newsfirstkannada.com

ಸರ್ಕಾರ ರಚನೆಗೂ ಮುನ್ನ ಮೋದಿಗೆ ಟೆನ್ಷನ್‌; ದೊಡ್ಡ ಖಾತೆಗಳಿಗೆ ಮಿತ್ರರ ಡಿಮ್ಯಾಂಡ್‌; ಯಾರಿಗೆ ಯಾವ ಖಾತೆ?

Share :

Published June 6, 2024 at 3:58pm

  ಗೃಹ ಇಲಾಖೆ, ಆರ್ಥಿಕ ಇಲಾಖೆ, ರೈಲ್ವೆ ಇಲಾಖೆ, ವಿದೇಶಾಂಗ ಯಾರಿಗೆ?

  ಎನ್‌ಡಿಎ ಮಿತ್ರ ಪಕ್ಷಗಳಾದ ಜೆಡಿಯು, ಟಿಡಿಪಿ ಕೇಳಿದ ಖಾತೆ ಯಾವುವು?

  ಆರೋಗ್ಯ ಖಾತೆ ಡಾ.ಸಿ.ಎನ್ ಮಂಜುನಾಥ್ ಅವರಿಗೆ ಒಲಿಯುತ್ತಾ?

ನವದೆಹಲಿ: ಮೋದಿ 3.0 ಸರ್ಕಾರ ರಚನೆಗೂ ಮುನ್ನವೇ ವಿಘ್ನಗಳು ಎದುರಾಗಿದೆ. ಮತದಾರರ ಮಹಾತೀರ್ಪಿನ ಬಳಿಕ NDA ನಾಯಕರಿಗೆ ಮಿತ್ರಪಕ್ಷಗಳ ವಿಶ್ವಾಸ ಗೆಲ್ಲುವುದು ದೊಡ್ಡ ಸವಾಲಾಗಿದೆ. ದೆಹಲಿಯಲ್ಲಿ ನೂತನ ಸರ್ಕಾರ ರಚಿಸುವ ಸಂಬಂಧ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ.

ಇಂದು ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಮಾಡುವ ಸಮಯವನ್ನು ದಿಢೀರ್ ಮುಂದೂಡಿಕೆ ಮಾಡಲಾಗಿದೆ. ಜೂನ್ 8ರ ಬದಲು ಜೂನ್ 9ರ‌ ಸಂಜೆ 6ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸರ್ಕಾರ ರಚನೆಗೂ ಮುನ್ನವೇ ಬಾಲ ಬಿಚ್ಚಿದ JDU; NDAಗೆ ಬಿಗ್ ಶಾಕ್‌; ಆಗಿದ್ದೇನು? 

ನೂತನ ಸರ್ಕಾರ ರಚನೆಗೂ ಮುನ್ನವೇ ಎನ್‌ಡಿಎ ನಾಯಕರು ಸಾಲು, ಸಾಲು ಸಭೆ ನಡೆಸುತ್ತಿದ್ದು, ಮಹತ್ವದ ಮಾತುಕತೆ ನಡೆಸಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರ ದೆಹಲಿ ನಿವಾಸದಲ್ಲಿ ಇಂದು ಮಹತ್ವದ ಸಭೆ ನಡೆಸಲಾಯಿತು. ಸಭೆಯಲ್ಲಿ ಅಮಿತ್ ಶಾ, ರಾಜನಾಥ್ ಸಿಂಗ್ ಭಾಗಿಯಾಗಿದ್ದರು. ಈ ಸಭೆಯಲ್ಲಿ ನೂತನ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ಬಿಜೆಪಿಯಲ್ಲೇ ಇಟ್ಟುಕೊಳ್ಳಲು ತೀರ್ಮಾನ ಮಾಡಲಾಗಿದೆ.

ದೇಶದ ಭದ್ರತೆ, ಆರ್ಥಿಕ ಸುರಕ್ಷತೆಯ ಹಿತದೃಷ್ಟಿಯಿಂದ ಬಿಜೆಪಿ ನಾಯಕರು ಪ್ರಮುಖ ಖಾತೆಗಳನ್ನು ಮಿತ್ರ ಪಕ್ಷಗಳಿಗೆ ನೀಡದಿರಲು ತೀರ್ಮಾನ ಮಾಡಿದ್ದಾರೆ. ಗೃಹ ಇಲಾಖೆ, ಆರ್ಥಿಕ ಇಲಾಖೆ, ರೈಲ್ವೆ ಇಲಾಖೆ, ವಿದೇಶಾಂಗ, ಕಾನೂನು ಮತ್ತು ಸಂಸದಿಯ, ರಕ್ಷಣಾ ಇಲಾಖೆ, ಮಾಹಿತಿ ಮತ್ತು ತಂತ್ರಜ್ಞಾನ ಮತ್ತು ಸಹಕಾರ ಇಲಾಖೆಯನ್ನು ಬಿಜೆಪಿ ಪಕ್ಷ ತನ್ನಲ್ಲೇ ಇಟ್ಟುಕೊಳ್ಳಲು ತೀರ್ಮಾನ ಮಾಡಿದೆ ಎನ್ನಲಾಗಿದೆ.

ಇದನ್ನೂ ಓದಿ: ಮುಳುಗುತ್ತಿದ್ದ ಹಡಗಿಗೆ ಸಾರಥಿ ಆದ್ಮೇಲೆ ಹಣೆಬರಹ ಚೇಂಜ್​.. ಕನ್ನಡಿಗ​ ಖರ್ಗೆ ಕಾಂಗ್ರೆಸ್​​ಗೆ ಬಲ ತುಂಬಿದ್ದೇಗೆ? 

ಕೇಂದ್ರ ಸಚಿವ ಸಂಪುಟ ಪುನಾರಚನೆಯಲ್ಲಿ ಎನ್‌ಡಿಎ ಮಿತ್ರ ಪಕ್ಷಗಳಾದ ಜೆಡಿಯುಗೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ನೀಡುವ ಸಾಧ್ಯತೆ ಇದೆ. ಟಿಡಿಪಿ ಪಕ್ಷದ ಸಂಸದರಿಗೆ ನಾಗರಿಕ ವಿಮಾನಯಾನ, ಶಿವಸೇನೆಗೆ ದೊಡ್ಡ ಕೈಗಾರಿಕೆಯ ಖಾತೆ ನೀಡುವ ಸಾಧ್ಯತೆ ಇದೆ.

ಇದೇ ವೇಳೆ NDA ಮೈತ್ರಿಕೂಟದ ಭಾಗವಾಗಿ ನಾವೂ ಇದ್ದೇವೆ. ನಮಗೆ ಎರಡು ಸಚಿವ ಸ್ಥಾನ ಬೇಕು ಎಂದು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ನಮ್ಮನ್ನು ಪರಿಗಣಿಸಿ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು. ನನಗೆ ಕೃಷಿ ಖಾತೆಯಲ್ಲಿ ಬಹಳ ಆಸಕ್ತಿ ಇದೆ. ಹಾಗಾಗಿ ನನಗೆ ಕೃಷಿ ಖಾತೆ ನೀಡಿ. ಆರೋಗ್ಯ ಖಾತೆಯನ್ನು ಡಾ.ಸಿ.ಎನ್ ಮಂಜುನಾಥ್ ಅವರಿಗೆ ನೀಡುವಂತೆ ಹೆಚ್‌.ಡಿ ಕುಮಾರಸ್ವಾಮಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರ ರಚನೆಗೂ ಮುನ್ನ ಮೋದಿಗೆ ಟೆನ್ಷನ್‌; ದೊಡ್ಡ ಖಾತೆಗಳಿಗೆ ಮಿತ್ರರ ಡಿಮ್ಯಾಂಡ್‌; ಯಾರಿಗೆ ಯಾವ ಖಾತೆ?

https://newsfirstlive.com/wp-content/uploads/2024/06/PM-modi-NDA.jpg

Load More