newsfirstkannada.com

ಜಸ್ಟ್ 11 ನಿಮಿಷ ಅಷ್ಟೇ.. ನೀವು ಅಕಾಲಿಕ ಸಾವಿನಿಂದ ಬಚಾವ್ ಆಗ್ತೀರಿ.. ಹೆಂಗೆ ಅಂತೀರಾ ಈ ಸ್ಟೋರಿ ಓದಿ

Share :

Published August 28, 2024 at 10:59am

    ಪ್ರತಿದಿನ ನಡೆಯುವುದರಿಂದ ನಿಮ್ಮ ದೇಹಕ್ಕೆ ಆಗುವ ಪ್ರಯೋಜನಗಳು?

    ಈ ಬಗ್ಗೆ ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ ಏನ್ ಹೇಳುತ್ತೆ?

    ನಿಯಮಿತವಾಗಿ ವ್ಯಾಯಾಮ ಮಾಡಿ ಅಂತ ವೈದ್ಯರು ಏಕೆ ಹೇಳ್ತಾರೆ?

ಮನುಷ್ಯ ಆರೋಗ್ಯವಾಗಿ ಇರಲು ಏನೆಲ್ಲಾ ಮಾಡ್ತಾನೆ. ತರಕಾರಿಗಳನ್ನು ತಿನ್ನುತ್ತಾನೆ, ಅಧಿಕ ನೀರು ಕುಡಿಯುತ್ತಾನೆ. ಸರಿಯಾದ ಸಮಯಕ್ಕೆ ನಿದ್ರೆ ಮಾಡುತ್ತಾನೆ. ಹೀಗೆ ನಾನಾ ಬಗೆಯಲ್ಲಿ ಆರೋಗ್ಯವಾಗಿ ಇರಲು ಬಯಸುತ್ತಾನೆ. ಇಷ್ಟಾದರೂ ಸಾವು ಯಾವಾಗ, ಯಾರಿಗೆ ಬರುತ್ತೆ ಅಂತ ಹೇಳೋದಕ್ಕೆ ಆಗೋದಿಲ್ಲ. ಮಲಗಿಕೊಂಡಲ್ಲಿ, ಕುಳಿತುಕೊಂಡಲ್ಲಿ, ನಿಂತುಕೊಂಡಲಿ ಮನುಷ್ಯ ಆಕಸ್ಮಿಕವಾಗಿ ಸಾವನ್ನಪ್ಪಬಹುದು.  ಜಸ್ಟ್ 11 ನಿಮಿಷದಲ್ಲಿ ಅಕಾಲಿಕ ಸಾವಿನಿಂದ ನೀವು ಬಚಾವ್ ಆಗ್ತೀರಿ ಅಂದ್ರೆ ನಂಬುತ್ತೀರಾ? ಹೌದು ನಂಬಲೇಬೇಕು. ಜಸ್ಟ್ 11 ನಿಮಿಷ ಹೀಗೆ ಮಾಡಿದ್ರೆ ಸಾವನ್ನೆ ಗೆದ್ದು ಬರಬಹುದು.

ಇದನ್ನೂ ಓದಿ: 332 ಕಿ.ಮೀ ದೂರಕ್ಕೆ ದಾಸನ ಪಯಣ.. ದಿಕ್ಕಾಪಾಲಾದ ದರ್ಶನ್ ಗ್ಯಾಂಗ್‌; ಯಾರ್, ಯಾರು ಯಾವ ಜೈಲಿಗೆ?

ಮನುಷ್ಯ ಆರೋಗ್ಯಕರವಾಗಿರಲು ಉತ್ತಮ ಮಾರ್ಗವೆಂದರೆ ಅದು ಬೆಳಗ್ಗೆಯ ವಾಕಿಂಗ್. ಪ್ರತಿದಿನ ನಡೆಯುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದರ ಜೊತೆಗೆ ಅಕಾಲಿಕ ಮರಣದ ಅಪಾಯವನ್ನು ಕಡಿಮೆ ಮಾಡುತ್ತದೆ. ಹೀಗೆ ಮುಂಜಾನೆ ವಾಕಿಂಗ್​ ಮಾಡುವುದರಿಂದ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಬಹುದು. ಪ್ರತಿನಿತ್ಯ ನಡೆಯುವುದರಿಂದ ಹೃದಯಾಘಾತ, ಮಧುಮೇಹ, ರಕ್ತದೊತ್ತಡ, ಬೊಜ್ಜು ಮುಂತಾದ ಸಮಸ್ಯೆಗಳಿಂದ ದೂರವಿರಬಹುದು. ಅಂದರೆ ಬೆಳಗ್ಗೆ ನಿಯಮಿತವಾಗಿ ವಾಕಿಂಗ್ ಮಾಡುವುದರಿಂದ ಮಾರಣಾಂತಿಕ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ. ನೀವು ಆಸ್ಪತ್ರೆಗಳಿಗೆ ಹೋಗಿ ಔಷಧಗಳನ್ನು ಪಡೆಯಬೇಕಾಗಿಲ್ಲ. ಅದರ ಬದಲು ಪ್ರತಿನಿತ್ಯ ವಾಕಿಂಗ್​ ಮಾಡುವುದೇ ರಾಮಬಾಣವಾಗುತ್ತದೆ.

ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ನ ವರದಿ ಪ್ರಕಾರ.. ಪ್ರತಿದಿನ ಮನುಷ್ಯ ಕೆಲವು ನಿಮಿಷಗಳ ಕಾಲ ನಡೆದಾಡುವುದರಿಂದ ಅಕಾಲಿಕ ಮರಣದಿಂದ ದೂರ ಇರಬಹುದು. ಒಂದು ಅಧ್ಯಯನವು 30 ಮಿಲಿಯನ್‌ಗಿಂತಲೂ ಹೆಚ್ಚು ಜನರ ಡೇಟಾವನ್ನು ಸಂಗ್ರಹಿಸಿತ್ತು. ಪ್ರತಿದಿನ ಕನಿಷ್ಠ 11 ನಿಮಿಷಗಳ ಕಾಲ ನಡೆಯುವ 10 ಜನರಲ್ಲಿ ಒಬ್ಬರಿಂದ ಅಕಾಲಿಕ ಮರಣದ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಕಂಡುಹಿಡಿದಿದೆ. ಇದರರ್ಥ ಪ್ರತಿದಿನ ನಿಯಮಿತವಾಗಿ ನಡೆಯುವ ಜನರು ಅಕಾಲಿಕ ಮರಣದ ಅಪಾಯವನ್ನು ಕಡಿಮೆ ಮಾಡುತ್ತಾರಂತೆ. ಇದರ ಜೊತೆಗೆ ನೀವು ದೀರ್ಘಕಾಲದವರೆಗೆ ರೋಗಗಳನ್ನು ದೂರವಿಡಬಹುದು.

ದೈನಂದಿನ ವ್ಯಾಯಾಮದ ಪ್ರಯೋಜನಗಳು..!

ಈಗಿನ ಕಾಲದಲ್ಲಿ ಜನರಿಗೆ ಬಿಡುವೆ ಇಲ್ಲದಂತೆ ಆಗಿಬಿಟ್ಟಿದೆ. ಫಿಟ್‌ನೆಸ್‌ಗಾಗಿ ನಿಮಗಾಗಿ ನೀವು ದಿನದ ಕನಿಷ್ಠ 1 ಗಂಟೆಗಳನ್ನಾದರೂ ಮೀಸಲು ಇಡಬೇಕು. ನಿಮ್ಮ ದೇಹವು ಆರೋಗ್ಯವಾಗಿದ್ದರೆ, ನೀವು ಮಾಡುವ ಪ್ರತಿ ಕೆಲಸವು ಉತ್ಸಾಹ ಭರಿತವಾಗಿರುತ್ತದೆ. ಅದಕ್ಕಾಗಿಯೇ ವೈದ್ಯರು ಫಿಟ್ ಆಗಿರಲು ನಿಯಮಿತವಾಗಿ ವ್ಯಾಯಾಮ ಮಾಡಿ ಎಂದು ಸಲಹೆ ನೀಡುತ್ತಾರೆ. ಹೀಗೆ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಜನರು ಅಕಾಲಿಕ ಮರಣದ ಅಪಾಯವನ್ನು ಕಡಿಮೆ ಮಾಡುತ್ತಾರೆ ಎಂದು ಅನೇಕ ಸಂಶೋಧನೆಗಳು ದೃಢಪಡಿಸುತ್ತವೆ.

ಇದನ್ನೂ ಓದಿ: ಹೆಣ್ಣಿಗೆ ಕುಂಕುಮವೇ ಅಂದ ಚೆಂದ.. ಅದರ ಹಿಂದಿರುವ ವೈಜ್ಞಾನಿಕ ಕಾರಣವೇನು? ತಪ್ಪದೇ ಈ ಸ್ಟೋರಿ ಓದಿ!

ವ್ಯಾಯಾಮ ಮಾಡುವುದರಿಂದ ದೇಹವು ಆರೋಗ್ಯಕರವಾಗಿರುತ್ತದೆ. ಇದು ಜೀವನಶೈಲಿ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಹೃದಯ ಮತ್ತು ಮೆದುಳನ್ನು ಆರೋಗ್ಯವಾಗಿಡಲು ವಾಕಿಂಗ್ ಕೂಡ ಪರಿಣಾಮಕಾರಿ ವ್ಯಾಯಾಮವಾಗಿದೆ. ಆದ್ದರಿಂದ ಪ್ರತಿದಿನ ಅರ್ಧ ಗಂಟೆ ನೀವು ನಡೆಯಿರಿ. ಇದು ಅಕಾಲಿಕ ಮರಣದ ಅಪಾಯವನ್ನು 23% ರಷ್ಟು ಕಡಿಮೆ ಮಾಡುತ್ತದೆ. ಅದೇ ಸಮಯದಲ್ಲಿ, ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು 17% ರಷ್ಟು ಕಡಿಮೆ ಮಾಡಬಹುದು. ಕ್ಯಾನ್ಸರ್ ಅಪಾಯವನ್ನು 7% ರಷ್ಟು ಕಡಿಮೆ ಮಾಡಬಹುದು. ಮೈಲೋಯ್ಡ್ ಲ್ಯುಕೇಮಿಯಾ ಮತ್ತು ಹೊಟ್ಟೆಯ ಕ್ಯಾನ್ಸರ್ ಅಪಾಯವನ್ನು 26% ರಷ್ಟು ಕಡಿಮೆ ಮಾಡಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಸ್ಟ್ 11 ನಿಮಿಷ ಅಷ್ಟೇ.. ನೀವು ಅಕಾಲಿಕ ಸಾವಿನಿಂದ ಬಚಾವ್ ಆಗ್ತೀರಿ.. ಹೆಂಗೆ ಅಂತೀರಾ ಈ ಸ್ಟೋರಿ ಓದಿ

https://newsfirstlive.com/wp-content/uploads/2024/08/walking.jpg

Load More