newsfirstkannada.com

6,6,6,6,6,6,6,6,6,6,6,6,6,6,6,6,6,6,6,6,6,6,6,6,6,6; 131 ಬಾಲ್​ನಲ್ಲಿ 309 ರನ್​ ಚಚ್ಚಿದ ಯಂಗ್​ ಕ್ರಿಕೆಟರ್​​!

Share :

Published May 8, 2024 at 5:52pm

    ರೋಚಕ ಪಂದ್ಯದಲ್ಲಿ ರಾಜಸ್ಥಾನ್​​​​ ರಾಯಲ್ಸ್​ ವಿರುದ್ಧ ಗೆದ್ದು ಬೀಗಿದ ಡೆಲ್ಲಿ

    ಡೆಲ್ಲಿ ಪರ ಸ್ಟಾರ್​ ಪ್ಲೇಯರ್​​ ಪ್ರೇಸರ್ ಮೆಕ್​ಗುರ್ಕ್ ರೋಚಕ ಬ್ಯಾಟಿಂಗ್​​!

    7 ಇನ್ನಿಂಗ್ಸ್​ನಲ್ಲಿ 131 ಬಾಲ್​ನಲ್ಲಿ 309 ರನ್​ ಸಿಡಿಸಿದ ಪ್ರೇಸರ್ ಮೆಕ್​ಗುರ್ಕ್

ಇತ್ತೀಚೆಗೆ ನಡೆದ ಇಂಡಿಯನ್​ ಪ್ರೀಮಿಯರ್​​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್​​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆದ್ದು ಬೀಗಿದೆ. ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 221 ರನ್ ಸೇರಿಸಿತು. ಡೆಲ್ಲಿ ಕ್ಯಾಪಿಟಲ್ಸ್ ಪರ ಪ್ರೇಸರ್ ಮೆಕ್​ಗುರ್ಕ್​ 20 ಎಸೆತಕ್ಕೆ 50 ರನ್​ ಬಾರಿಸಿದ್ರು. ಹೀಗಾಗಿ ಡೆಲ್ಲಿ ಆರ್​ಆರ್​​ ವಿರುದ್ಧ ಗೆಲುವು ಸಾಧಿಸಲು ಕಾರಣವಾಗಿದ್ದು. ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 12 ಅಂಕಗಳೊಂದಿಗೆ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಅಲ್ಲದೆ ಪ್ಲೇಆಫ್ ಕನಸನ್ನು ಜೀವಂತವಿರಿಸಿಕೊಳ್ಳುವಲ್ಲಿ ರಿಷಭ್ ಪಂತ್ ಪಡೆ ಯಶಸ್ವಿಯಾಗಿದೆ.

ಇನ್ನು, ಡೆಲ್ಲಿ ಕ್ಯಾಪಿಟಲ್ಸ್​ ಪ್ಲೇ ಆಫ್​ ರೇಸ್​​ನಲ್ಲಿರಲು ಪ್ರಮುಖ ಕಾರಣ ಯಂಗ್​ ಬ್ಯಾಟರ್​ ಪ್ರೇಸರ್ ಮೆಕ್​ಗುರ್ಕ್​. ಪ್ರೇಸರ್ ಮೆಕ್​ಗುರ್ಕ್​ ಆಸ್ಟ್ರೇಲಿಯಾದ ಯಂಗ್​​ ಕ್ರಿಕೆಟರ್​​. ಈತನಿಗೆ ಕೇವಲ 22 ವರ್ಷ. ಡೆಲ್ಲಿ ಕ್ಯಾಪಿಟಲ್ಸ್​ ಪರ ಕೇವಲ 7 ಪಂದ್ಯ ಆಡಿರೋ ಪ್ರೇಸರ್ ಮೆಕ್​ಗುರ್ಕ್ ಗಳಿಸಿದ್ದು 300ಕ್ಕೂ ಹೆಚ್ಚು ರನ್​​.

ಹೌದು, ಪ್ರೇಸರ್ ಮೆಕ್​ಗುರ್ಕ್ ತಾನು ಆಡಿರೋ 7 ಪಂದ್ಯಗಳಲ್ಲಿ ಬರೋಬ್ಬರಿ 309 ರನ್​ ಸಿಡಿಸಿದ್ದಾರೆ. ಅದರಲ್ಲೂ ಕೇವಲ 131 ಬಾಲ್​ನಲ್ಲಿ ಇಷ್ಟು ರನ್​ ಸಿಡಿಸಿದ್ದು, ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ 235ಕ್ಕೂ ಹೆಚ್ಚಿದೆ. ಅಷ್ಟೇ ಅಲ್ಲ, ಬರೋಬ್ಬರಿ 26 ಸಿಕ್ಸರ್​​, ಸುಮಾರು 30 ಫೋರ್​ ಚಚ್ಚಿದ್ದಾರೆ. ಬ್ಯಾಟಿಂಗ್​ ಆವರೇಜ್​​ 45ಕ್ಕೂ ಹೆಚ್ಚಿದೆ. ಹೈಎಸ್ಟ್​​​ ಸ್ಕೋರ್​ 84 ರನ್​​ ಆಗಿದೆ. ಎದುರಾಳಿ ತಂಡಗಳಿಗೆ ಈತನನ್ನು ಕಟ್ಟಿ ಹಾಕೋದೆ ದೊಡ್ಡ ಕಷ್ಟ ಆಗಿದೆ. ಕ್ರೀಸ್​ನಲ್ಲಿ ಕೆಲ ಕಾಲ ಇದ್ರೂ ಇಡೀ ಮ್ಯಾಚ್​​ ಉಲ್ಟಾ ಆಗಿ ಹೋಗುತ್ತದೆ.

ಇದನ್ನೂ ಓದಿ: ಅಂದು ಕೊಹ್ಲಿ, ಇಂದು ಸಂಜು ಸ್ಯಾಮ್ಸನ್​​.. ಆಕ್ರೋಶ ಹೊರಹಾಕಿದ ಟೀಮ್​ ಇಂಡಿಯಾ ಮಾಜಿ ಕ್ರಿಕೆಟರ್​​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

6,6,6,6,6,6,6,6,6,6,6,6,6,6,6,6,6,6,6,6,6,6,6,6,6,6; 131 ಬಾಲ್​ನಲ್ಲಿ 309 ರನ್​ ಚಚ್ಚಿದ ಯಂಗ್​ ಕ್ರಿಕೆಟರ್​​!

https://newsfirstlive.com/wp-content/uploads/2024/05/Jake-Fraser-McGurk.jpg

Load More