newsfirstkannada.com

ಧೋನಿಯಂತೆ ಬ್ಯಾಟ್​ ಬೀಸಿದ RR ಓಪನರ್.. ಹೆಲಿಕಾಪ್ಟರ್ ಶಾಟ್​ ಪ್ರಾಕ್ಟೀಸ್ ಮಾಡಿದ ಜೋಸ್ ಬಟ್ಲರ್​!

Share :

Published March 24, 2024 at 2:15pm

Update March 24, 2024 at 2:16pm

  ಲಕ್ನೋ ವಿರುದ್ಧ ಕಾದಡಲಿರೋ ರಾಜಸ್ಥಾನ್ ರಾಯಲ್ಸ್​ ತಂಡ

  ಪಂದ್ಯಕ್ಕೂ ಮೊದಲು ಭರ್ಜರಿ ಅಭ್ಯಾಸದಲ್ಲಿ ಜೋಸ್ ಬಟ್ಲರ್

  ಜೋಸ್ ಬಟ್ಲರ್ ಕ್ರೀಸ್​ನಲ್ಲಿ ಧೋನಿಯಂತೆ ಬ್ಯಾಟ್ ಬೀಸಿದ್ದೇಕೆ?

ಐಪಿಎಲ್ ಟೂರ್ನಿ 17ರ ಸೀಸನ್​ನಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದ್ದು ಇಂದಿನ ಫಸ್ಟ್​​ ಫೈಟ್​​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ್​​​​​​​​​​​​ ರಾಯಲ್ಸ್​ ಕಾದಾಡಲಿದೆ. ಮ್ಯಾಚ್ ಆರಂಭಕ್ಕೆ ಇನ್ನೇನು ಕೆಲ ಕ್ಷಣಗಳು ಬಾಕಿ ಉಳಿದಿವೆ. ಇದರ ಬೆನ್ನಲ್ಲೇ ಆರ್​ಆರ್ ಓಪನರ್​​ ಜೋಸ್​ ಬಟ್ಲರ್​ ನಾನೂ ಧೋನಿ ಆಗುತ್ತೇನೆಂದು ಹೆಲಿಕಾಪ್ಟರ್ ಶಾಟ್ ಪ್ರಾಕ್ಟೀಸ್ ಮಾಡಿದ್ದಾರೆ.

ರಾಜಸ್ಥಾನ್ ರಾಯಲ್ಸ್​ ತಂಡದ ಜೋಸ್​​ ಬಟ್ಲರ್​​ ಐಪಿಎಲ್ ದಂಗಲ್​ಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಅಬ್ಬರಿಸುವ ಇರಾದೆಯಲ್ಲಿರುವ ಸ್ಫೋಟಕ ದಾಂಡಿಗ ರಾಜಸ್ಥಾನದ ಪರ ನೆಟ್ಸ್​​ನಲ್ಲಿ ಹೆಲಿಕಾಪ್ಟರ್ ಶಾಟ್ ಅಭ್ಯಾಸ​ ಮಾಡಿದ್ದಾರೆ. ಥೇಟ್​ ಧೋನಿಯಂತೆ ಹೆಲಿಕಾಪ್ಟರ್ ಶಾಟ್​ ಅನ್ನು ಬಟ್ಲರ್ ಪ್ರಾಕ್ಟೀಸ್ ಮಾಡಿ ಗಮನ ಸೆಳೆದಿದ್ದಾರೆ. ಬ್ಯಾಟಿಂಗ್ ಮಾಡುತ್ತಿರುವ ಬಟ್ಲರ್ ಅವರ ವಿಡಿಯೋವನ್ನ ರಾಜಸ್ಥಾನ ರಾಯಲ್ಸ್​ ತಂಡ ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ಶೇರ್ ಮಾಡಿದೆ.

ಇದನ್ನೂ ಓದಿ: KKR vs SRH; ಹುಡ್ಗಿ ಪಕ್ಕದಲ್ಲಿದ್ದಾಗ ಸಿಗರೇಟ್ ಸೇದಿದ್ರಾ ಶಾರುಖ್​ ಖಾನ್.. ವಿಡಿಯೋ ನೋಡಿ ಭಾರೀ ವಿರೋಧ!

ರಾಜಸ್ಥಾನ್ ರಾಯಲ್ಸ್​ ಮತ್ತು ಲಕ್ನೋ ಸೂಪರ್ ಜೈಂಟ್ಸ್​ ನಡುವಿನ ಪಂದ್ಯ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಮ್​ನಲ್ಲಿ ಮಧ್ಯಾಹ್ನ 3:30ಕ್ಕೆ ನಡೆಯಲಿದೆ. ರಾಜಸ್ಥಾನ್ ತಂಡದ ಸಾರಥ್ಯವನ್ನು ಸಂಜು ಸ್ಯಾಮ್ಸನ್ ವಹಿಸಿದರೆ, ಅತ್ತ ಲಕ್ನೋ ಟೀಮ್ ನಾಯಕತ್ವವನ್ನು ಕನ್ನಡಿಗ ಕೆ.ಎಲ್ ರಾಹುಲ್ ವಹಿಸಲಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಧೋನಿಯಂತೆ ಬ್ಯಾಟ್​ ಬೀಸಿದ RR ಓಪನರ್.. ಹೆಲಿಕಾಪ್ಟರ್ ಶಾಟ್​ ಪ್ರಾಕ್ಟೀಸ್ ಮಾಡಿದ ಜೋಸ್ ಬಟ್ಲರ್​!

https://newsfirstlive.com/wp-content/uploads/2024/03/JOS_BUTTLER.jpg

Load More