newsfirstkannada.com

KKR vs SRH; ಹುಡ್ಗಿ ಪಕ್ಕದಲ್ಲಿದ್ದಾಗ ಸಿಗರೇಟ್ ಸೇದಿದ್ರಾ ಶಾರುಖ್​ ಖಾನ್.. ವಿಡಿಯೋ ನೋಡಿ ಭಾರೀ ವಿರೋಧ!

Share :

Published March 24, 2024 at 11:40am

  4 ರನ್​ನಿಂದ ಜಯ ಗಳಿಸಿದ ಶಾರುಖ್ ಖಾನ್ ಮಾಲಿಕತ್ವದ ತಂಡ

  ಈ ಹಿಂದೆಯು ಒಮ್ಮೆ ಶಾರುಖ್​ ಖಾನ್ ಇಂಥದ್ದಕ್ಕೆ ಸುದ್ದಿಯಾಗಿದ್ದರು

  ವಿಐಪಿ ಬಾಕ್ಸ್​ನಲ್ಲಿರುವಾಗ ಶಾರುಖ್ ಖಾನ್ ಸೆಗರೇಟ್ ಸೇದಿದ್ರಾ..?

ಜಿದ್ದಾಜಿದ್ದಿನ ಹೋರಾಟದ ಪಂದ್ಯದಲ್ಲಿ ಸನ್​ ರೈಸರ್ಸ್​ ಹೈದ್ರಾಬಾದ್ ವಿರುದ್ಧ ಕೊನೆಯದಾಗಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ ಕೇವಲ 4 ರನ್​ಗಳಿಂದ ಜಯಭೇರಿ ಬಾರಿಸಿತು. ಆದರೆ ಈ ಪಂದ್ಯದ ಟೆನ್ಷನ್​ನಲ್ಲಿ ಬಿದ್ದ ಬಾಲಿವುಡ್ ಸ್ಟಾರ್ ಹಾಗೂ ಕೆಕೆಆರ್​ ಟೀಮ್​ ಮಾಲೀಕ ಶಾರುಖ್​ ಖಾನ್​ ಅವರು ಗ್ಯಾಲರಿಯಲ್ಲಿ ಸಿಗರೇಟ್​ ಸೇದಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದ್ದು ನೆಟ್ಟಿಗರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ನ 4ನೇ ಪಟ್ಟಿಯಲ್ಲೂ ಆ 4 ಲೋಕಸಭಾ ಕ್ಷೇತ್ರಗಳು ಪೆಂಡಿಂಗ್.. ಕೋಲಾರಕ್ಕಾಗಿ ‘ಕೈ’ಯಲ್ಲಿ ಬಿಗ್ ಫೈಟ್

ಈಡನ್​ ಗಾರ್ಡನ್ಸ್​ನಲ್ಲಿ ನಡೆದ ಕೋಲ್ಕತ್ತಾ ನೈಟ್​ ರೈಡರ್ಸ್​ ಮತ್ತು ಸನ್​ ರೈಸರ್ಸ್​ ಹೈದ್ರಾಬಾದ್​ ನಡುವಿನ ಪಂದ್ಯ ಭಾರೀ ಪೈಪೋಟಿಗೆ ಕಾರಣವಾಗಿತ್ತು. ಕೊನೆ ಓವರ್​ವರೆಗೂ ಯಾವ ತಂಡ ಪಂದ್ಯ ಗೆಲ್ಲುತ್ತದೆಂದು ಯಾರ ಊಹೆಗೂ ಬರುವಂತೆ ಇರಲಿಲ್ಲ. ಅಷ್ಟೊಂದು ಇಂಟ್ರೆಸ್ಟಿಂಗ್​ ಆಗಿ ಪಂದ್ಯವಿತ್ತು. ಆದರೆ ಈ ಟೆನ್ಷನ್​ ತಡೆಯಲಾಗದೆ ಗ್ಯಾಲರಿಯ ವಿಐಪಿ ಬಾಕ್ಸ್​ನಲ್ಲಿದ್ದ ನಟ ಶಾರುಖ್ ಖಾನ್ ಧೂಮಪಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ವಿಡಿಯೋದಲ್ಲಿ ಅವರು ಬಾಯಿಯಿಂದ ಒಂದು ಕೈ ತೆಗೆದು ಎದೆಯುಸಿರು ಬಿಡುತ್ತಾರೆ. ಆದರೆ ಈ ವೇಳೆ ಧೂಮಪಾನ ಮಾಡಿದಾಗ ಬರುವಂತ ಹೊಗೆ ಬಂದಿಲ್ಲ. ಹೀಗಾಗಿ ಶಾರುಖ್​ ಖಾನ್ ನಿಜವಾಗಲೂ ಸಿಗರೇಟ್ ಸೇದಿದ್ದಾರಾ ಎನ್ನುವುದು ಪ್ರಶ್ನೆಯಾಗಿಯೇ ಕಾಡುತ್ತಿದೆ. ಶಾರುಖ್ ಸಿಗರೇಟ್ ಸೇದುವಾಗ ಪಕ್ಕದಲ್ಲಿ ಹುಡುಗಿ ಕುಳಿತ್ತಿದ್ದಾರೆ. ಅಲ್ಲದೇ ಪಕ್ಕದಲ್ಲಿ ಇನ್ನೊಬ್ಬ ಕೆಕೆಆರ್ ಸಿಬ್ಬಂದಿ ನಿಂತಿದ್ದಾರೆ. ಇದೇ ರೀತಿ ಕೆಲವು ದಿನಗಳ ಹಿಂದೆ ಪಾಕಿಸ್ತಾನ ಪ್ರೀಮಿಯರ್ ಲೀಗ್ (PSL)ನ ಫೈನಲ್​ ಪಂದ್ಯ ನಡೆಯುವಾಗ ಪಾಕ್ ಆಟಗಾರ ಇಮಾದ್ ವಾಸಿಂ ಸಿಗರೇಟ್ ಸೇದಿದ್ದರು. ಈ ಬಗ್ಗೆ ಎಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅದರಂತೆ ಗ್ಯಾಲರಿಯಲ್ಲಿ ಶಾರುಖ್ ಧಮ್ ಎಳೆದು ಸುದ್ದಿಯಾದ್ರಾ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

KKR vs SRH; ಹುಡ್ಗಿ ಪಕ್ಕದಲ್ಲಿದ್ದಾಗ ಸಿಗರೇಟ್ ಸೇದಿದ್ರಾ ಶಾರುಖ್​ ಖಾನ್.. ವಿಡಿಯೋ ನೋಡಿ ಭಾರೀ ವಿರೋಧ!

https://newsfirstlive.com/wp-content/uploads/2024/03/shah_rukh_khan.jpg

Load More