Advertisment

Breaking News: ಕಾಳಿಂದಿ ಎಕ್ಸ್​ಪ್ರೆಸ್ ಸ್ಫೋಟಕ್ಕೆ ಸಂಚು; ಮಧ್ಯರಾತ್ರಿ ತುಂಬಿದ ಸಿಲಿಂಡರ್​ಗೆ ಡಿಕ್ಕಿ ಹೊಡೆದ ಟ್ರೈನು

author-image
Bheemappa
Updated On
Breaking News: ಕಾಳಿಂದಿ ಎಕ್ಸ್​ಪ್ರೆಸ್ ಸ್ಫೋಟಕ್ಕೆ ಸಂಚು; ಮಧ್ಯರಾತ್ರಿ ತುಂಬಿದ ಸಿಲಿಂಡರ್​ಗೆ ಡಿಕ್ಕಿ ಹೊಡೆದ ಟ್ರೈನು
Advertisment
  • ಟ್ರ್ಯಾಕ್ ಮೇಲೆ ತುಂಬಿದ ಸಿಲಿಂಡರ್ ಇಟ್ಟು ಹೋದವರು ಯಾರು?
  • ಡಿಕ್ಕಿಯಾದ ಸ್ಥಳದಲ್ಲೇ ಹಲವು ಸ್ಫೋಟದ ವಸ್ತುಗಳು ಪತ್ತೆ ಆಗಿವೆ
  • ಒಂದರ ನಂತರ ಒಂದು ರೈಲುಗಳ ಅಪಘಾತ ನಡೆಯುತ್ತಿದೆಯಾ?

ಲಕ್ನೋ: ದೇಶದಲ್ಲಿ ಅದರಲ್ಲೂ ಉತ್ತರ ಭಾರತದಲ್ಲಿ ಮುಖ್ಯವಾಗಿ ನಿತ್ಯ ಒಂದಿಲ್ಲೊಂದು ರೈಲು ಆಕ್ಸಿಡೆಂಟ್ ನಡೆಯುತ್ತಲಿದ್ದು ಸಾಕಷ್ಟು ಅನುಮಾನ ಮೂಡಿಸಿದೆ. ಜೊತೆಗೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಾನುವಾರ ರಾತ್ರಿ ಭಯಾನಕ ಘಟನೆ ನಡೆದಿದೆ. ರೈಲ್ವೆ ಟ್ರ್ಯಾಕ್ ಮೇಲೆ ಸಿಲಿಂಡರ್ ಒಂದನ್ನು ಇಡಲಾಗಿದ್ದು, ಅದಕ್ಕೆ ರೈಲು ಡಿಕ್ಕಿಯಾಗಿದೆ.

Advertisment

ಇದನ್ನೂ ಓದಿ: 1000 ಪ್ರಯಾಣಿಕರಿದ್ದ ಮಗಧ್ ಎಕ್ಸ್​​ಪ್ರೆಸ್​ ರೈಲು ಅಪಘಾತ.. ಬೇರ್ಪಟ್ಟ ಬೋಗಿಗಳು

ಉತ್ತರ ಪ್ರದೇಶದ ಅನ್ವರ್‌ಗಂಜ್-ಕಾಸ್‌ಗಂಜ್ ರೈಲು ಮಾರ್ಗದ ಕಾಳಿಂದಿ ಎಕ್ಸ್​ಪ್ರೆಸ್​ ರೈಲು ರಾತ್ರಿ 8:30ರ ಸುಮಾರಿಗೆ ತೆರಳುತ್ತಿತ್ತು. ಈ ವೇಳೆ ಬರ್ರಾಜ್‌ಪುರ ಹಾಗೂ ಬಿಲ್ಹೌರ್ ನಡುವಿನ ರೈಲ್ವೆ ಟ್ರ್ಯಾಕ್ ಮೇಲೆ ತುಂಬಿರುವ ಎಲ್‌ಪಿಜಿ ಸಿಲಿಂಡರ್‌ಗೆ ಡಿಕ್ಕಿ ಹೊಡೆದಿದೆ. ತಕ್ಷಣ ಭಾರೀ ಶಬ್ಧ ಬಂದ ಕಾರಣ ಲೊಕೊ ಪೈಲಟ್ ಅವರು ಟ್ರೈನ್ ನಿಲ್ಲಿಸಿ ಸುತ್ತ ಪರಿಶೀಲನೆ ಮಾಡಿದ್ದಾರೆ. ಅನ್ವರ್ಗಂಜ್ ನಿಲ್ದಾಣದ ರೈಲ್ವೆ ಸೂಪರಿಂಟೆಂಡೆಂಟ್, ಆರ್‌ಪಿಎಫ್ ಮತ್ತು ಇತರ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಕೆಲವು ಅನುಮಾನಸ್ಪದ ವಸ್ತುಗಳು ಕಂಡು ಬಂದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಗಣೇಶ ಚತುರ್ಥಿಯಂದೇ ರೈಲು ಅಪಘಾತ.. ಹಳಿ ತಪ್ಪಿದ ಪ್ರಯಾಣಿಕರಿದ್ದ ಎರಡು ಬೋಗಿಗಳು

Advertisment

publive-image

ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮಾಡಿದಾಗ ಪೊದೆಗಳಲ್ಲಿ ಸಿಲಿಂಡರ್, ಪೆಟ್ರೋಲ್ ಬಾಟಲ್, ಬೆಂಕಿಕಡ್ಡಿ, ಗನ್ ಪೌಡರ್ ಸೇರಿದಂತೆ ಹಲವು ಮಾರಕ ವಸ್ತುಗಳು ಪತ್ತೆಯಾಗಿವೆ. ಅರ್ಧ ಗಂಟೆ ನಿಲ್ಲಿಸಿದ ನಂತರ ರೈಲು ಮತ್ತೆ ತೆರಳಿದೆ. ಸದ್ಯ ಸ್ಥಳದಲ್ಲಿ ಸಿಕ್ಕ ಎಲ್ಲ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ. ಪೊಲೀಸರ ಜೊತೆ ವಿಧಿವಿಜ್ಞಾನ ತಂಡ ಕೈಜೋಡಿಸಿದೆ. ಇನ್ನು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಕೂಡ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದೆ.

ಈ ಎಲ್ಲವನ್ನೂ ಗಮನಿಸಿದರೆ ದೊಡ್ಡ ಮಟ್ಟದಲ್ಲೇ ಸ್ಫೋಟದ ಸಂಚು ರೂಪಿಸಿದ್ದರು ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ಹೀಗಾಗಿ ಪ್ರಕರಣವನ್ನು ಪೊಲೀಸರು ಸೇರಿದಂತೆ ತನಿಖಾ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿವೆ. ಯಾರು ಮಾಡುತ್ತಿದ್ದಾರೆ ಎಂದು ಇನ್ನು ತಿಳಿದು ಬಂದಿಲ್ಲ. ಆರೋಪಿಗಳನ್ನು ಶೀಘ್ರವೇ ಸೆರೆಹಿಡಿಯಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment