IPL ಟೀಮ್ನಲ್ಲಿ ಈ ಸಲ 6 ಪ್ಲೇಯರ್ಸ್ ರಿಟೈನ್ಗೆ ಚಾನ್ಸ್
ಚೆನ್ನೈ ಸೂಪರ್ ಕಿಂಗ್ಸ್ನಲ್ಲಿ ಮತ್ತೆ ಎಂ.ಎಸ್ ಧೋನಿ ಹವಾ
ಐಪಿಎಲ್ನಲ್ಲಿ ಎಷ್ಟು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ?
2025ರ ಇಂಡಿಯನ್ ಪ್ರೀಮಿಯರ್ ಲೀಗ್ನ ಮೆಗಾ ಹರಾಜು ಈ ವರ್ಷದ ಕೊನೆಗೆ ನಡೆಯಲಿದ್ದು ಭಾರೀ ಕುತೂಹಲ ಮೂಡಿಸಿದೆ. ಈಗಾಗಲೇ ಐಪಿಎಲ್ ಪ್ರಕ್ರಿಯೆಗೆ ಸಿದ್ಧತೆ ಭರದಿಂದ ನಡೆಯುತ್ತಿವೆ. ಆಟಗಾರರನ್ನ ರಿಟೈನ್ ಮಾಡಿಕೊಳ್ಳುವ ಕುರಿತು ಬಿಸಿಸಿಐ ನಿರ್ಧಾರ ಪ್ರಕಟ ಮಾಡಿದೆ. ಇದರ ಜೊತೆಗೆ ಅನ್ಕ್ಯಾಪ್ಡ್ ಪ್ಲೇಯರ್ ಆಗಿ ಅಖಾಡಕ್ಕೆ ಇಳಿಯುತ್ತಿರುವ ಎಂ.ಎಸ್ ಧೋನಿ ಕೋಟಿ ಕೋಟಿ ರೂಪಾಯಿಗಳನ್ನ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: 2025 IPL; ವಿದಾಯದ ಬೆನ್ನಲ್ಲೇ CSKಗೂ ಬಿಗ್ ಶಾಕ್ ಕೊಟ್ಟ ಕೋಚ್ ಡ್ವೇನ್ ಬ್ರಾವೋ
ಐಪಿಎಲ್ 2008ರ ನಿಯಮದ ಪ್ರಕಾರ ಯಾವುದೇ ಪ್ಲೇಯರ್ ಇಂಟರ್ನ್ಯಾಷನಲ್ ಕ್ರಿಕೆಟ್ನಿಂದ ನಿವೃತ್ತಿಯಾದ್ರೆ ಅಥವಾ ಬಿಸಿಸಿಐ ಒಪ್ಪಂದದಿಂದ 5 ವರ್ಷ ದೂರವಿದ್ದರೇ ಆ ಆಟಗಾರನನ್ನ ಅನ್ಕ್ಯಾಪ್ಡ್ ಪ್ಲೇಯರ್ ಪಟ್ಟಿಗೆ ಸೇರಿಸಲಾಗುತ್ತದೆ. 2021ರ ವರೆಗೆ ಈ ರೂಲ್ಸ್ ಬಳಕೆಗೆ ಬಾರದ ಕಾರಣ ರದ್ದುಗೊಳಿಸಲಾಗಿತ್ತು. ಆದರೆ ಇದೀಗ ಎಂಎಸ್ ಧೋನಿಗಾಗಿ ಇದನ್ನು ಮತ್ತೆ ಆರಂಭಿಸಲಾಗಿದೆ. ಧೋನಿ ಈ ಸಲ ಅನ್ಕ್ಯಾಪ್ಡ್ ಪ್ಲೇಯರ್ ಆಗಿ ಚೆನ್ನೈ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಸಂಭಾವನೆಯಲ್ಲಿ ಭಾರೀ ಕಡಿತವಾಗಿದೆ.
ಇದನ್ನೂ ಓದಿ: 6 ಆಟಗಾರರ ರಿಟೈನ್ಗೆ ಅನುಮತಿ.. ಧೋನಿಗೂ ಗುಡ್ನ್ಯೂಸ್ ಕೊಟ್ಟ ಬಿಸಿಸಿಐ..!
2022ರ ಆವೃತ್ತಿಯಲ್ಲಿ ಮಾಜಿ ಕೂಲ್ ಕ್ಯಾಪ್ಟನ್ ಧೋನಿ ರಿಟೈನ್ ಆಟಗಾರನಾಗಿ ಸಿಎಸ್ಕೆಯಿಂದ 12 ಕೋಟಿ ಪಡೆಯುತ್ತಿದ್ದರು. ಕಳೆದ ಸೀಸನ್ನಲ್ಲೂ ಸಿಎಸ್ಕೆ ಫ್ರಾಂಚೈಸಿ 12 ಕೋಟಿ ರೂ.ಗಳನ್ನ ನೀಡಿ ತಂಡದಲ್ಲೇ ಉಳಿಸಿಕೊಂಡಿತ್ತು. ಆದರೆ ಈಗ ಧೋನಿ ಅನ್ಕ್ಯಾಪ್ಡ್ ಪ್ಲೇಯರ್ ಆಗಿ ಅಖಾಡಕ್ಕೆ ಇಳಿಯುತ್ತಿದ್ದು 8 ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳಲ್ಲಿದ್ದಾರೆ. ಹೀಗಾಗಿ ಕೇವಲ 4 ಕೋಟಿ ರೂಪಾಯಿ ಮಾತ್ರ ಈ ಬಾರಿ ಸಂಭಾವನೆ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ