newsfirstkannada.com

ಅಂದು ಕೊಹ್ಲಿ, ಇಂದು ಸಂಜು ಸ್ಯಾಮ್ಸನ್​​.. ಆಕ್ರೋಶ ಹೊರಹಾಕಿದ ಟೀಮ್​ ಇಂಡಿಯಾ ಮಾಜಿ ಕ್ರಿಕೆಟರ್​​

Share :

Published May 8, 2024 at 4:43pm

Update May 8, 2024 at 4:45pm

  ರೋಚಕ ಪಂದ್ಯದಲ್ಲಿ ರಾಜಸ್ಥಾನ್​​​​ ರಾಯಲ್ಸ್​ ವಿರುದ್ಧ ಗೆದ್ದು ಬೀಗಿದ ಡೆಲ್ಲಿ

  ಕ್ಯಾಪ್ಟನ್​ ಸಂಜು ಸ್ಯಾಮ್ಸನ್ ವಿವಾದತ್ಮಾಕ ಔಟ್ ಬಗ್ಗೆ ಸಾಕಷ್ಟು ಚರ್ಚೆ!

  ಅಂಪೈರ್​​ಗಳ ವಿರುದ್ಧ ಟೀಮ್​ ಇಂಡಿಯಾ ಮಾಜಿ ಕ್ರಿಕೆಟರ್​ ಆಕ್ರೋಶ

ಇತ್ತೀಚೆಗೆ ಅರುಣ್​ ಜೇಟ್ಲಿ ಸ್ಟೇಡಿಯಮ್​ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ರಾಜಸ್ಥಾನ್​​​​ ರಾಯಲ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಗೆದ್ದು ಬೀಗಿದೆ. ಈ ಮಧ್ಯೆ ಐಪಿಎಲ್‌ 56ನೇ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್​ ಕ್ಯಾಪ್ಟನ್​ ಸಂಜು ಸ್ಯಾಮ್ಸನ್ ವಿವಾದತ್ಮಾಕ ಔಟ್ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.

ಇನ್ನು, ಈ ಬಗ್ಗೆ ಮಾತಾಡಿದ ಮಾಜಿ ಟೀಮ್‌ ಇಂಡಿಯಾ ಕ್ರಿಕೆಟಿಗ ನವಜೋತ್‌ ಸಿಂಗ್ ಸಿದ್ದು, ಅಂದು ಕೆಕೆಆರ್​​ ವಿರುದ್ಧ ಪಂದ್ಯದಲ್ಲೂ ಕೊಹ್ಲಿ ಔಟ್​​ ಆಗಿದ್ದು ನೋ ಬಾಲ್​​. ಆಗ ನೋ ಬಾಲ್​ ನೀಡಲಿಲ್ಲ. ಈಗ ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಸ್ಯಾಮ್ಸನ್​​ ವಿಚಾರದಲ್ಲೂ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಂಪೈರ್​ಗಳನ್ನು ಟೀಕಿಸಿದ್ದಾರೆ. ಜತೆಗೆ ತಂತ್ರಜ್ಞಾನ ಸರಿಯಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಯಾರು ಏನು ಬೇಕಾದ್ರೂ ಹೇಳಬಹುದು. ಒಂದು ಕಡೆಯಿಂದ ನೋಡಿದ್ರೆ ಕ್ಯಾಚ್​ ಹಿಡಿದ ಮೇಲೆ ಕಾಲು ಬೌಂಡರಿಗೆ ಟಚ್​​ ಆಗಿದೆ. ಇಷ್ಟಾದ್ರೂ ನಾಟೌಟ್​ ನೀಡದೆ ಅಂಪೈರ್​​​ ಔಟ್​ ಕೊಟ್ಟಿದ್ದಾರೆ. ಹೀಗಾಗಿ ಒಂದೋ ತಂತ್ರಜ್ಞಾನ ಬಿಡಬೇಕು, ಇಲ್ಲದೆ ಅದನ್ನು ಸರಿಯಾಗಿ ಬಳಸಿಕೊಳ್ಳಿ ಎಂದಿದ್ದಾರೆ.

ಅಸಲಿಗೆ ಆಗಿದ್ದೇನು?

ಸಂಜು ಸ್ಯಾಮ್ಸನ್​​​ ಸಿಕ್ಸ್​ ಬಾರಿಸಲು ಹೋದಾಗ ಕ್ಯಾಚ್​ ಹೋಯ್ತು. ಕ್ಯಾಚ್​ ಹಿಡಿದಾಗ ಪ್ಲೇಯರ್​​ ಕಾಲು ಬೌಂಡರಿಗೆ ಟಚ್​ ಆಗಿತ್ತು. ಮೂರನೇ ಅಂಪೈರ್ 3 ನಿಮಿಷಗಳ ಕಾಲ ಸಂಜು ಸ್ಯಾಮ್ಸನ್‌ ಔಟ ಆದ ಬಗ್ಗೆ ಪರಿಶೀಲಿಸುತ್ತಿದ್ದರು. ಬಳಿಕ ಕೇವಲ ಒಂದೇ ಒಂದು ನಿಮಿಷದಲ್ಲಿ ಔಟ್​ ಎಂದು ತೀರ್ಪು ನೀಡಿದ್ರು.

ಇದನ್ನೂ ಓದಿ: ಆರ್​​​​ಸಿಬಿಗೆ ಬಿಗ್​ ಶಾಕ್​​.. ಐಪಿಎಲ್​ ಟೂರ್ನಿಯಿಂದಲೇ ಸ್ಟಾರ್​ ಪ್ಲೇಯರ್​ ಔಟ್​​!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಅಂದು ಕೊಹ್ಲಿ, ಇಂದು ಸಂಜು ಸ್ಯಾಮ್ಸನ್​​.. ಆಕ್ರೋಶ ಹೊರಹಾಕಿದ ಟೀಮ್​ ಇಂಡಿಯಾ ಮಾಜಿ ಕ್ರಿಕೆಟರ್​​

https://newsfirstlive.com/wp-content/uploads/2024/05/Samson_Kohli.jpg

Load More