ರಾಜಾತಿಥ್ಯ ಪಡೆದ ತಪ್ಪಿಗೆ ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್!
ಬಳ್ಳಾರಿ ಜೈಲಿನಲ್ಲಿ ಅಭಿಮಾನಿಗಳಿಗೆ ದರ್ಶನ್ ಶಾಂತಿ ಸಂದೇಶ
ಜೈಲಿನಲ್ಲಿ ಕೂಲಿಂಗ್ ಗ್ಲಾಸ್‌ನಂಥ ವಸ್ತುಗಳನ್ನು ಒಯ್ಯುವ ಹಾಗಿಲ್ಲ!
ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿ ನಂ.2 ದರ್ಶನ್ ಸಖತ್ ಸ್ಟೈಲಿಶ್ ಆಗಿ ಬಳ್ಳಾರಿ ಜೈಲಿಗೆ ಎಂಟ್ರಿ ಕೊಟ್ಟಿದ್ದಾರೆ. ದರ್ಶನ್ ಧರಿಸಿದ್ದ ಪೂಮಾ ಟೀ ಶರ್ಟ್, ಜೀನ್ಸ್ ಪ್ಯಾಂಟ್ ಮತ್ತು ಕಾಲರ್‌ನಲ್ಲಿದ್ದ ಕೂಲಿಂಗ್ ಗ್ಲಾಸ್ ಈಗ ಸಖತ್ ಚರ್ಚೆಯಾಗುತ್ತಿದೆ. ಟೀ ಶರ್ಟ್‌ನಲ್ಲಿ ಬರೆದಿರುವ 4 ಸಂದೇಶ ಕೂಡ ವಿಶೇಷವಾಗಿದೆ.
ಇದನ್ನೂ ಓದಿ: ಕೂಲಿಂಗ್ ಗ್ಲಾಸ್, ಹ್ಯಾಂಡ್ ಶೇಕ್ ಮಾಡಿ ಜೈಲಿಗೆ ಎಂಟ್ರಿ; ಕರ್ಕೊಂಡು ಬಂದ ಸಿಬ್ಬಂದಿಗೆ ಸಂಕಷ್ಟ ತಂದಿಟ್ಟ ದರ್ಶನ್..!
ಪರಪ್ಪನ ಅಗ್ರಹಾರ ಜೈಲಿನಿಂದ ಟೈಟ್ ಸೆಕ್ಯೂರಿಟಿಯಲ್ಲಿ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಕರೆತರಲಾಗಿದೆ. ಬೆಂಗಳೂರು ಸೆಂಟ್ರಲ್ ಜೈಲಿನಿಂದ ಹೊರಟ ದರ್ಶನ್ ಅವರು ಬ್ರಾಂಡೆಂಡ್ ಟೀ ಶರ್ಟ್ ಧರಿಸಿದ್ದು ಅದರ ಮೇಲೆ ಜಸ್ಟೀಸ್, ಡಿಗ್ನಿಟಿ, ಇಕ್ವಾಲಿಟಿ, ಪೀಸ್ ಎಂದು ಬರೆಯಲಾಗಿದೆ. ಜಸ್ಟೀಸ್ ಅಂದ್ರೆ ನ್ಯಾಯ, ಡಿಗ್ನಿಟಿ ಅಂದ್ರೆ ಘನತೆ, ಇಕ್ವಾಲಿಟಿ ಅಂದ್ರೆ ಸಮಾನತೆ, ಪೀಸ್ ಅಂದ್ರೆ ಶಾಂತಿ ಇದರರ್ಥ.
ಕೊಲೆ ಕೇಸ್‌ನಲ್ಲಿ ಆರೋಪಿಯಾಗಿರುವ ದರ್ಶನ್ ಅವರಿಗೆ ಸಾಲು, ಸಾಲು ಸಂಕಷ್ಟ ಎದುರಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಸ್ವೀಕರಿಸಿದ ಮೇಲಂತೂ ದರ್ಶನ್ ಅವರ ಮೇಲೆ ಮತ್ತೆರಡು FIRಗಳು ದಾಖಲಾಗಿದೆ. ಇದೀಗ ದರ್ಶನ್ ಅವರು ಕೊಲೆ ಕೇಸ್ ಜೊತೆಗೆ ಮತ್ತೆರಡು ಪ್ರಕರಣದಲ್ಲೂ ನ್ಯಾಯಕ್ಕಾಗಿ ಹೋರಾಟ ನಡೆಸಬೇಕಾಗಿದೆ. ಈ ಸಂಕಷ್ಟದಲ್ಲಿ ಘನತೆ, ಸಮಾನತೆ ಹಾಗೂ ಅಭಿಮಾನಿಗಳು ಶಾಂತಿಯಿಂದ ವರ್ತಿಸುವುದು ಬಹಳ ಮುಖ್ಯವಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಭಿಮಾನಿಯ ವಿಡಿಯೋ ಕಾಲ್‌ಗೆ ಹಾಯ್ ಚಿನ್ನ ಅಂತಿದ್ದು ಸಂಕಟ ತಂದಿದೆ. ಇದೀಗ ಬಳ್ಳಾರಿ ಕಡೆಗೂ ಅಭಿಮಾನಿಗಳು ಧಾವಿಸುತ್ತಿದ್ದಾರೆ. ಈ ಬೆಳವಣಿಗೆಯ ಮಧ್ಯೆ ದರ್ಶನ್ ಅವರ ಟೀ ಶರ್ಟ್ ಮೇಲೆ ನ್ಯಾಯ, ಘನತೆ, ಸಮಾನತೆ, ಶಾಂತಿ ಅನ್ನೋ ಸಂದೇಶವನ್ನು ಸಾರಲಾಗಿದೆ.
ಇದನ್ನೂ ಓದಿ: ಹೊಸ ಜೈಲಿಗೆ ಬಂದಾಯ್ತು.. ಕೈದಿ ನಂಬರ್ ಬದಲಾಯ್ತು! ದರ್ಶನ್ಗೆ ಸಿಕ್ಕ ನಂಬರ್ ಎಷ್ಟು ಗೊತ್ತಾ?
ಬಳ್ಳಾರಿಗೆ ಕರ್ಕೊಂಡು ಬಂದ ಸಿಬ್ಬಂದಿಗೆ ಸಂಕಷ್ಟ!
ಪರಪ್ಪನ ಅಗ್ರಾಹರ ಜೈಲಿನಲ್ಲಿ ರಾಜಾತಿಥ್ಯದ ತಪ್ಪಿಗೆ ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ನಗು ನಗುತ್ತಲೇ ಜೈಲಿಗೆ ಬಂದ ದರ್ಶನ್ ಜೈಲಿನ ಒಳಕ್ಕೆ ಹೋಗಿದ್ದಾರೆ. ಪೊಲೀಸರಿಗೆ ಹ್ಯಾಂಡ್ ಶೇಕ್ ಕೊಟ್ಟು ಜೈಲಿನ ಬ್ಯಾರಕ್ಗೆ ಎಂಟ್ರಿ ಕೊಟ್ಟಿದ್ದಾರೆ. ಆದರೀಗ ದರ್ಶನ್ ಅಷ್ಟು ಸ್ಟೈಲ್ ಆಗಿ ಜೈಲಿಗೆ ಎಂಟ್ರಿ ನೀಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಅನೇಕರು ಕೊಲೆ ಆರೋಪಿಗೆ ಇಷ್ಟೆಲ್ಲಾ ಫೆಸಿಲಿಟಿ ಯಾರು ಕೊಟ್ರು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಕೂಲಿಂಗ್ ಗ್ಲಾಸ್ಗೆ ಅವಕಾಶ ಕೊಟ್ಟ ಬೆಂಗಾವಲು ಪಡೆಗೆ ಇದೀಗ ಸಂಕಷ್ಟ ಎದುರಾಗಿದೆ. ಬೆಂಗಾವಲು ಪಡೆಗೆ ಬಂಧಿಖಾನೆ ಇಲಾಖೆ ಉತ್ತರ ವಲಯ ಡಿಐಜಿ ನೋಟಿಸ್ ನೀಡಲು ಸಿದ್ಧತೆ ಮಾಡಿದ್ದಾರೆ. ನ್ಯೂಸ್ ಫಸ್ಟ್ಗೆ ಇಲಾಖೆ ಉತ್ತರ ವಲಯ ಡಿಐಜಿ ಶೇಷಾ ಮಾಹಿತಿ ನೀಡಿದ್ದು, ಜೈಲಿನಲ್ಲಿ ಕೂಲಿಂಗ್ ಗ್ಲಾಸ್‌ನಂಥ ವಸ್ತುಗಳನ್ನು ಒಯ್ಯುವ ಹಾಗಿಲ್ಲ. ನಿಯಮ ಉಲ್ಲಂಘಿಸಿದ ಬೆಂಗಾವಲು ಪಡೆಗೆ ನೋಟಿಸ್ ನೀಡಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ