Advertisment

ರೋಹಿತ್, ಪಾಂಡ್ಯ, ಪಂತ್..! ಚಾಂಪಿಯನ್ಸ್​ ಟ್ರೋಫಿ ಟೂರ್ನಿಗೆ ಕ್ಯಾಪ್ಟನ್ ಹೆಸರು ಕನ್ಫರ್ಮ್​ ಮಾಡಿದ ಜಯ್ ಶಾ

author-image
Ganesh
Updated On
ಜಸ್ಟ್ 35 ವರ್ಷಕ್ಕೆ ICC ಬಾಸ್.. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಆಯ್ಕೆಯಾದ ಜಯ್ ಶಾ ದಾಖಲೆಗಳೇನು?
Advertisment
  • ಫೆಬ್ರವರಿಯಲ್ಲಿ ಚಾಂಪಿಯನ್ಸ್​ ಟ್ರೋಫಿ ಪಂದ್ಯಾವಳಿ
  • ಈ ಬಾರಿ ಪಾಕ್ ಕ್ರಿಕೆಟ್ ಮಂಡಳಿ ಆತಿಥ್ಯ ವಹಿಸಲಿದೆ
  • ಟೆಸ್ಟ್​​​ ಕ್ರಿಕೆಟ್​ನಲ್ಲಿ ಅಗ್ರ ಸ್ಥಾನದಲ್ಲಿರುವ ಭಾರತ ತಂಡ

ಮುಂದೆ ಬರಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳಲ್ಲಿ ರೋಹಿತ್ ಶರ್ಮಾ ಅವರೇ ನಾಯಕರಾಗಿ ಇರಲಿದ್ದಾರೆ ಎಂದು ಬಿಸಿಸಿಐ ಸೆಕ್ರೆಟರಿ ಜಯ್ ಶಾ ಮಾಹಿತಿ ನೀಡಿದ್ದಾರೆ.

Advertisment

ವಿಶ್ವಕಪ್ ಗೆದ್ದ ಬೆನ್ನಲ್ಲೇ ಟಿ20 ಕ್ರಿಕೆಟ್​ಗೆ ರೋಹಿತ್ ಶರ್ಮಾ ಗುಡ್​ಬೈ ಹೇಳಿದ್ದಾರೆ. ಬೆನ್ನಲ್ಲೇ ಏಕದಿನ ಹಾಗೂ ಟೆಸ್ಟ್​ ಕ್ರಿಕೆಟ್​ನ ಕ್ಯಾಪ್ಟನ್ಸಿಯನ್ನು ಯುವಕರಿಗೆ ಬಿಟ್ಟುಕೊಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಊಹಾಪೋಹಗಳಿಗೆ ಜಯ್ ಶಾ ತೆರೆ ಎಳೆದಿದ್ದಾರೆ.

ಇದನ್ನೂ ಓದಿ:ರಾಜ್ಯದ ಈ ಜಿಲ್ಲೆಯಲ್ಲಿ ಇಲಿ ಜ್ವರ, ಭಾರೀ ಆತಂಕ.. ಆರೋಗ್ಯ ಅಧಿಕಾರಿಗಳು ಗ್ರಾಮಕ್ಕೆ ದೌಡು

ವಿಶ್ವಕಪ್​​ ತಂದುಕೊಟ್ಟ ನಾಯಕ ರೋಹಿತ್ ಶರ್ಮಾ. ಮುಂದೆ ಐಸಿಸಿಯಿಂದ WTC ಫೈನಲ್ ಹಾಗೂ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಳು ನಡೆಯಲಿವೆ. ನನಗಂತೂ ತಂಡದ ಮೇಲೆ ವಿಶ್ವಾಸ ಇದೆ. ರೋಹಿತ್ ಶರ್ಮಾ ಅವರೇ ಕ್ಯಾಪ್ಟನ್ಸಿಯಾಗಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದಿದ್ದಾರೆ.

Advertisment

ಇದೇ ತಿಂಗಳು ಭಾರತ ತಂಡ ಶ್ರೀಲಂಕ ಪ್ರವಾಸ ಕೈಗೊಳ್ಳಲಿದೆ. ತಂಡದ ಹಿರಿಯ ಆಟಗಾರರು ಇನ್ಮುಂದೆ ಏಕದಿನ ಹಾಗೂ ಟೆಸ್ಟ್​​ ಪಂದ್ಯಗಳ ಮೇಲೆ ಹೆಚ್ಚು ಗಮನ ಹರಿಸಲಿದ್ದಾರೆ. ಭಾರತ ತಂಡವು ಟೆಸ್ಟ್​ ಚಾಂಪಿಯನ್​ಶಿಪ್​​ನಲ್ಲಿ ಸದ್ಯ ಅಗ್ರ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಬಾಂಗ್ಲಾದೇಶ, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಪಂದ್ಯಗಳನ್ನು ಆಡಲಿದೆ. ಚಾಂಪಿಯನ್ಸ್​ ಟ್ರೋಫಿಯು 2025 ಫೆಬ್ರವರಿ ಹಾಗೂ ಮಾರ್ಚ್​​ನಲ್ಲಿ ನಡೆಯಲಿದೆ.

ಇದನ್ನೂ ಓದಿ:47 ಬಾಲ್​​ನಲ್ಲಿ 100 ರನ್; ಶತಕದ ಹಿಂದಿನ ಅಸಲಿ ಕತೆ ಬಿಚ್ಚಿಟ್ಟ ಅಭಿಶೇಕ್ ಶರ್ಮಾ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment