Advertisment

ಕಲ್ಕಿಯ ಬುಜ್ಜಿ ಕಾರ್ ಡ್ರೈವ್ ಮಾಡಿದ ರಿಷಬ್ ಶೆಟ್ಟಿ.. ಪ್ರಭಾಸ್​ಗೆ ಸಾಥ್ ನೀಡಿದ್ರಾ ಡಿವೈನ್ ಸ್ಟಾರ್​..?

author-image
Bheemappa
Updated On
ಕಲ್ಕಿಯ ಬುಜ್ಜಿ ಕಾರ್ ಡ್ರೈವ್ ಮಾಡಿದ ರಿಷಬ್ ಶೆಟ್ಟಿ.. ಪ್ರಭಾಸ್​ಗೆ ಸಾಥ್ ನೀಡಿದ್ರಾ ಡಿವೈನ್ ಸ್ಟಾರ್​..?
Advertisment
  • ದೊಡ್ಡ ನಿರೀಕ್ಷೆ ಮೂಡಿಸಿರುವ ಪ್ಯಾನ್ ಇಂಡಿಯಾ ಮೂವಿ ಕಲ್ಕಿ
  • ಕಲ್ಕಿ- ಕಾಂತಾರ; ಭೈರವನ ಬುಜ್ಜಿ ವಾಹನವನ್ನೇರಿದ ರಿಷಬ್ ಶೆಟ್ಟಿ
  • ಕರ್ನಾಟಕದಲ್ಲೇ ಬುಜ್ಜಿ ಕಾರನ್ನ ಚಾಲನೆ ಮಾಡಿದ ಡಿವೈನ್ ಸ್ಟಾರ್

ಡಾರ್ಲಿಂಗ್​ ಪ್ರಭಾಸ್ ಅಭಿನಯದ ಪ್ಯಾನ್ ಇಂಡಿಯಾ ಮೂವಿ ಕಲ್ಕಿ 2898 AD ಬಹುನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ ಮೇಕಿಂಗ್‌ನಿಂದ ಸಖತ್ ಹೈಪ್‌ ಕ್ರಿಯೇಟ್‌ ಮಾಡಿದೆ. ಇದೀಗ ಇದೇ ಸಿನಿಮಾಕ್ಕೆ ರಿಷಬ್‌ ಶೆಟ್ಟಿ ಸಾಥ್‌ ನೀಡಿದ್ದಾರೆ. ಅಂದರೆ ಕಲ್ಕಿ ಸಿನಿಮಾದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿರುವ ಬುಜ್ಜಿ ಕಾರನ್ನು ಕುಂದಾಪುರದಲ್ಲಿ ರೈಡ್‌ ಮಾಡುವ ಮೂಲಕ ಪ್ರಭಾಸ್​ಗೆ ಸಾಥ್ ನೀಡಿದಂತೆ ಆಗಿದೆ.

Advertisment

ಇದನ್ನೂ ಓದಿ:ಜೈಲೂಟ ತಿನ್ನದೆ ಪರದಾಟ.. ಹೆಂಡತಿ, ಮಗನನ್ನು ನೋಡಿ ಇನ್ನಷ್ಟು ಮಂಕಾದ ದರ್ಶನ್..!

publive-image

ಭೈರವನ ಆಪ್ತ ಬುಜ್ಜಿ ವಾಹನವನ್ನು ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಓಡಿಸಿದ್ದಾರೆ. ಇದನ್ನು ತಯಾರಿಸಿದ ಮಹೀಂದ್ರಾ ಕಂಪನಿಯ ಆನಂದ್‌ ಮಹೀಂದ್ರ ಸಹ ಇತ್ತೀಚೆಗಷ್ಟೇ ಈ ವಾಹನ ಏರಿ ಖುಷಿ ಪಟ್ಟಿದ್ದರು. ಇದೀಗ ಇದೇ ವಾಹನ ಕುಂದಾಪುರಕ್ಕೆ ಬಂದಿದೆ. ಸ್ಟೈಲಿಶ್‌ ಲುಕ್‌ನಲ್ಲಿ ಬುಜ್ಜಿಯನ್ನು ರೈಡ್‌ ಮಾಡಿದ್ದಾರೆ. ಈ ರೈಡ್‌ನ ಕಿರು ವಿಡಿಯೋವನ್ನು ವೈಜಯಂತಿ ಮೂವೀಸ್‌ ಟ್ವಿಟರ್‌ ಪುಟದಲ್ಲಿ ಶೇರ್‌ ಮಾಡಿದ್ದು, ಕಲ್ಕಿ X ಕಾಂತಾರ ಎಂಬ ಕ್ಯಾಪ್ಷನ್‌ ನೀಡಿದೆ.

ಇದನ್ನೂ ಓದಿ: ಪ್ರಬುದ್ಧ ಕೊಲೆ ಕೇಸ್​.. ತಾಯಿ ಒತ್ತಡಕ್ಕೆ ಮಣಿದ ಸಿದ್ದರಾಮಯ್ಯ; ಪ್ರಕರಣ ಸಿಐಡಿಗೆ ಒಪ್ಪಿಸಿದ ಸಿಎಂ

Advertisment

ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್‌ ಸಾಕಷ್ಟು ಸದ್ದು ಮಾಡುತ್ತಿದೆ. ವಿಭಿನ್ನ ಬಗೆಯ ಪ್ರಪಂಚವನ್ನೇ ತೋರಿಸಿದ್ದಾರೆ ನಿರ್ದೇಶಕರು. ಕಾಶಿಯನ್ನು ಕೊನೆಯದಾಗಿ ಉಳಿದ ನಗರವೆಂದು ಬಿಂಬಿಸಲಾಗಿದೆ. ಅದರ ಉಳಿವಿಗಾಗಿ ನಡೆಯುವ ಹೋರಾಟವಿದು. ದೃಶ್ಯವೈಭವವೇ ಇಡೀ ಟ್ರೇಲರ್‌ನ ಜೀವಾಳ. ಊಹೆಗೂ ನಿಲುಕದ ಒಂದಷ್ಟು ಅಚ್ಚರಿಗೆ ದೂಡುವ ದೃಶ್ಯಗಳು ಇಲ್ಲಿನ ಹೈಲೈಟ್.‌ ಅತ್ಯುತ್ತಮ ಹಿನ್ನೆಲೆ ಸ್ಕೋರ್, ಹೈ ಕ್ಲಾಸ್ VFX ಮತ್ತು ರೋಮಾಂಚನಗೊಳಿಸುವ ದೃಶ್ಯಗಳೊಂದಿಗೆ ಕಲ್ಕಿ ಸಿನಿಮಾ ಮೂಡಿಬಂದಿದೆ.

ಇದನ್ನೂ ಓದಿ: ರೋಹಿತ್ ಬ್ಯಾಟಿಂಗ್​ ಅಬ್ಬರಕ್ಕೆ ಬೆಚ್ಚಿಬಿದ್ದ ಆಸಿಸ್​.. ಸೆಂಚುರಿ ಬಾರಿಸದೇ ನಿರಾಸೆಯಿಂದ ಹೊರನಡೆದ ಹಿಟ್​ಮ್ಯಾನ್

Advertisment

'ಕಲ್ಕಿ 2898 AD' ಮೂವಿಯನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದು ಬಾಲಿವುಡ್​ ಬಿಗ್ ಬೀ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ವೈಜಯಂತಿ ಮೂವೀಸ್ ಬಂಡವಾಳ ಹೂಡಿದೆ. ಈ ಬಹುಭಾಷಾ, ಪುರಾಣ- ಪ್ರೇರಿತ ವೈಜ್ಞಾನಿಕ ಕಥೆಯುಳ್ಳ ಸಿನಿಮಾ, ಜೂನ್ 27ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ‌ತೆಲುಗು, ಹಿಂದಿ, ತಮಿಳು, ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment