ಬೂಮ್ರಾ ಎಸೆತಕ್ಕೆ ಕೊಹ್ಲಿ ಔಟ್.. ಫ್ಯಾನ್ಸ್ ನಿರೀಕ್ಷೆ ಹುಸಿ
ಸೊನ್ನೆ ಸುತ್ತಿದ ಮ್ಯಾಕ್ವೆಲ್ ಆಟಕ್ಕೆ ಕೋಪಗೊಂಡ ಫ್ಯಾನ್ಸ್
ದಾಖಲೆ ಬರೆಯಲು ರೆಡಿಯಾಗಿ ಬಂದಿದ್ದ ಕಿಂಗ್ ಕೊಹ್ಲಿ
RCBvsMI: ಟಾಸ್ ಗೆದ್ದ ಆರ್ಸಿಬಿ ಬ್ಯಾಟಿಂಗ್ ಆಯ್ದುಕೊಂಡಿತಾದರು ನಾಯಕ ಫಾಫ್ ಡು ಪ್ಲೇಸಿಸ್ ಜೊತೆಗೆ ಮೊದಲು ಬ್ಯಾಟಿಂಗ್ಗೆ ಇಳಿದ ಕೊಹ್ಲಿ ಮಾತ್ರ ಆರಂಭದಲ್ಲೇ ನಿರಾಸೆ ಮೂಡಿಸಿದರು. 9 ಎಸೆತಕ್ಕೆ 3 ರನ್ ಬಾರಿಸಿ ಜಸ್ಟ್ರೀತ್ ಬೂಮ್ರಾ ಎಸೆತಕ್ಕೆ ಕೀಪರ್ ಕ್ಯಾಚ್ ನೀಡಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.
ಇಂದು ಕೊಹ್ಲಿ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇತ್ತಾದರೂ ಬೂಮ್ರಾ ಅದನ್ನು ಅಡ್ಡಗಟ್ಟಿದ್ದಾರೆ. ತನ್ನ ಮೊದಲ ಓವರ್ನಲ್ಲೇ ಕೊಹ್ಲಿಯ ವಿಕೆಟ್ ತೆಗೆಯುವ ಮೂಲಕ ಸಂಭ್ರಮಿಸಿದ್ದಾರೆ.
ಮತ್ತೊಂದೆಡೆ ಕೊಹ್ಲಿ ಹೆಸರನ್ನಿಟ್ಟುಕೊಂಡು ಆರ್ಸಿಬಿ ಅಭಿಮಾನಿಗಳು ಇಂದು ಹಲವು ವಿಚಾರಗಳಿಗೆ ಸಂಭ್ರಮಿಸಲು ಅವಕಾಶವಿತ್ತು. ಕೆಲವೊಂದು ದಾಖಲೆಯನ್ನು ಕೊಹ್ಲಿ ಬರೆಯಲಿದ್ದಾರೆ ಎಂಬ ಕನಸು ಕಂಡಿದ್ದರು. ಆದರೆ ಬೂಮ್ರಾ ದಾಳಿಗೆ ಕೊಹ್ಲಿ ವಿಕೆಟ್ ಒಪ್ಪಿಸಿದರು.
ಇನ್ನು ಕೊಹ್ಲಿ ಬಳಿಕ ಬಂದ ವಿಲ್ ಜಾಕ್ಸ್ ಕೂಡ ನಿರೀಕ್ಷೆಯಾಟವಾಡಲಿಲ್ಲ. 6 ಎಸೆತದಲ್ಲಿ 2 ಬೌಂಡರಿ ಬಾರಿಸಿ 8 ರನ್ ಕಲೆ ಹಾಕಿದರು.
Will Jacks Received RCB Debut Cap from King Kohli 🔥#RCBvsMI #ViratKohli pic.twitter.com/d3Xrxa9UHy
— 𝗦𝗵𝗿𝗲𝘆𝗶 ᵀᵒˣᶦᶜ (@NameIsShreyash) April 11, 2024
ಸೊನ್ನೆ ಸುತ್ತಿದ ಮ್ಯಾಕ್ಸ್ವೆಲ್
ಮ್ಯಾಕ್ಸ್ವೆಲ್ ಸಾಧಾರಣ ಆಟಗಾರನಂತೂ ಅಲ್ವೇ ಅಲ್ಲ. ಆದರೆ ಇದುವರೆಗಿನ ಆರ್ಸಿಬಿ ಪಂದ್ಯದಲ್ಲಿ ಮ್ಯಾಕ್ಸ್ವೆಲ್ ಮಾತ್ರ ನಿರೀಕ್ಷೆಯ ಆಟವನ್ನು ಇದುವರೆಗೆ ಆಡಿಲ್ಲ. ಇಂದು ಕೂಡ ಮುಂಬೈ ವಿರುದ್ಧ 4 ಎಸೆತ ಎದುರಿಸಿ ಸೊನ್ನೆ ಸುತ್ತಿ ಪೆವಿಲಿಯನತ್ತ ಸಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ