/newsfirstlive-kannada/media/post_attachments/wp-content/uploads/2024/06/Kalki-2898-AD.jpg)
ಕಲ್ಕಿ.. ಕಲಿಯುಗದ ಕಲ್ಕಿ. ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಸೇರಿದಂತೆ ದೊಡ್ಡ, ದೊಡ್ಡ ಸ್ಟಾರ್‌ಗಳ Kalki 2898 AD ಸಿನಿಮಾ ಧೂಳೆಬ್ಬಿಸೋಕೆ ಶುರು ಮಾಡಿದೆ. ರಿಲೀಸ್ ಆದ ಮೊದಲ ದಿನವೇ ಕಲ್ಕಿ ಸಿನಿಮಾ ಬರೋಬ್ಬರಿ 180 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರೋ ವರದಿಯಾಗಿದೆ. ಇದರ ಜೊತೆಗೆ ಕಲ್ಕಿ ಪ್ಯಾನ್ ಇಂಡಿಯಾದಲ್ಲೇ ಹಲವು ರೆಕಾರ್ಡ್‌ಗಳನ್ನು ಬ್ರೇಕ್ ಮಾಡಿದೆ.
ಇದನ್ನೂ ಓದಿ: Kalki 2898 AD ರಿಲೀಸ್ ದಿನವೇ ಯಶ್ ‘ಟಾಕ್ಸಿಕ್’ ತಂಡದಿಂದ ಬಂತು ದೊಡ್ಡ ಸುದ್ದಿ; ಫ್ಯಾನ್ಸ್‌ಗೆ ಗುಡ್‌ನ್ಯೂಸ್!
ಪ್ರಭಾಸ್ ಅಭಿನಯದ ಕಲ್ಕಿ ಸಿನಿಮಾವನ್ನು ಹಾಲಿವುಡ್ ರೇಂಜ್‌ನಲ್ಲಿ ತೆಗೆಯಲಾಗಿದೆ. ಮೊದಲ ದಿನ ಸಿನಿಮಾ ನೋಡಿ ವೀಕ್ಷಕರು ಆ್ಯಕ್ಷನ್ ಸೀನ್‌ಗಳಿಗೆ ಫಿದಾ ಆಗಿದ್ದಾರೆ. ಕಲ್ಕಿ ಸಿನಿಮಾ ಭಾರತದಲ್ಲಿ ರಿಲೀಸ್ ಆದ ಮೊದಲ ದಿನವೇ ಅತಿ ಹೆಚ್ಚು ಗಳಿಕೆ ಮಾಡಿದೆ ಚಿತ್ರ ಅನ್ನೋ ಹೆಗ್ಗಳಿಕೆ ಪಾತ್ರವಾಗುತ್ತಿದೆ.
ಭಾರತದಲ್ಲಿ RRR, ಬಾಹುಬಲಿ, ಕೆಜಿಎಫ್2 ಮತ್ತು ಸಲಾರ್, ಜವಾನ್ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ರೆಕಾರ್ಡ್ ಬರೆದಿತ್ತು. ಇದೀಗ ಜವಾನ್, ಕೆಜಿಎಫ್, ಸಲಾರ್ ಬಳಿಕ ಕಲ್ಕಿ ಸಿನಿಮಾ ಬರೋಬ್ಬರಿ 180 ಕೋಟಿ ರೂಪಾಯಿ ಗಳಿಸಿ ಮುನ್ನುಗ್ಗುತ್ತಿದೆ.
ಇದನ್ನೂ ಓದಿ: ಕಲ್ಕಿ ಪ್ರಭಾಸ್ಗೆ ವಾರ್ನ್ ಮಾಡಿದ ರಾಜಮೌಳಿ.. 10 ವರ್ಷ ಹಾಕೊಂಡು ತುಳಿಯುತ್ತೇನೆ ಎಂದ ಸ್ಟಾರ್ ಡೈರೆಕ್ಟರ್ ಜಕ್ಕಣ್ಣ
ನಿರ್ದೇಶಕ ನಾಗ್ ಅಶ್ವಿನಿ ಅವರು ಸಿನಿ ಪ್ರೇಕ್ಷಕರ ಕಣ್ಣಿಗೆ ಹಬ್ಬದ ಉಡುಗೊರೆ ಕೊಟ್ಟಿದ್ದು, ಬಹುಭಾಷೆಯಲ್ಲಿ ನೋಡಿದ ಪ್ರೇಕ್ಷಕರು ಕಲ್ಕಿಗೆ ಫುಲ್ ಫಿದಾ ಆಗಿದ್ದಾರೆ. ಸಿನಿಮಾ ರಿಲೀಸ್ ಆದ ಮೊದಲ ದಿನ ತೆಲುಗು, ಹಿಂದಿ, ಕನ್ನಡ ಸೇರಿ ಭಾರತದಲ್ಲಿ 95 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ವಿಶ್ವದಾದ್ಯಂತ ತೆರೆ ಕಂಡಿರುವ ಕಲ್ಕಿ ಮೊದಲ ದಿನದ ಕಲೆಕ್ಷನ್ 180 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಯಾವ ಸಿನಿಮಾದ ಕಲೆಕ್ಷನ್ ಎಷ್ಟು?
RRR - 223 ಕೋಟಿ
ಬಾಹುಬಲಿ 2 - 217 ಕೋಟಿ
ಕೆಜಿಎಫ್ 2 - 159 ಕೋಟಿ
ಸಲಾರ್ - 158 ಕೋಟಿ
ಲಿಯೋ - 142.75 ಕೋಟಿ
ಸಾಹೋ - 130 ಕೋಟಿ
ಜವಾನ್ - 129 ಕೋಟಿ
ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಕಲ್ಕಿ 2898 ಎಡಿ ಸಿನಿಮಾಗೆ ವರ್ಲ್ಡ್ ವೈಡ್ ಮೆಚ್ಚುಗೆಯ ಮಹಾಪೂರ ಹರಿದು ಬರ್ತಿದೆ. ದೀಪಿಕಾ ಪಡುಕೋಣೆ, ಕಮಲ್ ಹಾಸನ್, ಅಮಿತಾಬ್ ಬಚ್ಚನ್ರಂತಹ ದೊಡ್ಡ ದೊಡ್ಡ ಸ್ಟಾರ್ಗಳೇ ಇರೋ ಚಿತ್ರಕ್ಕೆ ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದೆ.
600 ಕೋಟಿ ಬಜೆಟ್ನಲ್ಲಿ ನಿರ್ಮಾಣಗೊಂಡಿರೋ ಈ ಸಿನಿಮಾ ಮೊದಲ ದಿನ 180 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಇವತ್ತು ಕೂಡ ಥಿಯೇಟರ್ಗಳು ಬಹುತೇಕ ಬುಕ್ ಆಗಿದ್ದು, ಮತ್ತಷ್ಟು ಕಲೆಕ್ಷನ್ ನಿರೀಕ್ಷೆ ಮೂಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ