/newsfirstlive-kannada/media/post_attachments/wp-content/uploads/2024/06/kalki-prabas-1.jpg)
ಕಲ್ಕಿ 2898 AD ಸಿನಿಮಾ ಸಖತ್ ಸೌಂಡ್ ಮಾಡ್ತಿದೆ. ದೇಶ, ವಿದೇಶಗಳಲ್ಲೂ ಸಾಕಷ್ಟು ಸುದ್ದಿಯಾಗುತ್ತಿರುವ ಕಲ್ಕಿ ಬಿಡುಗಡೆಯಾದ 11 ದಿನದಲ್ಲಿ ಅದರ ಗಳಿಕೆ 900 ಕೋಟಿ ರೂಪಾಯಿಗಳ ಗಡಿ ದಾಟಿದೆ. ಲೇಟೆಸ್ಟ್​ ವಿಚಾರ ಏನೆಂದರೆ ಕಲ್ಕಿ ಓಟಿಟಿಯಲ್ಲೂ ಬರಲು ಸಿದ್ಧವಾಗುತ್ತಿದೆ.
ಮಾಹಿತಿಗಳ ವರದಿಗಳ ಪ್ರಕಾರ.. ಅಮೆಜಾನ್ ಪ್ರೈಮ್​ನಲ್ಲಿ ಕಲ್ಕಿ 2898 AD ನೋಡಬಹುದು. ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಇಂಗ್ಲಿಷ್ ಉಪಶೀರ್ಷಿಕೆಯೊಂದಿಗೆ ಸ್ಟ್ರೀಮ್ ಆಗಲಿದೆ. ನೆಟ್‌ಫ್ಲಿಕ್ಸ್​ನಲ್ಲಿ ಹಿಂದಿ ಭಾಷೆಯಲ್ಲಿ ಇಂಗ್ಲಿಷ್ ಉಪಶೀರ್ಷಿಕೆಯೊಂದಿಗೆ ಸಿನಿಮಾ ನೋಡಬಹುದಾಗಿದೆ!
ಇದನ್ನೂ ಓದಿ:ನಂಗೆ ಬಾಲಿವುಡ್ ಸಂದರಿ ಬೇಡ.. ನನ್ ಹುಡ್ಗಿ ಹೇಗಿರಬೇಕು ಅಂದರೆ.. ಕುಲ್ದೀಪ್ ಆಸೆ ಏನು?
ಸಿನಿಮಾ ಮಂದಿರಗಳಲ್ಲಿ ಚಿತ್ರ ಓಡುತ್ತಿರುವ ಕಾರಣ ಸದ್ಯಕ್ಕೆ OTTಯಲ್ಲಿ ಸಿನಿಮಾ ಸಿಗಲ್ಲ. ಜುಲೈ ಅಂತ್ಯದ ನಂತರ OTTಗೆ ಸಿನಿಮಾ ತರಲು ಪ್ಲಾನ್ ಮಾಡಲಾಗಿದೆ. ಆದರೆ ಥಿಯೇಟರ್​​ನಲ್ಲಿ ಸಿನಿಮಾ ಪ್ರದರ್ಶನ ಜೋರಾಗಿದ್ದರೆ ಸೆಪ್ಟೆಂಬರ್ ಎರಡನೇ ವಾರದ ವೇಳೆಗೆ OTTಯಲ್ಲಿ ಬಿಡುಗಡೆ ಆಗಬಹುದು ಎಂದು ಹೇಳಲಾಗುತ್ತಿದೆ.
ಕಲ್ಕಿ 2898 ಎಡಿ ಬಿಗ್ ಬಜೆಟ್ ಚಿತ್ರ. OTTನಲ್ಲಿ ಬಿಡುಗಡೆಗೂ ಮೊದಲೇ 1000 ಕೋಟಿ ಗಳಿಸಲಿದೆ ಎಂದು ಹೇಳಲಾಗುತ್ತಿದೆ. ವೈಜಯಂತಿ ಮೂವೀಸ್‌ನ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ಪ್ರಭಾಸ್ ಸೇರಿದಂತೆ ಅನೇಕ ಸ್ಟಾರ್​ಗಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us