/newsfirstlive-kannada/media/post_attachments/wp-content/uploads/2024/09/actor-ravi.jpg)
ಇತ್ತೀಚೆಗಷ್ಟೇ ತಮಿಳಿನ ಖ್ಯಾತ ನಟ ಚಾಕೊಲೇಟ್ ಬಾಯ್ ಅಂತಲೇ ಫೇಮಸ್​ ಆಗಿದ್ದ ಜಯಂ ರವಿ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ನಟ ಜಯಂ ರವಿ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟು, ಬಾಲಿವುಡ್ ಸ್ಟಾರ್ ನಟಿ ಐಶ್ವರ್ಯಾ ರೈ ಮತ್ತು ಕಂಗನಾ ರಣಾವತ್ ಅವರೊಟ್ಟಿಗೆ ಕೆಲಸ ಮಾಡಿದ್ದರು. ಆದರೆ ಈಗ ಪತ್ನಿಗೆ ವಿಚ್ಛೇದನ ಕೊಡುವ ಮೂಲಕ ದೂರ, ದೂರ ಆಗಿದ್ದರು.
ಇದನ್ನೂ ಓದಿ:ತಮಿಳು ಖ್ಯಾತ ನಟನ ದಾಂಪತ್ಯದಲ್ಲಿ ಬಿರುಕು.. 15 ವರ್ಷದ ಬಳಿಕ ಸ್ಟಾರ್ ಜೋಡಿ ವಿಚ್ಛೇದನ!
/newsfirstlive-kannada/media/post_attachments/wp-content/uploads/2024/09/actor-ravi2.jpg)
ಇತ್ತೀಚೆಗೆ ನಟ ಜಯಂ ರವಿ ಮಾಜಿ ಪತ್ನಿ ಆರತಿಗೆ ಕೊಟ್ಟಿದ್ದ ಆಸ್ತಿ, ಕಾರು ಸೇರಿದಂತೆ ತಮ್ಮ ವೈಯಕ್ತಿಕ ವಸ್ತುಗಳನ್ನು ಮರುಪಡೆಯಲು ನಿರ್ಧಾರ ಮಾಡಿದ್ದಾರಂತೆ. ಹೀಗಾಗಿ ನಟ ರವಿ ಅಡ್ಯಾರ್‌ನ ಡೆಪ್ಯುಟಿ ಕಮಿಷನರ್ ಆಫ್ ಪೋಲಿಸ್ ಅವರನ್ನು ಸಂಪರ್ಕಿಸಿದ್ದಾರಂತೆ. ವರದಿಗಳ ಪ್ರಕಾರ, ಆರತಿ ಅವರು ಚೆನ್ನೈನ ಈಸ್ಟ್ ಕೋಸ್ಟ್ ರೋಡ್‌ನಲ್ಲಿರುವ ನಿವಾಸವನ್ನು ವಾಪಸ್​ ಕೊಡಲು ಹೇಳಿದ್ದಾರಂತೆ. ಆದರೆ ಆರತಿ ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ, ಜಯಂ ರವಿ ಅವರು ಸ್ವ ಇಚ್ಛೆಯಿಂದ ಮನೆಯನ್ನು ನನಗೆ ಹಿಂತಿರುಗದಿರಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸರು ಎರಡೂ ಕಡೆಯವರು ತಮ್ಮ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಂತೆ ಒತ್ತಾಯಿಸಿದರು ಅಂತ ಹೇಳಿದ್ದಾರಂತೆ.
/newsfirstlive-kannada/media/post_attachments/wp-content/uploads/2024/09/actor-ravi1.jpg)
ಆದರೆ ಇದಕ್ಕೂ ಮೊದಲು ಕೆಲವು ದಿನಗಳ ಹಿಂದೆ ಜಯಂ ಮತ್ತು ಅವರ ಪತ್ನಿ ಆರತಿ ರವಿ ನಡುವೆ ಏನೋ ಸರಿ ಇಲ್ಲ ಎಂಬ ಊಹಾಪೋಹ ಹಬ್ಬಿತ್ತು. ಆರತಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಿಂದ ತಮ್ಮ ಮದುವೆ ಮತ್ತು ಜಯಂ ಅವರ ಇತರೆ ಫೊಟೋಗಳನ್ನು ಡಿಲೀಟ್ ಮಾಡಿದ್ದರು. ಇದನ್ನೇ ನೋಡಿದ ಅಭಿಮಾನಿಗಳು ಈ ಇಬ್ಬರ ನಡುವೆ ಏನೋ ಸರಿ ಇಲ್ಲ. ಹೀಗಾಗಿ ಆರತಿ ಅವರು ಎಲ್ಲ ಫೋಟೋಸ್ ಡಿಲೀಟ್​ ಮಾಡಿದ್ದಾರೆ ಎಂದು ಫ್ಯಾನ್ಸ್ ಕಾಮೆಂಟ್​ ಹಾಕಿದ್ದರು. ಇದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಊಹಾಪೋಹ ನಿಜವಾಗಿ ಬಿಟ್ಟಿತ್ತು.
ಇದನ್ನೂ ಓದಿ: RRR ಬಳಿಕ ದೇವರದಲ್ಲಿ ಜೂನಿಯರ್ NTR ಅಬ್ಬರ.. ಸಿನಿಮಾ ರಿವ್ಯೂ ಏನ್ ಹೇಳುತ್ತೆ?
4 ಜೂನ್​ 2009ರಲ್ಲಿ ಜಯಂ ರವಿ ಮತ್ತು ಆರತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಈಗ ದಂಪತಿ ಪರಪ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದಾರೆ. ಈ ದಂಪತಿಗೆ ಆರವ್ ಮತ್ತು ಅಯಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ನಟ ಆರತಿಗೆ ನೀಡಿದ್ದ ಎಲ್ಲಾ ಆಸ್ತಿ ಹಾಗೂ ಇನ್ನಿತರ ವಸ್ತುಗಳನ್ನು ವಾಪಸ್​ ಕೊಡಲು ಹೇಳಿದ್ದಾರಂತೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಖುದ್ದು ನಟ ಮಾಹಿತಿ ನೀಡುತ್ತಾರಾ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us