ಭಾರತೀಯ ಸಂಸ್ಕೃತಿಗಳಲ್ಲಿ ಕುಂಕುಮಕ್ಕೆ ಮಹತ್ವದ ಬೆಲೆ ಇದೆ
ಹೆಣ್ಣು ಮಕ್ಕಳು ಯಾವ ಕುಂಕುಮವನ್ನು ಹಚ್ಚಿಕೊಂಡರೇ ಶ್ರೇಷ್ಠ
ದಂಪತಿಗಳ ಮಧ್ಯೆ ವಿರಸಕ್ಕೆ ಈ ಕುಂಕುಮ ಪರಿಹಾರ ಆಗುತ್ತಾ?
ನಮ್ಮ ಭಾರತೀಯ ಸಂಪ್ರದಾಯದಲ್ಲಿ ಕುಂಕುಮವು ತನ್ನದೇಯಾದ ಮಹತ್ವದ ಪಾತ್ರವನ್ನು ವಹಿಸುತ್ತದೆ. ಸಾಮಾನ್ಯವಾಗಿ ಕುಂಕುಮವನ್ನು ಮದುವೆಯಾದ ಸ್ತ್ರೀಯರು ತಮ್ಮ ಕೂದಲಿನ ಮಧ್ಯದಲ್ಲಿ ಹಚ್ಚಿಕೊಳ್ಳುತ್ತಾರೆ. ಹಿಂದೂ ಸಂಪ್ರದಾಯದಲ್ಲಿ ಸಿಂಧೂರದ ಬಳಕೆಯು ಮಹಿಳೆಯು ವಿವಾಹಿತೆ ಎಂದು ಮತ್ತು ಸಾಮಾನ್ಯವಾಗಿ ಅದನ್ನು ಹಚ್ಚಿಕೊಳ್ಳದಿರುವುದು ವೈಧವ್ಯವನ್ನು ಸೂಚಿಸುತ್ತದೆ.
ಕುಂಕುಮ ಅಂದ ತಕ್ಷಣ ನೆನಪಿಗೆ ಬರುವುದು ಕೆಂಪು ಬಣ್ಣ. ಇದು ರಕ್ತದ ಸಂಕೇತ. ರಕ್ತವು ನಮ್ಮ ಜೀವನದಲ್ಲಿ ಅತಿ ಅವಶ್ಯಕ, ಅತ್ಯಮೂಲ್ಯ. ಹಾಗೇ ಕುಂಕುಮ ಹಿಂದೂ ಹೆಣ್ಣುಮಕ್ಕಳಿಗೆ ಅತ್ಯಮೂಲ್ಯ. ಮನೆಗೆ ಅತಿಥಿಗಳು ಬಂದಾಗ, ಶುಭ ಸಮಾರಂಭಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಅರಶಿನ ಕುಂಕುಮ ನೀಡಿ ಮುತ್ತೈದೆಯರನ್ನು ಗೌರವಿಸುವುದು ಹಿಂದೂ ಸಂಪ್ರದಾಯ. ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ. ಹಣೆಗೆ ಕುಂಕುಮ ಹಚ್ಚುವುದು, ಗಂಡಸರು ತಿಲಕ ಇಡುವುದು ಸಂಪ್ರದಾಯ ಮಾತ್ರವಲ್ಲ ಕೆಲವು ಲಾಭಗಳನ್ನು ಹೊಂದಿದೆ. ಅದೊಂದು ನಮ್ಮ ಪೂರ್ವಿಕರ ವಿಜ್ಞಾನವು ಕೂಡ.
ಇದನ್ನೂ ಓದಿ: ಹುಡುಗಿಯರಿಗೆ ಈ ಕೆಟ್ಟ ಅಭ್ಯಾಸವಿದ್ರೆ ಲಕ್ಷ್ಮೀ ಕೋಪಿಸಿಕೊಳ್ತಾಳೆ.. ನಿಮ್ಮ ಕೈಯಲ್ಲಿ ದುಡ್ಡು ನಿಲ್ಲಲ್ಲ..!
ಇನ್ನು, ಕುಂಕುಮ ಹೆಣ್ಣಿಗೊಂದು ಸಂಭ್ರಮ, ಇದು ಹೆಣ್ಣಿನ ಶ್ರೇಷ್ಠತೆಯ ಸಂಕೇತವಾಗದೆ. ಹೆಣ್ಣಿನ ವೈವಾಹಿಕ ಸಂಬಂಧದ ಹೆಗ್ಗುರುತು ಕೂಡ ಆಗಿದೆ. ಯಾರು ಹಣೆಯ ಮೇಲೆ ಕುಂಕುಮ ಇಟ್ಟುಕೊಳ್ಳುತ್ತಾರೋ ಅಂತವರ ಮುಖವು ಆಕರ್ಷಕವಾಗಿ ಕಾಣುತ್ತದೆ. ಭಾರತೀಯ ಪರಂಪರೆ, ಸಂಸ್ಕೃತಿಗಳಲ್ಲಿ ಕುಂಕುಮಕ್ಕೆ ಮಹತ್ವದ ಬೆಲೆ ಇದೆ. ಇದನ್ನು ಪೂಜೆ ಅಥವಾ ಇತರ ಧಾರ್ಮಿಕ ಸಂದರ್ಭಗಳಲ್ಲಿ ಹಚ್ಚಿಕೊಳ್ಳುತ್ತಾರೆ. ಕುಂಕುಮ ಹಚ್ಚುವುದರ ಮುಖ್ಯ ಉದ್ದೇಶವೆ ಧಾರ್ಮಿಕ ಸಂದರ್ಭಗಳಲ್ಲಿ ಎಲ್ಲಾ ಜನರು ತಾವು ಧರ್ಮದ ಭಾಗವೆಂದು ಗುರುತಿಸಿಕೊಳ್ಳುವುದು.
ಹಣೆಯ ಮೇಲೆ ತಿಲಕವನ್ನು ಹಚ್ಚುವುದು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಇನ್ನೊಂದು ಅರ್ಥದಲ್ಲಿ ತಿಲಕವನ್ನು ಹಂಚುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ವ್ಯಕ್ತಿಗೆ ದೈವತ್ವ ಮತ್ತು ಆಧ್ಯಾತ್ಮಿಕತೆಯ ಭಾವನೆಯನ್ನು ನೀಡುತ್ತದೆ. ವಿನಾಕಾರಣ ಕುಟುಂಬದಲ್ಲಿ ಜಗಳ, ದಾಂಪತ್ಯದಲ್ಲಿ ವಿರಸಗಳಿದ್ದರೆ ದೇವಸ್ಥಾನಗಳಲ್ಲಿ ತಿಲಕವನ್ನು ಪೂಜಿಸಿ ಹಣೆಗೆ ಇಡುವುದುರಿಂದ ಎಲ್ಲಾ ಸಮಸ್ಯೆ ಬಗೆಹರಿಯುತ್ತದೆ.
ಇದನ್ನೂ ಓದಿ: ಬಂಗಾರ ಪ್ರಿಯರೇ.. ಇಂದಿನ ಚಿನ್ನದ ಬೆಲೆ ಗಮನಿಸಲೇಬೇಕು.. ಯಾಕಂದ್ರೆ..
ತಿಲಕದಲ್ಲಿ ಬಳಸಲಾಗುವ ಬಣ್ಣಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ. ಕೆಂಪು ಅಥವಾ ಕೇಸರಿ ಬಣ್ಣದ ತಿಲಕವನ್ನು ಶ್ರೀವತ್ಸ ಅಥವಾ ಭಗವಾನ್ ವಿಷ್ಣುವಿನ ಚಕ್ರವನ್ನು ಸಂಕೇತಿಸಲು ಬಳಸಲಾಗುತ್ತದೆ. ಇದರಲ್ಲಿ ಶಿವನ ತಿಲಕದಲ್ಲಿ ಭಸ್ಮವನ್ನು ಬಳಸಲಾಗಿದೆ. ಕೆಲವರು, ವಿಭೂತಿ, ಗಂಧ, ಕೇಸರಿ ಅಥವಾ ನೀಲಿ ಬಣ್ಣದ ತಿಲಕವನ್ನು ಸಹ ಹಚ್ಚಿಕೊಳ್ಳುತ್ತಾರೆ.
ಹಿಂದೂ ಧರ್ಮದಲ್ಲಿ, ಹಣೆಯ ಮೇಲೆ ತಿಲಕವನ್ನು ಅನ್ವಯಿಸುವುದು ಧಾರ್ಮಿಕವಾಗಿ ಮಹತ್ವದ್ದಾಗಿದೆ ಮತ್ತು ವ್ಯಕ್ತಿತ್ವದ ಮೇಲೂ ಪರಿಣಾಮ ಬೀರುತ್ತದೆ. ಈ ತಿಲಕವು ವ್ಯಕ್ತಿಯ ಸ್ವಭಾವ ಮತ್ತು ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಧಾರ್ಮಿಕ ದೃಷ್ಟಿಕೋನದಿಂದ ನೋಡಿದರೆ, ತಿಲಕವು ಧಾರ್ಮಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದಿಂದ ವ್ಯಕ್ತಿಯನ್ನು ತೃಪ್ತಿಪಡಿಸುತ್ತದೆ. ಇದಲ್ಲದೆ, ತಿಲಕವನ್ನು ಅನ್ವಯಿಸುವುದರಿಂದ ವ್ಯಕ್ತಿಯಲ್ಲಿ ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ನೀಡುತ್ತದೆ. ಇನ್ನು, ಮಹಿಳೆಯರು ಕುಂಕುಮವನ್ನು ಹಣೆಯ ಮಧ್ಯದಲ್ಲಿ ಇಡುವರು. ಇದು ಬುದ್ಧಿಶಕ್ತಿ, ವಿವೇಕದ ಅರ್ಥವನ್ನು ಹೇಳುತ್ತದೆ. ಈ ಜಾಗ ಅಶಕ್ತರಾಗಿರುವವರನ್ನು ಸಮ್ಮೋಹನಗೊಳಿಸಲು ಸುಲಭ. ಈ ಜಾಗದಲ್ಲಿ ಉಷ್ಣ ಉತ್ಪಾದನೆ ಬಹಳವಾಗಿ ಆಗುವುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ