/newsfirstlive-kannada/media/post_attachments/wp-content/uploads/2024/06/Nag-Ashwin-1.jpg)
ಕಲ್ಕಿ 2898 AD ಬಿಗ್ ಬಜೆಟ್ನಲ್ಲಿ ಮೂಡಿ ಬಂದ ಬಹುಭಾಷಾ ಸಿನಿಮಾ. ಸದ್ಯ ಬಿಡುಗಡೆಗೊಂಡು 2 ದಿನಗಳು ಕಳೆದಿದೆ. ಬಾಹುಬಲಿ ಖ್ಯಾತಿಯ ಪ್ರಭಾಸ್ ಹಾಗೂ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಅಭಿನಯದ ಸಿನಿಮಾ ಇದಾಗಿದೆ. ನಾಗ್ ಅಶ್ವಿನ್ ಕಥೆ, ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ ಇದೀಗ ತೆರೆ ಮೇಲೆ ರಾರಾಜಿಸುತ್ತಿದೆ. ಆದರೆ ವಿಚಾರ ಅದಲ್ಲ, 38 ವರ್ಷದ ನಿರ್ದೇಶಕ ಈ ಸಿನಿಮಾದ ಕರ್ತೃ. ಈ ಹಿಂದೆಯೂ ಗಮನ ಸೆಳೆಯುವಂತ ಸಿನಿಮಾಗಳು ಭಾರತೀಯ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಇವರು. ಸದ್ಯ ನಾಗ್ ಅಶ್ವಿನ್ರವರ ಸಿನಿಮಾ ಜರ್ನಿಯನ್ನು ನೋಡುವುದಾದರೆ..
ನಾಗ್ ಅಶ್ವಿನ್ ಮೂಲತಃ ಹೈದರಾಬಾದ್ನವರು. 23 ಏಪ್ರಿಲ್ 1986ರಲ್ಲಿ ಜನಿಸಿದರು. ಸಿನಿಮಾ ಕುರಿತಾದ ವಿಶೇಷ ಆಸಕ್ತಿಯುಳ್ಳ ವ್ಯಕ್ತಿ 2008ರಲ್ಲಿ ‘ನೇನು ಮೀಕು ತೆಲುಸಾ?’ ಸಿನಿಮಾಗೆ ಸಹಾಯಕ ನಿರ್ದೇಶಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು. ಬಳಿಕ 2010ರಲ್ಲಿ ‘ಲೀಡರ್’ ಮತ್ತು ‘ಲೈಫ್ ಈಸ್ ಬ್ಯೂಟಿಫುಲ್’ (2012) ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಮಾತ್ರವಲ್ಲದೆ, ಈ ಮೂರು ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದರು.
ಇದನ್ನೂ ಓದಿ: ಮದುವೆ ನಿರಾಕರಣೆ.. ವಾಟ್ಸಪ್ನಲ್ಲಿ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ
ಸಹಾಯಕನಿಂದ ನಿರ್ದೇಶಕನಾಗಿ ಬಡ್ತಿ
2015ರಲ್ಲಿ ನಾಗ್ ಅಶ್ವಿನ್ ದಿಕ್ಕೇ ಬದಲಾಯಿಸಿದ ಸಿನಿಮಾವೆಂದರೆ ಅದು ‘ಯೆವಡೆ ಸುಬ್ರಮಣ್ಯಂ’. ಈ ಸಿನಿಮಾದ ಕಥೆ, ನಿರ್ದೇಶನ ಮಾಡಿ ಸೈ ಎನಿಸಿಕೊಂಡರು. ‘ಯೆವಡೆ ಸುಬ್ರಮಣ್ಯಂ’ ಸಿನಿಮಾ ಅಭಿಮಾನಿಗಳ ಮನಗೆದ್ದಿತ್ತಲ್ಲದೆ, ಸಹಾಯಕ ನಿರ್ದೇಶಕನಿಂದ ನಿರ್ದೇಶಕನಾಗಿ ನಾಗ್ ಅಶ್ವಿನ್ ಬಡ್ತಿ ಪಡೆದರು. ಜೊತೆಗೆ ಅನೇಕ ಪ್ರಶಸ್ತಿ ಬಾಚಿಕೊಂಡರು.
‘ಮಹಾನಟಿ’ಯ ಕರ್ತೃ
2018ರಲ್ಲಿ ನಾಗ್ ‘ಮಹಾನಟಿ’ ಸಿನಿಮಾ ಮಾಡಿದರು. ಈ ಸಿನಿಮಾ ಕೂಡ ಬಹುತೇಕ ಅಭಿಮಾನಿಗಳ ಮನ ಗೆದ್ದಿತ್ತು. ಕೀರ್ತಿ ಸುರೇಶ್ ನಾಯಕಿಯನ್ನಾಗಿ ಇಟ್ಟುಕೊಂಡು ಕಥೆ ಹೆಣೆದಿದ್ದ ನಾಗ್ 25 ಕೋಟಿ ಬಜೆಟ್ನಲ್ಲಿ ಸಿನಿಮಾ ಮಾಡಿದ್ದರು. ಆದರೆ ಈ ಸಿನಿಮಾ ಅವರಿಗೆ ನೀಡಿದ್ದು ಬರೋಬ್ಬರಿ 83 ಕೋಟಿ!.
ಇದನ್ನೂ ಓದಿ: ನನ್ನ ಮದುವೆಯಾಗು..! ಗಂಡ ಮತ್ತು 3 ಮಕ್ಕಳನ್ನು ತೊರೆದು ಪ್ರಿಯಕರನ ಮನೆ ಸೇರಿದ ಮಹಿಳೆ!
ನಿರ್ದೇಶಕನಿಂದ ನಿರ್ಮಾಣದತ್ತ
2021ರಲ್ಲಿ ನಾಗ್ ಅಶ್ವಿನ್ ‘ಪಿತ್ತ ಕಥಲು’ ಸಿನಿಮಾ ಬರೆದರು. ಜೊತೆಗೆ ನಿರ್ದೇಶನ ಮಾಡಿದರು. ಶೃತಿ ಹಾಸನ್ ಅವರನ್ನು ನಾಯಕಿಯನ್ನಾಗಿಸಿಕೊಂಡು ಸಿನಿಮಾ ರಿಲೀಸ್ ಮಾಡಿದರು. ಅದೇ ವರ್ಷ ‘ಜಾತಿ ರತ್ನಲು’ ಸಿನಿಮಾ ಕಥೆ ಆಲಿಸಿದ ನಾಗ್ ಈ ಸಿನಿಮಾಗೆ ನಿರ್ಮಾಪಕರೂ ಆದರು. ಅಂದಹಾಗೆಯೇ ‘ಪಿತ್ತ ಕಥಲು’ ಅನುದೀಪ್ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ 6 ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗಿತ್ತು. ಆದರೆ 70 ಕೋಟಿ ಆದಾಯವನ್ನು ಈ ಸಿನಿಮಾ ನೀಡಿದೆ.
ಇದನ್ನೂ ಓದಿ: 2ನೇ ದಿನಕ್ಕೆ ಗಳಿಕೆಯಲ್ಲಿ ಶೇ.50ರಷ್ಟು ಕುಸಿದ ಕಲ್ಕಿ ಸಿನಿಮಾ! ಇಲ್ಲಿವರೆಗಿನ ಗಳಿಕೆಯೆಷ್ಟು? ಇಲ್ಲಿದೆ ಮಾಹಿತಿ
ಕಥೆ, ಚಿತ್ರಕಥೆ, ನಿರ್ದೇಶನ, ನಿರ್ಮಾಣದಲ್ಲಿ ಸೈ ಎನಿಸಿಕೊಂಡ ನಾಗ್ ಅಶ್ವಿನ್ ಬಿಗ್ ಬಜೆಟ್ನಲ್ಲಿ ಸಿನಿಮಾ ಮಾಡುವ ಯೋಚನೆ ಹೊಳೆದಿತ್ತು. ಅದರಂತೆ ಬಾಹುಬಲಿ ಪ್ರಭಾಸ್, ದೀಪಿಕಾ ಪಡುಕೋಣೆ ಜೊತೆಗೆ ಬಿಗ್ ಬಿ ಅಮಿತಾಭ್, ಕಮಲ್ ಹಾಸನ್ರಂತಹ ಮೇರುನಟರನ್ನು ಇಟ್ಟುಕೊಂಡು ಮಾರ್ಡನ್ ಮಹಾಭಾರತ ಕಥೆಯನ್ನಾಧರಿಸಿ ಕಲ್ಕಿ 2898 AD ಸಿನಿಮಾ ಹೆಣೆದರು. ಸದ್ಯ ಈ ಬಹುಭಾಷಾ ಸಿನಿಮಾ ಥಿಯೇಟರ್ಗಳಲ್ಲಿ ರಿಲೀಸ್ಗೊಂಡು ರನ್ನಿಂಗ್ನಲ್ಲಿದೆ.
ಅಂದಹಾಗೆಯೇ ನಾಗ್ ಅಶ್ವಿನ್ ಇಲ್ಲಿಯವರೆಗೆ 4 ಸಿನಿಮಾ ಮಾಡಿದ್ದಾರೆ. ಒಂದು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅದರಲ್ಲಿ ‘ಯೆವೆಡೆ ಸುಬ್ರಮಣ್ಯಂ’ ಮತ್ತು ‘ಮಹಾನಟಿ’ ನಾಗ್ ದಿಕ್ಕನ್ನೇ ಬದಲಾಯಿಸಿದ ಸಿನಿಮಾವಾಗಿದೆ. ಈ ಎರಡು ಸಿನಿಮಾಗಳು ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಇದಲ್ಲದೆ, ನಾನಿ, ಕೀರ್ತಿ ಸುರೇಶ್, ಶೃತಿ ಹಾಸನ್, ಪ್ರಭಾಸ್, ದೀಪಿಕಾ ಅವರಿಗೆ ನಾಗ್ ಈಗಾಗಲೇ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಇದನ್ನೂ ಓದಿ: ದರ್ಶನ್ ಅರೆಸ್ಟ್ ಆದ ದಿನ ನಾನೂ ಶೂಟಿಂಗ್ ಸ್ಪಾಟ್ನಲ್ಲಿದ್ದೆ.. ಬಿಗ್ ಬಾಸ್ ವಿನಯ್ ಬಿಚ್ಚಿಟ್ರು ಘಟನೆಯ ಸತ್ಯಾಸತ್ಯತೆ
ವೈವಾಹಿಕ ಬದುಕು
ನಾಗ್ ಅಶ್ವಿನ್ ಮಡದಿ ಪ್ರಿಯಾಂಕ ದತ್. 2015ರಲ್ಲಿ ಈ ಜೋಡಿ ವಿವಾಹವಾದರು. ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿರುವ ಪ್ರಿಯಾಂಕ ದತ್ರವರು ಗಂಡನ ಎಲ್ಲಾ ಕೆಲಸಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಅಂದಹಾಗೆಯೇ ಪ್ರಿಯಾಂಕರವರು 600 ಕೋಟಿ ಬಜೆಟ್ನಲ್ಲಿ ನಿರ್ಮಾಣಗೊಂಡ ಕಲ್ಕಿ ಸಿನಿಮಾದ ನಿರ್ಮಾಪಕ ಅಶ್ವಿನಿ ದತ್ ಅವರ ಮಗಳು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ