/newsfirstlive-kannada/media/post_attachments/wp-content/uploads/2024/09/cremated-ashes.jpg)
ಟೋಕಿಯೋ: ಮನುಷ್ಯನ ದೇಹ ನಶ್ವರ ಅಂತಾರೆ, ಒಮ್ಮೆ ಉರಿದು ಬೂದಿಯಾದರೆ ಅದೊಂದು ಬರೀ ಅಸ್ಥಿಪಂಜರ (Human skeleton) ಅದಕ್ಯಾವ ಬೆಲೆಯೂ ಇಲ್ಲ ಅನ್ನೋ ವೇದಾಂತದ ಮಾತುಗಳು ನಮ್ಮಲ್ಲಿ ರೂಢಿ ಇವೆ. ಆದ್ರೆ ಜಪಾನಿಯರು (Japanes) ಅದೇ ಬೂದಿಯಿಂದ ಕೋಟಿ ಕೋಟಿ ರೂಪಾಯಿ ಗಳಿಸಿದ ಸುದ್ದಿ ಈಗ ಜೋರಾಗಿ ಹರಡುತ್ತಿದೆ. ಜಪಾನಿನ ಅನೇಕ ನಗರಗಳಲ್ಲಿ ಮೃತವ್ಯಕ್ತಿಯ ಅಂತ್ಯಕ್ರಿಯೆಯಾದ ಬೂದಿಯನ್ನು ತೆಗೆದುಕೊಂಡು ಅದರಲ್ಲಿರುವ ಅಸ್ತಿಯೊಳಗಿನ ಮೆಟಲ್ಗಳನ್ನು ಆಚೆ ತೆಗೆದು ಕೋಟಿ ಕೋಟಿ ರೂಪಾಯಿ ಗಳಿಸುತ್ತಿದ್ದಾರೆ ಎಂಬ ಸುದ್ದಿ ಈಗ ದೊಡ್ಡದಾಗಿ ಹಬ್ಬಿದೆ.
ಇದನ್ನೂ ಓದಿ: ‘ಹೆದ್ದಾರಿ ಕಳ್ಳರ’ ಕೈಚಳಕ.. ಕಾರು ಅಡ್ಡಗಟ್ಟಿ 1 ಕೋಟಿ ನಗದು, 350KG ಬೆಳ್ಳಿ ಗಟ್ಟಿ ದೋಚಿ ಪರಾರಿ
ಜಪಾನಿನಲ್ಲಿ ಈ ಒಂದು ವ್ಯಾಪಾರ ವ್ಯಾಪಕವಾಗಿ ಹರಡಿದೆ. ಸುಟ್ಟ ಮೃತದೇಹದ ಎಲುಬುಗಳಲ್ಲಿ ಅನೇಕ ರೀತಿಯ ಮೆಟಲ್ಗಳನ್ನು ತೆಗೆದುಕೊಂಡು ಅವುಗಳನ್ನು ಮಾರುವ ಮೂಲಕ ಹಣ ಗಳಿಸುವ ಒಂದು ದಂಧೆ ಈಗ ಜಪಾನ್ನಲ್ಲಿ ಚಾಲ್ತಿಯಲ್ಲಿದೆ. ಅದರಲ್ಲೂ ಡೆಂಟಲ್ ಸಮಸ್ಯೆಯಿಂದ ಹಲ್ಲಿನಲ್ಲಿ ಬಂಗಾರದ ಹಾಗೂ ಬೆಳ್ಳಿಯ ಕ್ಯಾಪಿಂಗ್ಗಳನ್ನು ತೆಗೆದು ಮಾರುವ ದೊಡ್ಡ ದಂಧೆಯೊಂದು ಸುಮಾರು 14 ವರ್ಷಗಳಿಂದ ಜೋರಾಗಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾನ ಬೇಟೆಯಾಡಿದ ಇಸ್ರೇಲ್ ಸೇನೆ.. ಒಳಗೊಳಗೆ ಸಂತಸ ಪಟ್ಟ ಅಮೆರಿಕ!
ನಿಕ್ಕಿ ಏಷಿಯಾ ಮಾಡಿದ ವರದಿಯ ಪ್ರಕಾರ ಜಪಾನ್ನಲ್ಲಿರುವ 88 ನಗರಗಳ ಪೈಕಿ 42 ಸಿಟಿಗಳಲ್ಲಿ ಈ ಒಂದು ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಬೂದಿಯಿಂದ ಅಸ್ತಿಗಳನ್ನು ಆರಿಸಿಕೊಂಡು ಅವುಗಳಲ್ಲಿ ಸಿಗುವ ಲೋಹಗಳನ್ನು ತೆಗೆದುಕೊಂಡು ವ್ಯಾಪಾರ ಮಾಡುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜಪಾನ್ನಲ್ಲಿರುವ ಶೇಕಡಾ 97 ರಷ್ಟು ಸ್ಮಶಾನಗಳು ಸಾರ್ವಜನಿಕ ಸ್ಮಶಾನಗಳಾಗಿವೆ. ಅಲ್ಲಿ ಯಾವುದೇ ರೀತಿಯ ಅಡೆತಡೆಗಳಿಲ್ಲ. ಹೀಗಾಗಿ ಅಲ್ಲಿ ನಡೆಯುವ ಅಂತ್ಯಕ್ರಿಯೆಯಗಳನ್ನು ನೋಡಿ ಬೂದಿಯನ್ನು ತೆಗೆದುಕೊಂಡು ಬಂದು ಅದರಲ್ಲಿರುವ ಲೋಹಗಳನ್ನು ತೆಗೆದು ಮಾರಲಾಗುತ್ತಿದೆ.
ಅಪಘಾತಕ್ಕಿಡಾಗಿ ಕೈ, ಕಾಲು ಮುರಿದುಕೊಂಡವರು ಶಸ್ತ್ರ ಚಿಕಿತ್ಸೆಗೊಳಗಾಗಿ ರಾಡ್ಗಳನ್ನು ಹಾಕಿಸಿಕೊಂಡು ಸರಿಯಾಗಿರುತ್ತಾರೆ. ಅಂತಹ ಲೋಹಗಳು ಹಾಗೂ ಹಲ್ಲುಗಳಿಗೆ ಹಾಕಿಸಿಕೊಂಡಿರುವ ಬಂಗಾರದ ಮತ್ತು ಬೆಳ್ಳೆಯ ಕ್ಯಾಪ್ಗಳನ್ನು ಹುಡುಕಿ ತೆಗೆದು ಮಾರಾಟ ಮಾಡಿ ಹಣ ಗಳಿಸಲಾಗುತ್ತಿದೆಯಂತೆ. ಒಂದು ಅಂದಾಜಿನ ಪ್ರಕಾರ 2023ರಲ್ಲಿ ಈ ರೀತಿಯ ವ್ಯಾಪಾರದಿಂದ ಒಟ್ಟು 376 ಕೋಟಿ ರೂಪಾಯಿ ಗಳಿಸಲಾಗಿದೆ ಎಂದು ವರದಿಯಾಗಿದೆ. ಟೋಕಿಯೊ ಹೊರತುಪಡಿಸಿ ಉಳಿದ ಅನೇಕ ನಗರಗಳಲ್ಲಿ ಈ ಒಂದು ವ್ಯಾಪಾರ ಈಗ ದೊಡ್ಡದಾಗಿ ಸೌಂಡ್ ಮಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ