newsfirstkannada.com

‘TVಯಲ್ಲಿ ಜನ ಮಾತಾಡುವಂತೆ ವಿರಾಟ್​ ಕೊಹ್ಲಿ ಇಲ್ಲ’.. RCB ಬೌಲರ್ ಶಾಕಿಂಗ್​ ಹೇಳಿಕೆ!

Share :

Published August 21, 2024 at 2:11pm

    ಯುವ ಆಟಗಾರರೊಂದಿಗೆ ವಿರಾಟ್​ ಕೊಹ್ಲಿ ಹೇಗಿರುತ್ತಾರೆ?

    ಕಿಂಗ್ ಕೊಹ್ಲಿ ಬಗ್ಗೆ ಮಾತಾಡಿದ ಆರ್​ಸಿಬಿ ಯಂಗ್ ಬೌಲರ್

    RCB ಬೌಲರ್ ವಿರಾಟ್ ಕುರಿತು ಹೀಗಂತ ಹೇಳಬಹುದಾ?

ವಿರಾಟ್ ಕೊಹ್ಲಿ ಅಂದರೇನೆ ಹಂಗೆ ಎಲ್ಲರಿಗೂ ಇಷ್ಟ ಆಗೋ ವ್ಯಕ್ತಿತ್ವ. ಸ್ಟೇಡಿಯಂನಲ್ಲಿ ಬ್ಯಾಟಿಂಗ್​ನಿಂದ ಅಬ್ಬರಿಸೋ ಕಿಂಗ್ ಕೊಹ್ಲಿ ಯುವ ಪ್ಲೇಯರ್ಸ್​ ಎಂದರೆ ಅಚ್ಚುಮೆಚ್ಚು. ಅವರಿಗೆ ಬೇಕಾದ ಮಾರ್ಗದರ್ಶನ ನೀಡುವಲ್ಲಿ ಕೊಹ್ಲಿ ಒಂದು ಹೆಜ್ಜೆ ಮುಂದೆ ಇರುತ್ತಾರಂತೆ. ವಿರಾಟ್​ ಕೊಹ್ಲಿ ಕುರಿತು ಆರ್​ಸಿಬಿ ಬೌಲರ್​ ಯಶ್​ ದಯಾಳ್ ಪ್ರಶಂಸೆ ಮಾತಾಡಿದ್ದಾರೆ.

ಇದನ್ನೂ ಓದಿ: ಕುಸ್ತಿ ಅಖಾಡದಿಂದ ರಾಜಕೀಯಕ್ಕೆ ವಿನೇಶ್ ಫೋಗಟ್.. ಎಲೆಕ್ಷನ್​​ನಲ್ಲಿ ಬಬಿತಾ ಫೋಗಟ್ ವಿರುದ್ಧ ಸೈ ಅಂತಾರಾ?

ಸಂದರ್ಶನವೊಂದರಲ್ಲಿ ಮಾತನಾಡಿದ ಯಶ್​ ದಯಾಳ್, ಮೊದಲೇ ಮಂಕಾಗಿದ್ದ ನನಗೆ ಮತ್ತೆ ಕಾನ್ಫಿಡೆಂಟ್ ತುಂಬಿದ್ದು ವಿರಾಟ್ ಕೊಹ್ಲಿ. ಅವರ ಬೆಂಬಲ ಹೇಗಿತ್ತು ಎಂದರೆ ಸೀಸನ್​ ಫುಲ್ ನನಗೆ ಬೂಸ್ಟ್ ನೀಡಿದರು. ಇದರಿಂದ ತಂಡದಲ್ಲಿ ಎಲ್ಲರೊಂದಿಗೆ ಬೇಗ ಬೆರೆತೆ. ಹೊಸ ಜಾಗಕ್ಕೆ ಬಂದಿದ್ದೇನೆ ಅನಿಸಲಿಲ್ಲ. ಹಳೆದನ್ನ ಮರೆತು ಒಳ್ಳೆಯ ಪ್ರದರ್ಶನ ನೀಡಲು ಸಾಧ್ಯವಾಯಿತು. ಕೊಹ್ಲಿ ಭರವಸೆಗಳು, ಅವರ ವರ್ತನೆ, ಸ್ನೇಹ ಎಲ್ಲವೂ ಯುವ ಪ್ಲೇಯರ್ಸ್​​ಗೆ ಒಳ್ಳೆಯ ವಾತಾವರಣ ಸೃಷ್ಟಿಸುತ್ತದೆ ಎನ್ನುವುದಕ್ಕೆ ನಾನೇ ಉದಾಹರಣೆ. ಅವರು ನನಗೆ ಆಂಕಾರೇಜ್ ನೀಡಿದ್ದಕ್ಕೆ ತುಂಬಾ ಥ್ಯಾಂಕ್ಸ್ ಎಂದು ಹೇಳಿದರು.

ಇದನ್ನೂ ಓದಿ: KL ರಾಹುಲ್​ಗೆ ಮೋಸವಾಗುತ್ತಾ..? ಪಾಂಡ್ಯ ಖರೀದಿಗೆ ಕೋಟಿ ಕೋಟಿ ಹಣ ಸುರಿಯಲು​ ಮುಂದಾದ RCB

ಯುವ ಪ್ಲೇಯರ್ಸ್​ನೊಂದಿಗೆ ಕೊಹ್ಲಿ ಬೆರೆತು ಆಡುವುದು ಎಂದರೆ ಇಷ್ಟ ಪಡುತ್ತಾರೆ. ಅವರಿಗೆ ಪ್ರೋತ್ಸಾಹ ನೀಡ್ತಾರೆ. ಟಿವಿಯಲ್ಲಿ ಅವರ ಬಗ್ಗೆ ಬರುವ ನಕರಾತ್ಮಕ ಸುದ್ದಿಗಳಂತೆ ಅವರಿಲ್ಲ. ಯುವಕರೊಂದಿಗೆ ಅತ್ಯಂತ ಆರೋಗ್ಯಕರ ರೀತಿಯಲ್ಲಿ ಮಾತನಾಡುತ್ತಾರೆ. ಅವರ ಅನುಭವ, ಸಪೋರ್ಟ್, ಮಾತುಗಳೆಲ್ಲ ಹೊಸಬರು ಕ್ರಿಕೆಟ್​ಗೆ ಬರಲು ಸಹಾಯವಾಗುತ್ತೆ, ಶಕ್ತಿ ತುಂಬುತ್ತದೆ. ಟಿವಿಯಲ್ಲಿ ಬಿಂಬಿಸುವಂತೆ ಕೊಹ್ಲಿ ಇಲ್ಲ. ಟಿವಿಯಲ್ಲಿ ಜನರು ಮಾತನಾಡುವಂತೆ ಇಲ್ಲ. ವಿರಾಟ್ ವಿಭಿನ್ನವಾಗಿ, ಸ್ಪೆಷಲ್​ ಆಗಿದ್ದಾರೆ ಎಂದು ಯಶ್ ದಯಾಳ್ ಹೇಳಿದ್ದಾರೆ.​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

‘TVಯಲ್ಲಿ ಜನ ಮಾತಾಡುವಂತೆ ವಿರಾಟ್​ ಕೊಹ್ಲಿ ಇಲ್ಲ’.. RCB ಬೌಲರ್ ಶಾಕಿಂಗ್​ ಹೇಳಿಕೆ!

https://newsfirstlive.com/wp-content/uploads/2024/08/virat_kohli_YASH.jpg

Load More