/newsfirstlive-kannada/media/post_attachments/wp-content/uploads/2024/08/JAY-SHAH-ICC-PRESIDENT-2.jpg)
ನವದೆಹಲಿ: ಬಿಸಿಸಿಐ ಕಾರ್ಯದರ್ಶಿಯಾಗಿರುವ ಜಯ ಶಾ, ಐಸಿಸಿ ಅಧ್ಯಕ್ಷರಾಗುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಬರುವ ನವೆಂಬರ್​ನಲ್ಲಿ​ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಗ್ರೇಗ್ ಬರ್ಕಲಿ ಅವರ ಅವಧಿ ಅಂತ್ಯವಾಗಲಿದೆ. ಅವರ ಜಾಗಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ ಜಯ್ ಶಾ ಬಂದು ಕೂರಲಿದ್ದಾರೆ ಅನ್ನೋದು ಬಹುತೇಕ ಖಾತ್ರಿಯಾಗಿದೆ.
/newsfirstlive-kannada/media/post_attachments/wp-content/uploads/2024/08/JAY-SHAH-ICC-PRESIDENT.jpg)
ಐಸಿಸಿ ಯಲ್ಲಿ ಅಧ್ಯಕ್ಷ ಸ್ಥಾನವನ್ನು ಪಡೆಯಲು ಚುನಾವಣೆ ಎದುರಿಸಬೇಕು. ಐಸಿಸಿಯಲ್ಲಿ ಒಟ್ಟು 16 ರಾಷ್ಟ್ರಗಳು ಮತದಾನದ ಅಧಿಕಾರ ಹೊಂದಿವೆ. ಈ 16 ರಾಷ್ಟ್ರಗಳಲ್ಲಿ ಬಹುತೇಕ ರಾಷ್ಟ್ರಗಳಿಂದ ಜಯ್ ಶಾಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಅಫ್ಘಾನಿಸ್ತಾನ್, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್​, ಭಾರತ, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್​ ಇಂಡಿಸ್, ಜಿಂಬಾಂಬ್ವೆ ಬೆಂಬಲ ನೀಡುವ ಅಗತ್ಯವಿದೆ.
/newsfirstlive-kannada/media/post_attachments/wp-content/uploads/2024/08/JAY-SHAH-ICC-PRESIDENT-1.jpg)
ಆಸ್ಟ್ರೇಲಿಯಾ ಇಂಗ್ಲೆಂಡ್​ ದೇಶಗಳು ಈಗಾಗಲೇ ಜಯ್ ಶಾಗೆ ಬೆಂಬಲ ಘೋಷಿಸಿವೆ. ಇನ್ನುಳಿದ ರಾಷ್ಟ್ರಗಳು ಕೂಡ ಜಯ್ ಶಾ ಪರವಾಗಿ ವೋಟ್ ಹಾಕು ಸಾಧ್ಯತೆ ಇದ್ದು, 35ನೇ ವಯಸ್ಸಿಗೆ ಜಯ್ ಶಾಗೆ ಐಸಿಸಿ ಅಧ್ಯಕ್ಷ ಸ್ಥಾನ ಸಿಗುವ ಅದೃಷ್ಟ ಒಲಿಯುವುದು ಬಹುತೇಕ ಖಚಿತವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us