newsfirstkannada.com

ಅಮಾವಾಸ್ಯೆ ದಿನವೇ ಹೆಚ್.ಡಿ ರೇವಣ್ಣ ಪರಪ್ಪನ ಅಗ್ರಹಾರ ಜೈಲು ಪಾಲು

Share :

Published May 8, 2024 at 5:05pm

Update May 8, 2024 at 5:26pm

    ಅಮಾವಾಸ್ಯೆ ದಿನವೇ ಹೆಚ್‌.ಡಿ ರೇವಣ್ಣಗೆ ಸಾಲು, ಸಾಲು ಸಂಕಷ್ಟ!

    ಹೆಚ್‌.ಡಿ ರೇವಣ್ಣಗೆ ಇಂದಿನಿಂದ 7 ದಿನಗಳ ನ್ಯಾಯಾಂಗ ಬಂಧನ

    ಜಾಮೀನು ವಿಚಾರಣೆಯನ್ನು ಮುಂದೂಡಿದ ಜನಪ್ರತಿನಿಧಿ ನ್ಯಾಯಾಲಯ

ಬೆಂಗಳೂರು: ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರಿಗೆ ಅಮಾವಾಸ್ಯೆ ದಿನವೇ ಸಾಲು, ಸಾಲು ಸಂಕಷ್ಟ ಎದುರಾಗಿದೆ. ಜನಪ್ರತಿನಿಧಿ ನ್ಯಾಯಾಲಯ ಇಂದು ಜಾಮೀನು ವಿಚಾರಣೆಯನ್ನು ಮುಂದೂಡಿಕೆ ಮಾಡಿದ್ರೆ, 17ನೇ ಎಸಿಎಂಎಂ ಕೋರ್ಟ್ 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಮಹಿಳೆಯ ಕಿಡ್ನಾಪ್ ಕೇಸ್‌ನಲ್ಲಿ ಹೆಚ್‌.ಡಿ ರೇವಣ್ಣ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ.

ಇದನ್ನೂ ಓದಿ: ಕೋರ್ಟ್​​ನಲ್ಲಿ ಗಳಗಳನೇ ಕಣ್ಣೀರಿಟ್ಟ HD ರೇವಣ್ಣ; ಜಡ್ಜ್​​ ಮುಂದೆ ಹೇಳಿದ್ದೇನು ಗೊತ್ತಾ? 

ಹೆಚ್‌.ಡಿ ರೇವಣ್ಣ ಅವರು ಶುಭ ಮುಹೂರ್ತ, ಕಾಲ, ಗಳಿಗೆ ಮೇಲೆ ಸಾಕಷ್ಟು ನಂಬಿಕೆ ಇಟ್ಟ ರಾಜಕಾರಣಿ. ಇವರು ಬಹಳ ನೋವಿನಿಂದಲೇ ಇಂದು ಪರಪ್ಪನ ಅಗ್ರಹಾರಕ್ಕೆ ಹೆಜ್ಜೆ ಇಟ್ಟಿದ್ದಾರೆ. ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ವಿಧಿಸುತ್ತಿದ್ದಂತೆ ರೇವಣ್ಣ ಅವರು ಕಣ್ಣೀರಿಟ್ಟಿದ್ದರು.

17ನೇ ಎಸಿಎಂಎಂ ನ್ಯಾಯಾಲಯ ಮಹಿಳೆ ಕಿಡ್ನಾಪ್ ಕೇಸ್‌ನಲ್ಲಿ ನ್ಯಾಯಾಂಗ ಬಂಧನ ವಿಧಿಸಿದ ಬಳಿಕ ಬಿಗಿ ಭದ್ರತೆಯಲ್ಲಿ ಹೆಚ್‌.ಡಿ ರೇವಣ್ಣ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದುಕೊಂಡು ಹೋಗಲಾಗಿದೆ.

ಹೆಚ್‌.ಡಿ ರೇವಣ್ಣ ಆಗಮನದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲು ಬಳಿ ಹಿಂದೆಂದೂ ಕಾಣದ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಜೈಲು ಪ್ರವೇಶಿಸುವ ಅರ್ಧ ಕಿಲೋ ಮೀಟರ್ ದೂರದಲ್ಲೇ ಬ್ಯಾರಿಕೇಡ್ ಹಾಕಲಾಗಿತ್ತು. ಜೈಲಿ ಮೈನ್ ಗೇಟ್‌ನ 100 ಮೀಟರ್ ಅಂತರದಲ್ಲಿ ಮತ್ತೊಂದು ಬ್ಯಾರಿಕೇಡ್ ಹಾಕಿದ್ದು, ಪರಪ್ಪನ ಅಗ್ರಹಾರ ಜೈಲು ಸುತ್ತಮುತ್ತ 200ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.

ಪೊಲೀಸರ ಬಿಗಿ ಭದ್ರತೆಯಲ್ಲಿ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಕೋರ್ಟ್‌ ಆದೇಶದ ಪ್ರತಿಯನ್ನು ಎಸ್‌ಐಟಿ ಪೊಲೀಸರು ಜೈಲು ಅಧಿಕಾರಿಗಳಿಗೆ ನೀಡಿದ್ದಾರೆ. ಜೈಲಿನಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಿದ ಬಳಿಕ ಹೆಚ್‌.ಡಿ ರೇವಣ್ಣ ಅವರಿಗೆ ಸೆರೆವಾಸ ಆರಂಭವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮಾವಾಸ್ಯೆ ದಿನವೇ ಹೆಚ್.ಡಿ ರೇವಣ್ಣ ಪರಪ್ಪನ ಅಗ್ರಹಾರ ಜೈಲು ಪಾಲು

https://newsfirstlive.com/wp-content/uploads/2024/05/HD-Revanna-In-Jail.jpg

Load More