ದರ್ಶನ್ ಅಭಿಮಾನಿ ಮಂಗಳಾಗೆ ಬಿಗ್ ಶಾಕ್.. ನಟನ ಸಮರ್ಥನೆ ಮಾಡ್ಕೊಂಡು ಸಂಕಷ್ಟ..!

author-image
Ganesh
Updated On
ದರ್ಶನ್ ಅಭಿಮಾನಿ ಮಂಗಳಾಗೆ ಬಿಗ್ ಶಾಕ್.. ನಟನ ಸಮರ್ಥನೆ ಮಾಡ್ಕೊಂಡು ಸಂಕಷ್ಟ..!
Advertisment
  • ಕೊಲೆ ಆರೋಪ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್
  • ದರ್ಶನ್ ಅಪ್ಪಟ ಅಭಿಮಾನಿ ಮಂಗಳಾ ವಿರುದ್ಧ ಆಕ್ರೋಶ
  • ಜೆಡಿಎಸ್ ನಾಯಕರ ಆಕ್ರೋಶಕ್ಕೆ ಕಾರಣವಾದರೂ ಏನು..?

ಮಂಡ್ಯ: ನಟ ದರ್ಶನ್ ಅಭಿಮಾನಿಗಳ ವಿರುದ್ಧ ಒಳ್ಳೆ ಹುಡುಗ ಪ್ರಥಮ್ ಆಯ್ತು, ಇದೀಗ ಜೆಡಿಎಸ್ ದೂರು ನೀಡಿದೆ. ದರ್ಶನ್ ಅವರ ಮಹಿಳಾ ಅಭಿಮಾನಿ ಮಂಗಳಾ ವಿರುದ್ಧ ಜೆಡಿಎಸ್​ ದೂರು ದಾಖಲು ಮಾಡಿದೆ.

ಮಂಗಳಾ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಳು. ಈ ಸಂಬಂಧ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಜಾನಿಕೀರಾಮ್ ಅವರು ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ:ಸಾವಿಗೆ ಶರಣಾದ ಕರ್ನಾಟಕ ತಂಡದ ಪೇಸ್ ಸೆನ್ಸೆಷನ್.. ಜಾನ್ಸನ್ ನೆನೆದು ಭಾವುಕರಾದ ಕ್ರಿಕೆಟ್ ದೇವರು

ದರ್ಶನ್ ವಿರುದ್ಧ ಕೊಲೆ ಅಪರಾಧ ಬರುವಂತೆ ಕುಮಾರಸ್ವಾಮಿ ಮಾಡಿದ್ದಾರೆ. ದುಡ್ಡು ಕೊಟ್ಟು ದರ್ಶನ್ ವಿರುದ್ದ ಧಿಕ್ಕಾರ ಕೂಗಿಸ್ತೀಯಾ? ಸುಮಲತಾ ಮಂಡ್ಯದಲ್ಲಿ ನಿನಗೆ ಸ್ಪರ್ಧಿಸೋಕೆ ಚಾನ್ಸ್ ಕೊಟ್ಟಿರೋದಕ್ಕೆ ಡಿ ಬಾಸ್ ವಿರುದ್ದ ಸ್ಕೆಚ್ ಆಗ್ತೀಯಾ? ಸುಮಲತಾ‌ರಿಂದ ಭಿಕ್ಷೆ ಹಾಕಿಸಿಕೊ‌ಂಡ ಮಗ ಎಂದು ಏಕವಚನದಲ್ಲೇ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕುಮಾರಸ್ವಾಮಿಯನ್ನು ನಿಂದಿಸಿದ ಮಂಗಳಾ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ದೂರು ನೀಡಲಾಗಿದೆ.

ಇದನ್ನೂ ಓದಿ:ದರ್ಶನ್​​ ವಿರುದ್ಧ ನಾಲ್ಕು.. ​ಕಪ್ಪೆ, ರಘು, ಮೂರ್ತಿ ವಿರುದ್ಧವೂ ಕೇಸ್.. ಬೆಚ್ಚಿ ಬೀಳುವಂತಿವೆ ಕ್ರಿಮಿನಲ್ ಬ್ಯಾಕ್​ಗ್ರೌಂಡ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment