newsfirstkannada.com

×

ಅಂದು ಎಂಜಿಆರ್-ಶಿವಾಜಿ ಗಣೇಶನ್; ಇಂದು ವಿಜಯ್​​​-ಕಮಲ್​​; ತಮಿಳುನಾಡಲ್ಲಿ ಗೆಲುವು ಯಾರಿಗೆ?

Share :

Published January 30, 2024 at 4:32pm

Update January 30, 2024 at 4:57pm

    ಸೂಪರ್​ ಸ್ಟಾರ್​ ಎಂಟ್ರಿಯಿಂದ ತಮಿಳುನಾಡಿನಲ್ಲಿ ರಾಜಕೀಯ ಬಿರುಗಾಳಿ

    ಎಂಜಿಆರ್​ ನಂತೆಯೇ ಸಕ್ಸಸ್​ ಆಗಲಿದ್ದಾರಾ ಸೂಪರ್​ ಸ್ಟಾರ್​​ ವಿಜಯ್?

    ಕಮಲ್​​​, ವಿಜಯ್​​ ಮೈತ್ರಿಯಾದ್ರೆ ಎಷ್ಟರಮಟ್ಟಿಗೆ ವರ್ಕೌಟ್​ ಆಗುತ್ತೆ..?

ಚೆನ್ನೈ: ಬಹುನಿರೀಕ್ಷಿತ ತಮಿಳುನಾಡು ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೇವಲ 2 ವರ್ಷ ಮಾತ್ರ ಬಾಕಿ ಇದೆ. ಈ ಮುನ್ನವೇ 2024ರ ಲೋಕಸಭಾ ಚುನಾವಣೆ ನಡೆಯಲಿದೆ. ಅದಕ್ಕಾಗಿ ತಮಿಳುನಾಡಿನಲ್ಲಿ ಅತೀ ಹೆಚ್ಚು ಸೀಟು ಗೆಲ್ಲಲು ಆಡಳಿತಾರೂಢ ಸಿಎಂ ಸ್ಟಾಲಿನ್​ ನೇತೃತ್ವದ DMK, ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸೇರಿದಂತೆ ಎಲ್ಲಾ ಪಕ್ಷಗಳು ಕಸರತ್ತು ನಡೆಸುತ್ತಿವೆ. ನಾಲ್ಕು ದಶಕಗಳ ಹಿಂದೆ ಎಂಜಿಆರ್‌ ಮತ್ತು ಶಿವಾಜಿ ಗಣೇಶನ್‌ ನಡುವೇ ಸ್ಪರ್ಧೆ ಏರ್ಪಟ್ಟಿತ್ತು. ಈಗ ತಮಿಳು ಸೂಪರ್​ ಸ್ಟಾರ್​​ ದಳಪತಿ ವಿಜಯ್ ಕೂಡ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಈಗಾಗಲೇ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರೋ ಕಮಲ್​ ಹಾಸನ್​​, ವಿಜಯ್​ ಮಧ್ಯೆ ಜಿದ್ದಾಜಿದ್ದಿಯಾಗಲಿದೆಯಾ ಎಂಬ ಚರ್ಚೆ ಜೋರಾಗಿದೆ.

ಇಡೀ ಭಾರತದಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರೋ ಇಬ್ಬರು ಸ್ಟಾರ್​ ನಟರು ಕಮಲ ಹಾಸನ್ ಮತ್ತು ವಿಜಯ್​. ಇವರು ಇಬ್ಬರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆ ಅನ್ನೋ ಮಹಾ ಕದನದಲ್ಲಿ ಯಾರು ಜನರ ವಿಶ್ವಾಸಗಳಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಸದ್ಯ ಚುನಾವಣಾ ಕಣದಲ್ಲಿ ಕಮಲ್​​, ವಿಜಯ್​​​ ಪರಸ್ಪರ ಎದುರಾಳಿಗಳಾಗಿದ್ದು, ಚಿತ್ರರಂಗದಲ್ಲಿ ಗೆಲವು ಕಂಡಿದ್ದರು. ಈಗ ರಾಜಕೀಯದಲ್ಲಿಯೂ ಅದೇ ಗೆಲುವು ಕಾಣಲಿದ್ದಾರ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

ಈ ಹಿಂದೆ ಎಂಜಿಆರ್​​, ಶಿವಾಜಿ ಗಣೇಶನ್​ ಅನ್ನೋ ಇಬ್ಬರು ಮಹಾನ್‌ ನಟರ ಮಧ್ಯೆ ರಾಜಕೀಯ ಕಾಳಗವೇ ಏರ್ಪಟ್ಟಿತ್ತು. ಈ ಕಾಳಗದಲ್ಲಿ ಎಂಜಿಆರ್​ ಗೆದ್ದರು, ಶಿವಾಜಿ ಗಣೇಶನ್​ ಸೋತರು. ಒಂದೆಡೆ ಎಂಜಿಆರ್‌ ತನ್ನ ಅಭಿಮಾನಿ ವರ್ಗವನ್ನು ಮತಗಳನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಇನ್ನೊಂದೆಡೆ ಶಿವಾಜಿ ಗಣೇಶನ್​ ಅಭಿಮಾನಿಗಳಿಗೆ ಮಹಾನ್‌ ನಟರಾಗಿ ಉಳಿದರೇ ಹೊರತು ರಾಜಕಾರಣದಲ್ಲಿ ಗೆಲುವು ಕಾಣಲಿಲ್ಲ. ಅಭಿಮಾನವನ್ನು ಮತವನ್ನಾಗಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಶಿವಾಜಿ ಗಣೇಶನ್ ಅವರನ್ನು ಮೇರು ನಟರಾಗಿ​ ಸ್ವೀಕರಿಸಿದರು. ಎಂಜಿಆರ್​ ಅವರನ್ನು ರಾಜಕೀಯ ನೇತಾರರನ್ನಾಗಿಸಿದರು.

ಈ ಬಾರಿ ವಿಜಯ್​-ಕಮಲ್‌ ರಾಜಕೀಯ ಎಂಜಿಆರ್‌ ಮತ್ತು ಶಿವಾಜಿ ಗಣೇಶನ್​ ಸನ್ನಿವೇಶವನ್ನು ಮರುಕಳಿಸಲಿದೆಯಾ ಎನ್ನುವ ಚರ್ಚೆ ನಡೆಯುತ್ತಿವೆ. ಇಬ್ಬರಿಗೂ ತಮಿಳುನಾಡಿನಲ್ಲಿ ಅಪಾರ ಅಭಿಮಾನಿ ಬಳಗವಿದೆ. ಸುಲಭವಾಗಿ ಜನರ ಸಂಪರ್ಕಕ್ಕೆ ಸಿಕ್ಕರೆ ಗೆಲುವು ಪಕ್ಕಾ ಎನ್ನಬಹುದು. ವಿಜಯ್​​​ ಸರಳತೆ-ಸಜ್ಜನಿಕೆಗೆ ಹೆಸರು ವಾಸಿ. ಕಮಲ್‌ ಬಹಳ ಬುದ್ಧಿವಂತರಾದ್ರೂ ವಿಜಯ್​ ಮುಂದೆ ರಾಜಕೀಯ ಮಾಡುವುದು ಕಷ್ಟ ಎನ್ನುತ್ತಿವೆ ಮೂಲಗಳು.

ತಮಿಳುನಾಡಿನ ಆಗಿನ ರಾಜಕೀಯವೇ ಬೇರೆ, ಈಗಿನ ರಾಜಕೀಯವೇ ಬೇರೆ. ಆಗಿನ ರಾಜಕೀಯ ಪರಿಸ್ಥಿತಿಗಿಂತ ಈಗಿನ ಸನ್ನಿವೇಶ ತುಂಬಾ ಭಿನ್ನವಾಗಿದೆ. ಎಂಜಿಆರ್ ಮೊದಲಿನಿಂದಲೂ ಕಲಾವಿದರನ್ನು ಬೆಳೆಸಿದ್ರು, ಬಳಗವನ್ನು ಕಟ್ಟಿಕೊಂಡಿದ್ದರು. ಅಂದು ನಿರ್ದೇಶಕರು, ಕವಿಗಳು, ನಿರ್ಮಾಪಕರು ಸೇರಿದಂತೆ ಉದ್ಯಮಿಗಳು ಕೂಡ ಎಂಜಿಆರ್‌ ರಾಜಕೀಯದ ಯಶಸ್ಸಿಗೆ ಕಾರಣರಾಗಿದ್ದರು.

ಶಿವಾಜಿ ಗಣೇಶನ್‌ ಶ್ರೇಷ್ಠ ನಟ ಆಗಿದ್ದರು. ಚಿತ್ರರಂಗದಲ್ಲಿನ ಜನಪ್ರಿಯತೆ ರಾಜಕೀಯದಲ್ಲಿ ಯಾಕೋ ಕೆಲಸ ಮಾಡಲಿಲ್ಲ. ಎಂಜಿಆರ್‌ ಮುಂದೆ ಶಿವಾಜಿ ಗಣೇಶನ್‌ ಸೋತರೂ ರಾಜಕೀಯ ಹೋರಾಟ ಮುಂದುವರಿಸಿದ್ರು. ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ದೀರ್ಘಕಾಲ ನಡೆದ ಹೋರಾಟದಲ್ಲೂ ಎಂಜಿಆರ್​ ಗೆದ್ದು ಬೀಗಿದ್ದರು. ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಎಂಜಿಆರ್​​ ಯಶಸ್ಸು ಸಾಧಿಸಿದ್ದರು.

ಎಂಜಿಆರ್​ ನಂತೆಯೇ ಸಕ್ಸಸ್​ ಆಗಲಿದ್ದಾರಾ ವಿಜಯ್​​..?

ಶಿವಾಜಿ ಗಣೇಶನ್​ ರೀತಿ ಮತ್ತೊಬ್ಬ ನಟ ವಿಜಯಕಾಂತ್‌ ರಾಜಕೀಯ ಪ್ರವೇಶಿಸಿದರು. ಮಾಸ್ ಹೀರೋ ಎನಿಸಿದರೂ ವಿಜಯಕಾಂತ್ ರಾಜಕೀಯದಲ್ಲಿ ಸ್ವಲ್ಪ ಮಟ್ಟಿನ ಯಶಸ್ಸು ಕಂಡರು. ಆದರೆ ಕೊನೆಯತನಕ ತನ್ನ ಪ್ರಭಾವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸದ್ಯ ವಿಜಯ್​​ ಅವರಿಗೆ ಅಪಾರ ಅಭಿಮಾನಿ ವರ್ಗವಿದೆ. ಇವರ ರಾಜಕೀಯ ಜೀವನದಲ್ಲಿ ಯಾವ ರೀತಿ ಪಾತ್ರವಹಿಸುತ್ತದೆ ಎಂಬುದರ ಮೇಲೆ ಯಶಸ್ಸು ನಿಂತಿದೆ ಎನ್ನಬಹುದು.

ಇನ್ನು ಕಮಲ್​ ಹಾಸನ್​ಗೆ ತನ್ನದೇ ಆದ ಕಟ್ಟರ್​ ಅಭಿಮಾನಿಗಳು ಇದ್ದಾರೆ. ಬಿಜೆಪಿ ವಿರುದ್ಧದ ಇಂಡಿಯಾ ಕೂಟದಲ್ಲೂ ಗುರುತಿಸಿಕೊಳ್ಳುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಸುದ್ದಿಯಾಗುತ್ತಿದ್ದಾರೆ. ಈಗಾಗಲೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಕಮಲ್​ ಪಾರ್ಟಿ ಗೆದ್ದಿಲ್ಲವಾದ್ರೂ ವೋಟ್​ ಶೇರ್​​ ಮಾತ್ರ ಚೆನ್ನಾಗಿ ಪಡೆದುಕೊಂಡಿದೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಈಗಿನ ಸನ್ನಿವೇಶದಲ್ಲಿ ಎಷ್ಟು ಸ್ಥಾನಗಳು ಗೆಲ್ಲಲ್ಲಿದ್ದಾರೆ ಎನ್ನುವ ಸ್ಪಷ್ಟತೆ ದೊರೆತಿಲ್ಲ.

ನಟ ವಿಜಯ್​​ ಹೊಸಪಕ್ಷ ಲೋಕಸಭಾ ಚುನಾವಣೆಯಲ್ಲಿ ಎಷ್ಟು ಸೀಟು ಗೆಲ್ಲಬಹುದು ಎಂದು ಇನ್ನೂ ಅಂದಾಜಿಲ್ಲ. ಇತ್ತೀಚೆಗೆ ಖಾಸಗಿ ವಾಹಿನಿಯೊಂದು ನಡೆಸಿದ ಸಮೀಕ್ಷೆ ಪ್ರಕಾರ ವಿಜಯ್​ ಪಾರ್ಟಿಗೆ ಶೇ 20ರಷ್ಟು ಮತಗಳು ಲಭಿಸಲಿವೆ ಎಂದು ಭವಿಷ್ಯ ನುಡಿದಿದೆ.

ಈ ಬಾರಿ ಕೂಡ ಚುನಾವಣೆಯಲ್ಲಿ ಡಿಎಂಕೆಗೆ ಹೆಚ್ಚಿನ ಅವಕಾಶವಿದೆ. ಕಳೆದ ಬಾರಿಯಂತೆ ಈ ಸಲವೂ ದ್ರಾವಿಡ ಪಕ್ಷ ತನ್ನ ಮಿತ್ರ ಪಕ್ಷಗಳ ಜತೆಗೂಡಿ 30ಕ್ಕೂ ಹೆಚ್ಚು ಸ್ಥಾನಗಳನ್ನು ಬಗಲಿಗೆ ಹಾಕಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ವಿಜಯ್​​ ಪಕ್ಷ ಪಡೆಯುವ ಶೇಕಡವಾರು ಮತದ ದುಪ್ಪಟ್ಟಿಗಿಂತಲೂ ಹೆಚ್ಚು, ಅಂದರೆ, ಶೇ. 40ರಷ್ಟು ಮತಗಳನ್ನು ಡಿಎಂಕೆ ಬಾಚಿಕೊಳ್ಳಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಕಮಲ್​- ವಿಜಯ್​​ ಮೈತ್ರಿ..!

ಕಮಲ್‌ ಹಾಸನ್‌ ಓರ್ವ ವಿಚಾರವಾದಿ. ವಿಜಯ್ ಅವರು ಮಾಸ್​ ಹೀರೋ. ಇವರಿಬ್ಬರ ನಡುವೆ ರಾಜಕೀಯ ಚದುರಂಗದಾಟದಲ್ಲಿ ಹೊಂದಾಣಿಕೆ ನಡೆಯಲು ಎಷ್ಟು ಸಾಧ್ಯ ಎನ್ನುವ ಚರ್ಚೆ ಕೂಡ ನಡೆಯುತ್ತಿದೆ. ತಮಿಳುನಾಡು ರಾಜಕೀಯಕ್ಕಿಂತ ಹೆಚ್ಚಾಗಿ ಈ ಪ್ರಶ್ನೆ ರಾಷ್ಟ್ರ ರಾಜಕಾರಣದಲ್ಲಿ ಪ್ರಬಲವಾಗಿ ಕೇಳಿಬರುತ್ತಿದೆ.

ಕಮಲ್‌ ಹಾಸನ್‌ ಮುಂದೊಂದು ದಿನ ವಿಜಯ್​​ ಜತೆ ರಾಜಕೀಯ ಮೈತ್ರಿ ಸಾಧಿಸುವ ಸುಳಿವು ನೀಡಬಹುದು ಎನ್ನುತ್ತಿವೆ ಮೂಲಗಳು. ಒಂದು ವೇಳೆ ಇವರಿಬ್ಬರ ನಡುವೆ ಹೊಂದಾಣಿಕೆ ನಡೆದಿದ್ದೇ ಆದಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷವನ್ನು ಧೂಳಿಪಟ ಮಾಡಬಹುದು ಎನ್ನುತ್ತಾರೆ ರಾಜಕೀಯ ತಜ್ಞರು.

ಲೇಖಕರು: ಗಣೇಶ್​ ನಚಿಕೇತು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂದು ಎಂಜಿಆರ್-ಶಿವಾಜಿ ಗಣೇಶನ್; ಇಂದು ವಿಜಯ್​​​-ಕಮಲ್​​; ತಮಿಳುನಾಡಲ್ಲಿ ಗೆಲುವು ಯಾರಿಗೆ?

https://newsfirstlive.com/wp-content/uploads/2024/01/Vijay-Kamla.jpg

Load More