newsfirstkannada.com

ಸರ್ಕಾರ ರಚನೆಗೂ ಮುನ್ನವೇ ಬಾಲ ಬಿಚ್ಚಿದ JDU; NDAಗೆ ಬಿಗ್ ಶಾಕ್‌; ಆಗಿದ್ದೇನು? 

Share :

Published June 6, 2024 at 3:13pm

    ನಿತೀಶ್‌ ಕುಮಾರ್‌ ಪ್ರಧಾನಿಯಾಗಲಿ ಅಂತ ಹೇಳಿರುವುದ್ಯಾರು?

    ಸರ್ಕಾರ ರಚನೆಗೂ ಮೊದಲೇ ಅಗ್ನಿವೀರ್ ಕುರಿತು ಪ್ರಸ್ತಾಪ

    ಮೋದಿ ಪ್ರಧಾನಿಯಾಗಿ ಹುದ್ದೆಗೇರಿದ ಮೇಲೆ ಸವಾಲುಗಳೇನು?

ನವದೆಹಲಿ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿ ಮಾಡಿರುವಂತ ಅಗ್ನಿವೀರ್ ಯೋಜನೆಯನ್ನು ಮರುಪರಿಶೀಲಿಸಬೇಕು. ಇದರ ಬಗ್ಗೆ ಜನರಲ್ಲಿ ಆಕ್ರೋಶವಿದೆ ಎಂದು ಬಿಹಾರದ ಜನತಾ ದಳ ಯುನಿಟೆಡ್​ (ಜೆಡಿಯು)ನ ವಕ್ತಾರ ಹಾಗೂ ಬಿಹಾರ ಸಿಎಂ ನಿತೀಶ್​ ಕುಮಾರ್ ಆಪ್ತ ಕೆ.ಸಿ ತ್ಯಾಗಿ ಅಭಿಪ್ರಾಯ ಪಟ್ಟಿದ್ದಾರೆ.

ಈ ಕುರಿತು ದೆಹಲಿಯಲ್ಲಿ ಮಾತನಾಡಿದ ಕೆ.ಸಿ ತ್ಯಾಗಿ ಅವರು, ಅಗ್ನಿವೀರ್ ಸ್ಕೀಮ್ ಬಗ್ಗೆ ಜನರಲ್ಲಿ ಆಕ್ರೋಶ ಇದೆ. ಹೀಗಾಗಿ ಅಗ್ನಿವೀರ್ ಯೋಜನೆಯನ್ನು ಮರುಪರಿಶೀಲಿಸಬೇಕು. ನಾವು ಸಮಾನ ನಾಗರಿಕ ಸಂಹಿತೆಯ ವಿರುದ್ಧವಾಗಿಲ್ಲ. ಈ ಬಗ್ಗೆ ಬಿಹಾರದ ಸಿಎಂ ಕಾನೂನು ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆದರೆ ಸಿಎಂಗಳು ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ಗಣ್ಯರ ಜೊತೆಗೆ ಚರ್ಚೆ ನಡೆಸಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸ್ನೇಹಿತನ ಬರ್ತ್ ​​​ಡೇ ಪಾರ್ಟಿಯಲ್ಲಿ ಹರಿಯಿತು ನೆತ್ತರು; ಗೆಳೆಯರಿಂದಲೇ ಯುವಕನ ಬರ್ಬರ ಹತ್ಯೆ; ಕಾರಣವೇನು?

ಜೆಡಿಯು ವಕ್ತಾರ ಕೆ.ಸಿ ತ್ಯಾಗಿ ಮತ್ತು ಸಿಎಂ ನಿತೀಶ್ ಕುಮಾರ್

ಇನ್ನು ಮುಂದುವರೆದ ಮಾತನಾಡಿದ ಅವರು ಜಾತಿ ಜನಗಣತಿಗೂ ಯಾವುದೇ ಪಕ್ಷಗಳ ವಿರೋಧ ಇಲ್ಲ. ಈ ಮೂಲಕ ದೇಶಾದ್ಯಂತ ಜಾತಿ ಜನಗಣತಿ ನಡೆಸಬೇಕು ಎಂಬುದು ಜೆಡಿಯು ಬೇಡಿಕೆ ಇಟ್ಟಂತೆ ಆಗಿದೆ. ನಾವು ಯಾವುದೇ ಪೂರ್ವ ಷರತ್ತು ನಿಮಗೆ ವಿಧಿಸುತ್ತಿಲ್ಲ, ಬೇಷರತ್ ಬೆಂಬಲ ನೀಡುತ್ತಿದ್ದೇವೆ. ಮುಂದೆ ರಚನೆ ಆಗುವ ಕೇಂದ್ರ ಸರ್ಕಾರದಿಂದ ಬಿಹಾರದ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಸ್ಥಾನಮಾನ ಕೊಡಬೇಕು ಎಂದು ಕೆ.ಸಿ ತ್ಯಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಕಲರ್ ಕ್ಯಾಂಡಿ, ಗೋಬಿ ಬಳಿಕ ಮತ್ತೊಂದು ಆಪತ್ತು.. ಈ ಟೀ ಪುಡಿಗಳಿಂದಲೂ ಜೀವಕ್ಕೆ ಇದೆ ಸಂಚಕಾರ..!

ಎನ್​ಡಿಎನಲ್ಲೇ ಉಳಿಯಲು ಪ್ರಧಾನಿ ಮೋದಿ ಮುಂದೆ ನಿತೀಶ್​ ಕುಮಾರ್​ ಅಸಾಧ್ಯವಾದ ಡಿಮ್ಯಾಂಡ್‌ಗಳನ್ನ ಇಡ್ತಾರಾ ಅನ್ನೋ ಪ್ರಶ್ನೆ ಹಾಗೂ ಕುತೂಹಲ ಎದುರಾಗಿದೆ. ಈ ನಡುವೆಯೇ ನಿತೀಶ್‌ ಕುಮಾರ್‌ ಪ್ರಧಾನಿಯಾಗಲಿ ಅಂತ ಬಿಹಾರದ ವಿಧಾನಪರಿಷತ್‌ ಸದಸ್ಯ ಖಾಲಿದ್ ಅನ್ವರ್ ಹೇಳಿಕೆ ಸಂಚಲನ ಸೃಷ್ಟಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರ ರಚನೆಗೂ ಮುನ್ನವೇ ಬಾಲ ಬಿಚ್ಚಿದ JDU; NDAಗೆ ಬಿಗ್ ಶಾಕ್‌; ಆಗಿದ್ದೇನು? 

https://newsfirstlive.com/wp-content/uploads/2024/06/AGNIVEER.jpg

Load More