Advertisment

ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್.. ಬಳ್ಳಾರಿಗೆ ತೆರಳಲು ಸುಪ್ರೀಂಕೋರ್ಟ್ ಅನುಮತಿ

author-image
AS Harshith
Updated On
ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್.. ಬಳ್ಳಾರಿಗೆ ತೆರಳಲು ಸುಪ್ರೀಂಕೋರ್ಟ್ ಅನುಮತಿ
Advertisment
  • ಅಕ್ರಮ ಗಣಿಗಾರಿಕೆ ಕೇಸ್​​ನಲ್ಲಿ​​ ಸಿಲುಕಿದ್ದ ಮಾಜಿ ಸಚಿವ
  • ಷರತ್ತುಬದ್ಧ ಅನುಮತಿ ತೆಗೆದು ಹಾಕಿದ ಸುಪ್ರೀಂಕೋರ್ಟ್
  • ಬಳ್ಳಾರಿಗೆ ತೆರಳಲು ಸುಪ್ರೀಂಕೋರ್ಟ್ ಪೂರ್ಣ ಅನುಮತಿ

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್ ಸಿಕ್ಕಿದೆ. ಬಳ್ಳಾರಿಗೆ ತೆರಳಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ.

Advertisment

ಅಕ್ರಮ ಗಣಿಗಾರಿಕೆ ಕೇಸ್​​ ಹಿನ್ನೆಲೆ ಕೋರ್ಟ್​​ ಗಾಲಿ ಜನಾರ್ದನ ರೆಡ್ಡಿ ಅವರಿಗೆ ನಿರ್ಬಂಧ ಹೇರಿತ್ತು. ಬಳ್ಳಾರಿಗೆ ತೆರಳದಂತೆ ನಿರ್ಬಂಧ ವಿಧಿಸಿತ್ತು. ಆ ಬಳಿಕ ಸುಪ್ರೀಂ ಕೋರ್ಟ್​​ನ ನ್ಯಾಯಮೂರ್ತಿ ವಿನೀತ್ ಶರಣ್ ಅವರಿದ್ಧ ನ್ಯಾಯಪೀಠ, ಬಳ್ಳಾರಿಗೆ ತೆರಳಲು ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಷರತ್ತುಬದ್ಧ ಅನುಮತಿ ನೀಡಿತ್ತು.

ಇದನ್ನೂ ಓದಿ: ಭಯಾನಕವಾಗಿ ಪಲ್ಟಿಯಾದ KSRTC ಬಸ್​.. 20ಕ್ಕೂ ಹೆಚ್ಚು ಜನರು ಗಂಭೀರ

ಇದೀಗ  ಬಳ್ಳಾರಿಗೆ ತೆರಳಲು ಸುಪ್ರೀಂಕೋರ್ಟ್ ಪೂರ್ಣ ಅನುಮತಿ ನೀಡಿದೆ. ನ್ಯಾ. ಎಂ ಎಂ ಸುಂದರೇಶ್ ನೇತೃತ್ವದ ದ್ವಿಸದಸ್ಯ ಪೀಠ ಆದೇಶ ಹೊರಡಿಸಿದೆ. ಗಾಲಿ ಜನಾರ್ದನ ರೆಡ್ಡಿಯವರು ಯಾವುದೇ ಪೂರ್ವಾನುಮತಿ ಇಲ್ಲದೆ ಬಳ್ಳಾರಿಗೆ ತೆರೆಳಲು ಅವಕಾಶ ಒದಗಿಸಿದೆ.

ಇದನ್ನೂ ಓದಿ: ಬಾಹ್ಯಾಕಾಶ ತಲುಪಿದ ‘ಡ್ರ್ಯಾಗನ್’​​.. ಆಪತ್ಭಾಂದವರನ್ನ ಸ್ವಾಗತಿಸಿ ಅಪ್ಪುಗೆ ನೀಡಿದ ಸುನೀತಾ ಮತ್ತು ವಿಲ್ಮೋರ್​​

Advertisment

ಈ ಹಿಂದೆ ಬಳ್ಳಾರಿಗೆ ಹೋದಾಗಲೆಲ್ಲಾ ಎಸ್ಪಿಗೆ ಮಾಹಿತಿ ನೀಡುವಂತೆ ಷರತ್ತು ವಿಧಿಸಲಾಗಿತ್ತು. ಈ ಕುರಿತಂತೆ ಮತ್ತೆ ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್​ ಜಾಮೀನು ಷರತ್ತು ಮಾರ್ಪಾಡಿಸಿತ್ತು. ಆದರೀಗ ಪೂರ್ವಾನುಮತಿ ಇಲ್ಲದೆ ತೆರಳಲು ಅವಕಾಶ ಒದಗಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment