/newsfirstlive-kannada/media/post_attachments/wp-content/uploads/2023/11/Darshan-in-Police-Station.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿರೋ ನಟ ದರ್ಶನ್ ಅವರು ಮನೆ ಊಟಕ್ಕಾಗಿ ಅಕ್ಷರಶಃ ಚಡಪಡಿಸುತ್ತಿದ್ದಾರೆ. ಜಾಮೀನು ಸಿಗುವುದಕ್ಕಿಂತ ಆದಷ್ಟು ಬೇಗ ಮನೆ ಊಟ ಸಿಕ್ಕರೆ ಸಾಕಪ್ಪಾ ಅಂತ ಮನವಿ ಮಾಡಿದ್ದಾರೆ. ಜೈಲಿನಲ್ಲಿ ಮನೆ ಊಟ, ಹಾಸಿಗೆ, ಬಟ್ಟೆ ಪಡೆಯಲು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ನಡೆದಿದ್ದು ದರ್ಶನ್ ಅವರಿಗೆ ನಿರಾಸೆಯಾಗಿದೆ.
ಇದನ್ನೂ ಓದಿ: ನಟ ದರ್ಶನ್ ಕೇಸ್ ತನಿಖೆಗೆ ಆರ್ಥಿಕ ಸಂಕಷ್ಟ.. ಓಡಾಡಲು ಪೊಲೀಸ್ರ ಬಳಿ ದುಡ್ಡೇ ಇಲ್ಲ!
ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಇಂದು ದರ್ಶನ್ ಅವರ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಪೀಠದಲ್ಲಿ ದರ್ಶನ್ ಪರ ವಕೀಲ ಪ್ರಭುಲಿಂಗ ನಾವದಗಿ ಹಾಗೂ ಸರ್ಕಾರದ ಪರ ಎಸ್‌ಪಿಪಿ ಪ್ರಸನ್ನ ಕುಮಾರ್, ಬಂಧಿಖಾನೆ ಇಲಾಖೆ ಪರವಾಗಿ ಬೆಳ್ಳಿಯಪ್ಪ ಹಾಜರಿದ್ದರು.
ಆರಂಭದಲ್ಲೇ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಬಂಧಿಖಾನೆ ಎಸ್‌ಪಿಪಿ ಅವರನ್ನು ಯಾವ ನಿರ್ಧಾರ ತೆಗೆದುಕೊಂಡ್ರಿ ಎಂದು ಪ್ರಶ್ನಿಸದರು. ಆಗ ಎಸ್‌ಪಿಪಿ ಬೆಳ್ಳಿಯಪ್ಪ ಅವರು ಕಳೆದ ಜೂನ್ 14ರಂದೇ ದರ್ಶನ್ ಅವರ ಮನವಿಯನ್ನ ತಿರಸ್ಕಾರ ಮಾಡಿದ್ದೇವೆ ಎಂದು ಹೇಳಿದರು. ಇದನ್ನು ಅವತ್ತೇ ಅರ್ಜಿದಾರರ ಗಮನಕ್ಕೂ ತಂದಿದ್ದೇವೆ ಎಂದು ಉತ್ತರ ನೀಡಿದರು.
ಇದನ್ನೂ ಓದಿ: ರೋಡ್ ರೇಜ್ ಪ್ರಕರಣ; ಆರೋಪಿಯ ಬಂಧನ; ಇಷ್ಟೆಲ್ಲಾ ದರ್ಪ ತೋರಲು ಕಾರಣವೇನು ಗೊತ್ತಾ?
ಬಂಧಿಖಾನೆ ಎಸ್‌ಪಿಪಿ ಬೆಳ್ಳಿಯಪ್ಪ ಅವರ ಈ ಉತ್ತರಕ್ಕೆ ದರ್ಶನ್ ಪರ ವಕೀಲ ಸಂಜೀವಿನಿ ಪ್ರಭುಲಿಂಗ ನಾವದಗಿ ಅವರು ನಮಗೆ ವಾದಿಸಲು ಒಂದು ವಾರ ಸಮಯ ಕೇಳಿಕೊಂಡರು. ನಾವು ಈ ಬಗ್ಗೆ ವಿಸ್ತ್ರತ ವಾದ ಮಾಡಬೇಕಿದೆ ಎಂದರು. ಈ ಮನವಿ ಪುರಸ್ಕರಿಸಲಾಗಿದ್ದು, ಜೈಲು ಅಧಿಕಾರಿಗಳ ಕ್ರಮಕ್ಕೆ ಆಕ್ಷೇಪಣೆ ಸಲ್ಲಿಸಲು ಸಮಯ ನೀಡಲಾಗಿದೆ. ದರ್ಶನ್ ಅವರ ಮನೆಯೂಟದ ಅರ್ಜಿ ವಿಚಾರಣೆಯನ್ನು ಮುಂದಿನ ಸೆಪ್ಟೆಂಬರ್ 5ಕ್ಕೆ ಮುಂದೂಡಲಾಗಿದೆ. ಅಲ್ಲಿವರೆಗೂ ದರ್ಶನ್‌ಗೆ ಮನೆ ಊಟ, ಹಾಸಿಗೆ, ಬುಕ್ ಇಲ್ಲವಾಗಿದೆ.
ಜೈಲು ಅಧಿಕಾರಿಗಳಿಂದ ತಿರಸ್ಕಾರ!
ಕೊಲೆ ಆರೋಪಿ ದರ್ಶನ್ ಮನೆ ಊಟ ಕೋರಿಕೆಯ ಮನವಿಯನ್ನು ಜೈಲು ಅಧಿಕಾರಿಗಳು ತಿರಸ್ಕಾರ ಮಾಡಿದ್ದಾರೆ. ಇದೇ ವೇಳೆ ದರ್ಶನ್ ಮಾಡಿದ್ದ ಆರೋಪಗಳಿಗೆ ಸ್ಪಷ್ಟನೆಯನ್ನು ನೀಡಲಾಗಿದೆ. ಜೈಲು ಆಹಾರದಿಂದ ಫುಡ್ ಪಾಯಿಸನ್ ಆಗಿದು ದರ್ಶನ್ ಅವರು ಗಂಭೀರ ಆರೋಪ ಮಾಡಿದ್ದರು. ಅದಕ್ಕೆಲ್ಲಾ ಸ್ಪಷ್ಟನೆ ನೀಡಿರುವ ಜೈಲಿನ ಅಧಿಕಾರಿಗಳು ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ನಟ ದರ್ಶನ್ಗೂ ಮೊದಲೇ ಬೇಲ್ಗೆ ಅಪ್ಲೇ ಮಾಡಿದ ಪವಿತ್ರಗೌಡ.. ಕೇಸ್ಗೆ ಹೊಸ ಟ್ವಿಸ್ಟ್!
ಸ್ಪಷ್ಟನೆಗಳು:
ಅವರಿಗೆ ಯಾವುದೇ ಪುಡ್ ಪಾಯಿಸನ್ ಸಮಸ್ಯೆ ಆಗಿಲ್ಲ
ಅವರಿಗೆ ಮೂಳೆಯ ಸಮಸ್ಸೆಗೆ ಚಿಕಿತ್ಸೆ ನೀಡಲಾಗುತ್ತಿದೆ
ವೈರಲ್ ಜ್ವರ ಬಂದಿತ್ತು ಅದಕ್ಕೆ ಚಿಕಿತ್ಸೆ ನೀಡಲಾಗಿದೆ
ಅವರಿಗೆ ಯಾವುದೇ ದೊಡ್ಡ ರೀತಿಯ ಸಮಸ್ಯೆಗಳು ಇಲ್ಲ
ವೈದ್ಯರು ಔಷಧಿ ಮತ್ತು ಪೌಷ್ಟಿಕ ಆಹಾರಕ್ಕೆ ಹೇಳಿದ್ದಾರೆ
ಅವರಿಗೆ ಇರುವ ಬೆನ್ನು ನೋವು & ಮುಂಗೈಗಳಿಗೆ ಚಿಕಿತ್ಸೆ
ಸೂಕ್ತ ವೈದ್ಯಕೀಯ ಸೌಲಭ್ಯಗಳನ್ನು ನಾವು ನೀಡಿದ್ದೇವೆ
ದರ್ಶನ್ ಮನವಿ ತಿರಸ್ಕಾರ ಮಾಡಲು ಕಾರಣಗಳು:
ಕಾರಾಗೃಹ & ಸುಧಾರಣಾ ಸೇವೆ ಕಾಯ್ದೆ 2021 ರಡಿ ಈ ನಿರ್ಧಾರ
ಸೆ.322 ಪ್ರಕಾರ ಬಂಧಿಗಳಿಗೆ ವೈದ್ಯಕೀಯ ಕಾರಣಕ್ಕೆ ನೀಡಬಹುದು
ಅದು ವೈದ್ಯಾಧಿಕಾರಿಗಳ ವಿವೇಚನಾ ಅಧಿಕಾರದ ಮೇಲೆ ಮಾತ್ರ
ಹೆಚ್ಚುವರಿ ಅಥವಾ ಸ್ವಲ್ಪ ಬದಲಾವಣೆ ಮಾಡಿ ನೀಡಬಹುದಷ್ಟೆ
ಸೆ.338 ಪ್ರಕಾರ ವೈದ್ಯರ ಸಲಹೆ ಮೇರೆಗೆ ಮಾತ್ರ ಒದಗಿಸಬಹುದು
ಸೆ. 855 ರ ಪ್ರಕಾರ ವಿಶೇಷ ಆಹಾರ ನೀಡಲು ವೈದ್ಯರ ಸಲಹೆ ಬೇಕು
ಕೈದಿಗೆ ಅವಶ್ಯಕತೆ ಇದ್ದರೆ, ಆಸ್ಪತ್ರೆ ಆಹಾರದೊಂದಿಗೆ ಚಿಕಿತ್ಸೆ ಇದೆ
ಅದು ಸಹ ವೈದ್ಯಾಧಿಕಾರಿಯ ಶಿಫಾರಸು ಇದ್ರೆ ಮಾತ್ರ ಸಾಧ್ಯ
ಸದ್ಯ ಜೈಲಿನ ಆಹಾರದಲ್ಲಿ ಯಾವುದೇ ಫುಡ್ ಪಾಯಿಸನ್ ಇಲ್ಲ
ಯಾವುದೇ ಪೌಷ್ಟಿಕಾಂಶದ ಕೊರತೆಯೂ ಸಹ ಆಹಾರದಲ್ಲಿಲ್ಲ
ಮನೆ ಊಟ ದರ್ಶನ್ ಉಳಿವಿಗಾಗಿ ಅಗತ್ಯವೆಂದು ವೈದ್ಯರು ಹೇಳಿಲ್ಲ
ಜೈಲಿನ ವೈದ್ಯಾಧಿಕಾರಿಗಳು ಶಿಫಾರಸ್ಸಿನಲ್ಲಿ ಎಲ್ಲಿಯೂ ಸಹ ಹೇಳಿಲ್ಲ
ಇದು ವೈದ್ಯಾಧಿಕಾರಿಗಳು ಕೊಟ್ಟ ವರದಿಯಲ್ಲಿ ಪ್ರಸ್ತಾಪವಾಗಿಲ್ಲ
ರಾಜ್ಯದ ಎಲ್ಲಾ ಜೈಲಿನಲ್ಲಿ ಬಂಧಿಗಳಿಗೆ ಪೌಷ್ಟಿಕ ಆಹಾರ ಸಿಗ್ತಿದೆ
ದರ್ಶನ್‌ಗೆ ಹಾಲು, ಮೊಟ್ಟೆ, ಬ್ರೆಡ್, ವಿಟಮಿನ್ ಸಿ, ಕ್ಯಾಲ್ಸಿಯಂ
4/7/24 ರ ಜೈಲು ವೈದ್ಯರ ಸಲಹೆ ಮೇರೆಗೆ 10 ದಿನ ನೀಡಲಾಗ್ತಿದೆ
1/8/24 ರ ಸಲಹೆಯಂತೆ 15 ದಿನ ಬ್ರೆಡ್, ಹಾಲು & ಮೊಟ್ಟೆ ನೀಡಲಾಗ್ತಿದೆ
ಆದರೆ ದರ್ಶನ್ ಕೊಲೆ ಆರೋಪಿ ಕಾರಣಕ್ಕೆ ಅವರ ಮನವಿ ತಿರಸ್ಕಾರ
ಕಾರಾಗೃಹ & ಸುಧಾರಣಾ ಸೇವೆ 2021 ರ ಸೆ.728(ಐ) ಅಡಿ ನಿರ್ಧಾರ
ದರ್ಶನ್ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕಾರ ಮಾಡಿದ್ದಾಗಿ ಉತ್ತರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ