newsfirstkannada.com

×

ಬಾಹ್ಯಾಕಾಶ ತಲುಪಿದ ‘ಡ್ರ್ಯಾಗನ್’​​.. ಆಪತ್ಭಾಂದವರನ್ನ ಸ್ವಾಗತಿಸಿ ಅಪ್ಪುಗೆ ನೀಡಿದ ಸುನೀತಾ ಮತ್ತು ವಿಲ್ಮೋರ್​​

ಫೋಟೋ ಕೃಪೆ: ನಾಸಾ

Share :

Published September 30, 2024 at 11:26am

Update September 30, 2024 at 12:28pm

    ಯಶಸ್ವಿಯಾಗಿ ಬಾಹ್ಯಾಕಾಶ ತಲುಪಿದ ಡ್ರ್ಯಾಗನ್ ನೌಕೆ

    ಅಲೆಕ್ಸಾಂಡರ್ ಮತ್ತು ನಿಕ್​ ಕಂಡು ಹಗ್​ ಮಾಡಿದ ಸುನೀತಾ

    ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸುವ ಕಾರ್ಯ ಆರಂಭ

ಭಾರತೀಯ ಮೂಲದ ಸುನೀತಾ ವಿಲಿಯಮ್ಸ್​ ಮತ್ತು ಬುಚ್​ ವಿಲ್ಮೋರ್​ ಬಾಹ್ಯಾಕಾಶದಲ್ಲಿ ಸಿಲುಕಿ 3 ತಿಂಗಳುಗಳು ಕಳೆದಿವೆ. ಹೀಲಿಯಂ ಸೋರಿಕೆ ಸಮಸ್ಯೆಯಿಂದ ನಭದಲ್ಲೇ ಬಾಕಿಯಾಗಿದ್ದರು. ಆದರೆ ಇವರನ್ನು ಕರೆತರಲು ಸ್ಪೇಸ್​ ಎಕ್ಸ್​ನ ಕ್ರೂ-9 ‘ಡ್ರ್ಯಾಗನ್​ ’ ನೌಕೆಯನ್ನು ಶನಿವಾರದಂದು ಉಡಾವಣೆ ಮಾಡಲಾಗಿದ್ದು, ಯಶಸ್ವಿಯಾಗಿ ಬಾಹ್ಯಕಾಶವನ್ನು ತಲುಪಿದೆ.

ನಾಸಾ ಸುನೀತಾ ವಿಲಿಯಮ್ಸ್​ ಮತ್ತು ಬುಚ್​ ವಿಲ್ಮೋರ್​ ಇರುವ ನೌಕೆಯಲ್ಲಿನ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲು ಮತ್ತು ಅವರಿಬ್ಬರನ್ನು ಸುರಕ್ಷಿತವಾಗಿ ಭೂಮಿಗೆ ಕರೆತರಲು ಗಗನಯಾತ್ರಿ ನಿಕ್​ ಹೇಗ್​ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್​​ ಗೊರ್ಬುನೊವ್​​ ಅವರನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ.

ಇದನ್ನೂ ಓದಿ: ಕೋಟಿ ಕೋಟಿ ಹಣ ಕಳೆದುಕೊಂಡ MS ಧೋನಿ.. ಮಾಜಿ ಕ್ಯಾಪ್ಟನ್ ಲಾಸ್ ಆಗಿದ್ದು ಹೇಗೆ?

ಸದ್ಯ ನಭಕ್ಕೆ ‘ಡ್ರ್ಯಾಗನ್​’ ನೌಕೆ ತಲುಪಿದ್ದು, ವಿಲಿಯಮ್ಸ್​ ಮತ್ತು ವಿಲ್ಮೋರ್​ ಅವರನ್ನು ಭೇಟಿ ಮಾಡಿದ್ದಾರೆ. ಅತ್ತ ಅಲೆಕ್ಸಾಂಡರ್ ಮತ್ತು ನಿಕ್​ ಕಂಡು ಇಬ್ಬರು ಖುಷಿಯಲ್ಲಿ ಪ್ರೀತಿಯ ಹಗ್​​ ಮಾಡಿ ಸ್ವಾಗತಿಸಿದ್ದಾರೆ.

ಇದನ್ನೂ ಓದಿ: ಇಂದು ದರ್ಶನ್​​ ಸೇರಿ 5 ಜನ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ.. ಮಹತ್ವದ ಬದಲಾವಣೆ ಆಗುತ್ತಾ?

ಡ್ರ್ಯಾಗನ್​​ ವ್ಯೋಮ ನೌಕೆ ಕೇಪ್​​ ಕ್ಯಾನವೆರಲ್​​ ಸ್ಪೇಸ್​​ ಪೋರ್ಸ್​​ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಸದ್ಯ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ಮುಂದಿನ ವರ್ಷ ಫೆಬ್ರವರಿ ತಿಂಗಳಿನಲ್ಲಿ ಸುನಿತಾ ವಿಲಿಯಮ್ಸ್​ ಮತ್ತು ಉಳಿದ ಮೂರು ಹಿಂತಿರುಗಲಿದ್ದಾರೆ.

ಕ್ರೂ-8 ಮಿಷನ್​​ನಲ್ಲಿರುವ ನಾಲ್ವರು ಗಗನಯಾತ್ರಿಗಳು ಅಕ್ಟೋಬರ್​ ಮೊದಲ ವಾರ ಭೂಮಿಗೆ ಹಿಂತಿರುಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಹ್ಯಾಕಾಶ ತಲುಪಿದ ‘ಡ್ರ್ಯಾಗನ್’​​.. ಆಪತ್ಭಾಂದವರನ್ನ ಸ್ವಾಗತಿಸಿ ಅಪ್ಪುಗೆ ನೀಡಿದ ಸುನೀತಾ ಮತ್ತು ವಿಲ್ಮೋರ್​​

https://newsfirstlive.com/wp-content/uploads/2024/09/Nasa-1.jpg

Load More