ಕಡಿಮೆ ಬೆಲೆಗೆ Jio ರೀಚಾರ್ಜ್, ದಿನಕ್ಕೆ 2 GB; ಈ ಪ್ಲಾನ್​ನಲ್ಲೂ ಮೋಸ ಇದೆ ಎಂದು ಆಕ್ರೋಶ

author-image
Ganesh
Updated On
ಜಿಯೋ 8ನೇ ವಾರ್ಷಿಕೋತ್ಸವ; ಗ್ರಾಹಕರಿಗಾಗಿ 10GB ಡೇಟಾ ಮತ್ತು ಜೊಮ್ಯಾಟೊ ಗೋಲ್ಡ್​​ ಸದಸ್ಯತ್ವ ಉಚಿತ!
Advertisment
  • ಕಡಿಮೆ ಪ್ಲಾನ್ ಪರಿಚಯಿಸಿ ಷರತ್ತು ಇಟ್ಟ ಜಿಯೋ
  • ಹೊಸ ಪ್ಲಾನ್ ಪ್ರಕಾರ ನೀವು ಎಷ್ಟು ರೀಚಾರ್ಜ್ ಮಾಡಬೇಕು?
  • ಪ್ರತಿದಿನ 100 SMS ಸೌಲಭ್ಯ ಮತ್ತು 56GB ಇಂಟರ್ನೆಟ್

ದೇಶದಲ್ಲಿ ರಿಲಯನ್ಸ್ ಜಿಯೋ ಸಿಮ್ (jio sim) ಅನ್ನು ಸುಮಾರು 49 ಕೋಟಿ ಜನರು ಬಳಸುತ್ತಾರೆ. ಇತ್ತೀಚೆಗೆ ರಿಲಯನ್ಸ್​, ರೀಚಾರ್ಜ್​ ಬೆಲೆಯನ್ನ ಏರಿಸಿ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ತನ್ನ ರೀಚಾರ್ಜ್ ಪ್ಲಾನ್​ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ತಿದೆ.

ಇದೀಗ ಜಿಯೋ ತನ್ನ ಬಳಕೆದಾರರಿಗೆ ಅಗ್ಗದ ಪ್ರಿಪೇಯ್ಡ್ ಪ್ಲಾನ್ ಪರಿಚಯಿಸಿದೆ. ಈ ಪ್ಲಾನ್ ಪ್ರಕಾರ 223 ರೂಪಾಯಿ ರೀಚಾರ್ಜ್​ ಮಾಡಿಕೊಂಡರೆ ಬಳಕೆದಾರರು 28 ದಿನಗಳ ಮಾನ್ಯತೆ ಪಡೆಯುತ್ತಾರೆ. 28 ದಿನಗಳ ಮಾನ್ಯತೆಯೊಂದಿಗೆ ಜಿಯೋ ಪ್ರಿಪೇಯ್ಡ್ ಪ್ಲಾನ್​ಗಳ ಪಟ್ಟಿಯಲ್ಲಿ ಇದು ಅಗ್ಗದ ಪ್ರಿಪೇಯ್ಡ್ ರೀಚಾರ್ಜ್ ಆಗಿದೆ.

223 ರೂಪಾಯಿ ಪ್ಲಾನ್​ನಲ್ಲಿ ಏನು ಸಿಗುತ್ತೆ..?

  • ಬಳಕೆದಾರರು 28 ದಿನಗಳವರೆಗೆ ಅನಿಯಮಿತ ಕರೆ ಸೌಲಭ್ಯ
  • ಪ್ರತಿದಿನ 100 SMS ಸೌಲಭ್ಯ ಮತ್ತು 56GB ಇಂಟರ್ನೆಟ್
  • ದಿನಕ್ಕೆ 2GB ಡೇಟಾದ ಪ್ರಯೋಜನವನ್ನು ಪಡೆಯುತ್ತಾರೆ
  • ಬಳಕೆದಾರರು ಜಿಯೋ ಸಿನಿಮಾಗೆ ಉಚಿತ ಪ್ರವೇಶ
  • ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್‌ನ ಉಚಿತ ಚಂದಾದಾರಿಕೆ

ಆಯ್ದ ಬಳಕೆದಾರರಿಗೆ ಕೊಡುಗೆ
ಜಿಯೋದ ಈ ಪ್ರಿಪೇಯ್ಡ್ ಯೋಜನೆಯು ಸೀಮಿತ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ನೀವು ಜಿಯೋ ಫೋನ್ ಬಳಸುತ್ತಿದ್ದರೆ ಈ ಯೋಜನೆಯ ಲಾಭ ಪಡೆಯುತ್ತೀರಿ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಜಿಯೋ ಸಿಮ್ ಬಳಸಿದರೆ ಈ ಯೋಜನೆಯ ಪ್ರಯೋಜನ ಇಲ್ಲ. ಇದು ಕೇವಲ ಜಿಯೋ ಸಿಮ್ ಬಳಸುತ್ತಿರೋರ ಕೆಂಗಣ್ಣಿಗೆ ಕಾರಣವಾಗಿದೆ.

ಇದನ್ನೂ ಓದಿ:BSNL: 249 ರೂಪಾಯಿಗೆ 90GB ಡೇಟಾ! 45 ದಿನಗಳ ವ್ಯಾಲಿಡಿಟಿ.. ಟ್ರೆಂಡಿಂಗ್​ನಲ್ಲಿದೆ ಈ ಪ್ರಿಪೇಯ್ಡ್​ ಪ್ಲಾನ್​

ಜಿಯೋ ಸ್ಮಾರ್ಟ್‌ಫೋನ್ ಬಳಕೆದಾರರಿಗೆ 28 ದಿನಗಳ ಮಾನ್ಯತೆಯೊಂದಿಗೆ ಅಗ್ಗದ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ 299 ರೂಗಳಿಗೆ ಲಭ್ಯವಿದೆ. ಈ ಪ್ಲಾನ್ ಮಾನ್ಯತೆಯು 28 ದಿನಗಳು, ಇದರಲ್ಲಿ ಬಳಕೆದಾರರು ಪ್ರತಿದಿನ 1.5GB ಡೇಟಾವನ್ನು ಪಡೆಯುತ್ತಾರೆ. ಬಳಕೆದಾರರು ಒಟ್ಟು 42GB ಡೇಟಾವನ್ನು ಪಡೆಯುತ್ತಾರೆ. ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ಸೌಲಭ್ಯ ಇದೆ. ಬಳಕೆದಾರರು ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ನ ಉಚಿತ ಸೌಲಭ್ಯವನ್ನು ಪಡೆಯುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment