ಯ ನಾಶಕ್ಕೆ ದುಡ್ಡಿನ ಹೊಳೆ ಹರಿಸಿದ್ದ ದರ್ಶನ್​

ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಜೈಲು ಸೇರಿರೋ ದರ್ಶನ್​​​ ಅಕ್ಷರಶಃ ನರಕಯಾತನೆ ಅನುಭವಿಸ್ತಿದ್ದಾರೆ. ಒಂದು ಕಡೆ ಜಾಮೀನು ಟೆನ್ಶನ್​​​​​​ ಆದ್ರೆ, ಮತ್ತೊಂದು ಕಡೆ ಜೈಲಿನಲ್ಲಿ ಸೆಣೆಸಾಟ. ಇದರ ಜೊತೆ ಮತ್ತೊಂದು ಸಂಕಷ್ಟಗಳ ಸರಮಾಲೆ ಎದುರಾಗಿದೆ. ಕೃತ್ಯದ ಬಳಿಕ ಸಾಕ್ಷ್ಯ ನಾಶಕ್ಕೆ ದುಡ್ಡಿನ ಹೊಳೆ ಹರಿಸಿದ್ದ ದರ್ಶನ್​ಗೆ ಪ್ರಶ್ನೆಗಳ ಸುರಿಮಳೆಗೈದು ಜೈಲಿನಲ್ಲೇ ಡ್ರಿಲ್​ ಮಾಡಿದ್ದು, ಇವತ್ತೂ ದರ್ಶನ್‌ಗೆ ಐಟಿ ವಿಚಾರಣೆ ಬಿಸಿ ಮುಂದುವರೆಯಲಿದೆ.

ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಜೈಲುಪಾಲಾಗಿರೋ ದರ್ಶನ್​​​ಗೆ ಶಾಕ್​ ಮೇಲೆ ಶಾಕ್​​​ ಎದುರಾಗ್ತಿದೆ. ಬೇಲ್​​ ಚಿಂತಯಲ್ಲೇ ಬಳ್ಳಾರಿ ಜೈಲಿನಲ್ಲಿ ಕಂಗಾಲಾಗಿರುವ ದರ್ಶನ್​ಗೆ ಐಟಿ ಸಂಕಟ ಶುರುವಾಗಿದ್ದು, ಐಟಿ ಅಧಿಕಾರಿಗಳು ಬಳ್ಳಾರಿ ಜೈಲಿಗೆ ಭೇಟಿ ಕೊಟ್ಟು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ಮುಡಾ ಕೇಸ್​; ಸಿಎಂ ಸಿದ್ದರಾಮಯ್ಯ ವಿರುದ್ಧ ಯಾವ್ಯಾವ IPC ಸೆಕ್ಷನ್​ ಏನ್ ಹೇಳುತ್ತೆ?

ಆರೋಪ ಏನು?

ರೇಣುಕಾಸ್ವಾಮಿ ಹತ್ಯೆ ಬಳಿಕ ನಟ ದರ್ಶನ್​​ ಹಣದ ಹೊಳೆಯನ್ನೇ ಹರಿಸಿದ್ದರು ಎಂಬ ಆರೋಪ ಇದೆ. ದುಡ್ಡಿನ ಆಸೆ ತೋರಿಸಿ ಕೆಲವರನ್ನ ಸರೆಂಡರ್​ ಮಾಡಿಸಿದ್ದರು. ಮತ್ತೆ ಕೆಲವರನ್ನ ಸಾಕ್ಷ್ಯ ನಾಶಕ್ಕೆ ಬಳಸಿಕೊಂಡಿದ್ದ, ಇದೆಕ್ಕೆಲ್ಲಾ ದರ್ಶನ್​​​​ ಹತ್ತಲ್ಲ.. ಇಪ್ಪತ್ತಲ್ಲ ಬರೋಬ್ಬರಿ 84 ಲಕ್ಷ ಹಣ ಖರ್ಚು ಮಾಡಿದ್ದ, ಬಳಿಕ ಈ ಹಣವನ್ನ ಪೋಲಿಸ್ರು ಸೀಜ್​​​​ ಮಾಡಿದ್ರು. ಈಗ ಹಣದ ಮೂಲ ಪತ್ತೆ ಹಚ್ಚುಲು ಐಟಿ ಅಧಿಕಾರಿಗಳು ಮುಂದಾಗಿದ್ದು, ನಿನ್ನೆ ಬಳ್ಳಾರಿ ಜೈಲಿಗೆ ಐಟಿ ಅಧಿಕಾರಿಗಳು ಭೇಟಿ ಕೊಟ್ಟು 7 ಗಂಟೆಗಳ ಕಾಲ ದರ್ಶನ್​​​ಗೆ ಡ್ರಿಲ್​ ಮಾಡಿದ್ದಾರೆ.

ದರ್ಶನ್​ಗೆ ಐವರು ಐಟಿ ಅಧಿಕಾರಿಗಳಿಂದ ವಿಚಾರಣೆ

ಬೆಂಗಳೂರಿನ 57ನೇ ಸೆಷನ್ಸ್ ಕೋರ್ಟ್​ನಿಂದ ಅನುಮತಿ ಪಡೆದ ಐವರು ಐಟಿ ಅಧಿಕಾರಿಗಳ ತಂಡ ಬಳ್ಳಾರಿ ಜೈಲಿಗೆ ಆಗಮಿಸಿ ದರ್ಶನ್​​ಗೆ ಹಣದ ಮೂಲ ಕುರಿತು ದರ್ಶನ್​ಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ರೇಣುಕಾಸ್ವಾಮಿ ಕೊಲೆ ಆದ ಬಳಿಕ ಮನೆಯಲ್ಲಿ ಅಷ್ಟೊಂದು ಹಣ ಹೇಗೆ ಬಂತು? ಆ ಹಣ ಯಾರಿಗೆ ಸೇರಿದ್ದು? ಆ ಹಣವನ್ನು ನಿಮಗೆ ತಂದುಕೊಟ್ಟಿದ್ಯಾರು? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಐಟಿ ಅಧಿಕಾರಿಗಳು ದರ್ಶನ್‌ಗೆ ಕೇಳಿದ್ದಾರೆ. ದರ್ಶನ್​​ನ ಎಲ್ಲಾ ವ್ಯವಹಾರ ನೋಡಿಕೊಳ್ತಿದ್ದ ಎಂ.ಆರ್​​ ರಾವ್​​​​, ಎಲ್ಲಾ ದಾಖಲೆಗಳ ಸಮೇತ ಆಗಮಿಸಿ ಐಟಿ ಅಧಿಕಾರಿಗಳಿಗೆ ನೀಡಿದ್ದಾರೆ.

ಇದನ್ನೂ ಓದಿ: ಮಹಾಯುದ್ಧದ ಕಾರ್ಮೋಡ; ರಷ್ಯಾ- ಉಕ್ರೇನ್ ಘರ್ಷಣೆ ಮತ್ತೆ ಆರಂಭ.. ನ್ಯೂಕ್ಲಿಯರ್- ಕ್ಷಿಪಣಿ ದಾಳಿಗೆ ಪ್ಲಾನ್?

ಇಂದು ಜಾಮೀನು ಅರ್ಜಿ ವಿಚಾರಣೆ

ಇನ್ನು ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಜೈಲು ಪಾಲಾಗಿ, ನೂರಕ್ಕೂ ಹೆಚ್ಚು ದಿನಗಳು ಆಗಿದೆ. ಬೇಲ್​ ಟೆನ್ಷನ್​ನಲ್ಲೇ ದಾಸ ಬಳ್ಳಾರಿ ಜೈಲಿನಲ್ಲಿ ಚಿಂತಾಕ್ರಾಂತರಾಗಿದ್ದಾರೆ. ಇವತ್ತು ನಟ ದರ್ಶನ್​ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಸೆಷನ್ಸ್ ಕೋರ್ಟ್‌ನಲ್ಲೇ ಬೇಲ್​ ಸಿಗುವ ವಿಶ್ವಾಸದಲ್ಲಿ ದರ್ಶನ್​ ಪರ ವಕೀಲರಿದ್ದಾರೆ. ಇದರ ನಡುವೆ ಡೆವಿಲ್​ ಚಿತ್ರದ ನಿರ್ದೇಶಕ ಕೂಡ, ಬಳ್ಳಾರಿ ಜೈಲಿಗೆ ಆಗಮಿಸಿ, ದರ್ಶನ್​ರನ್ನು ಭೇಟಿ ಆಗಿದ್ದಾರೆ. ಒಂದ್ವೇಳೆ ದರ್ಶನ್‌ಗೆ ಜಾಮೀನು ಸಿಕ್ಕಿದರೆ ಬಳ್ಳಾರಿಯಿಂದ ಬೆಂಗಳೂರಿಗೆ ಕರೆತರಲು ಆಪ್ತರು ಈಗಾಗಲೇ ಹೆಲಿಕಾಪ್ಟರ್ ಬುಕ್ ಮಾಡಿದ್ದಾರೆ ಎಂದು ವರದಿಯಾಗಿದೆ.

ಕೊಲೆ ಕೇಸ್​ನಲ್ಲಿ ಲಾಕ್​ ಆಗಿರುವ ದರ್ಶನ್​ಗೆ ಒಂದರ ಮೇಲೊಂದು ಸಂಕಷ್ಟ ಎದುರಾಗ್ತಿವೆ. ಇವತ್ತು ದರ್ಶನ್​ ಜಾಮೀನು ಅರ್ಜಿ ವಿಚಾರವಾಗಿ ಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದ್ದು, ಬೇಲ್​​ ಸಿಗುತ್ತಾ ಇಲ್ವಾ ಅನ್ನೋದು ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ಗೆ ಜೈಲಿನಲ್ಲೇ IT ಅಧಿಕಾರಿಗಳಿಂದ ಡ್ರಿಲ್, ಇಂದು ಕೂಡ ವಿಚಾರಣೆ.. ನಟನಿಗೆ ಬೇಲ್ ಸಿಗುತ್ತಾ?

https://newsfirstlive.com/wp-content/uploads/2024/09/DARSHAN_IT_BALLARY.jpg

Load More