‘ನನ್ನೂರು ಕರ್ನಾಟಕ, ಈ ನಾಡನ್ನ ಬಿಟ್ಟು ಎಲ್ಲಿಗೂ ಹೋಗಲ್ಲ’ -DGP ಕಮಲ್ ಪಂತ್

author-image
Bheemappa
Updated On
‘ನನ್ನೂರು ಕರ್ನಾಟಕ, ಈ ನಾಡನ್ನ ಬಿಟ್ಟು ಎಲ್ಲಿಗೂ ಹೋಗಲ್ಲ’ -DGP ಕಮಲ್ ಪಂತ್
Advertisment
  • ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಕಮಲ್ ಪಂತ್
  • ನಾಡಿನ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡ IPS​ ಅಧಿಕಾರಿ
  • 34 ವರ್ಷದ ಸೇವೆಯ ಕುರಿತು ಕಮಲ್ ಪಂತ್ ಅವರು ಹೇಳಿದ್ದೇನು?

ಬೆಂಗಳೂರ: ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರು (DGP) ಕಮಾಂಡೆಂಟ್ ಜನರಲ್, ಗೃಹ ರಕ್ಷಕರು ಮತ್ತು ನಾಗರಿಕ ರಕ್ಷಣಾ ನಿರ್ದೇಶಕರಾಗಿ 34 ವರ್ಷಗಳ ಸೇವೆ ಸಲ್ಲಿಸಿರುವ ಐಪಿಎಸ್​ ಅಧಿಕಾರಿ ಕಮಲ್ ಪಂತ್ ಅವರು ನಾಳೆ ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ರಾಜ್ಯ ಪೊಲೀಸ್ ಇಲಾಖೆಯಿಂದ ಇಂದು ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ: ಲಡಾಖ್​​ನಲ್ಲಿ ಭಾರೀ ಅನಾಹುತ.. ಐವರು ಯೋಧರ ದಾರುಣ ಸಾವು.. ಆಗಿದ್ದೇನು..?

ಕೋರಮಂಗಲದ ಕೆಎಸ್​ಆರ್​ಪಿ ಮೈದಾನದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಕಮಲ್ ಪಂತ್ ಅವರು, 34 ವರ್ಷದ ಸೇವೆ ಸಲ್ಲಿಸಿ ನಿವೃತ್ತಿ ಆಗುತ್ತಿದ್ದೇನೆ. ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಬಹಳ ಸಂತೋಷವಿದೆ. ಈ 34 ವರ್ಷ ಬೇರೆ ಬೇರೆ ವಿಭಾಗದಲ್ಲಿ ಕೆಲಸ ಮಾಡಿ ನನಗೆ ಕೊಟ್ಟ ಜವಾಬ್ದಾರಿಯನ್ನ ಸಮರ್ಪಕವಾಗಿ ಹಾಗೂ ನಿಷ್ಠೆಯಿಂದ ಮಾಡಿರುವ ಸಂತೋಷವಿದೆ. ಎಸ್ಐಟಿ ಹಾಗೂ ಲೋಕಾಯುಕ್ತ ಪ್ರಕರಣದ ಬಗ್ಗೆ ಇದೇ ವೇಳೆ ಮೆಲುಕು ಹಾಕಿದರು. ಈ ಕೇಸ್​ಗಳಲ್ಲಿದ್ದ ವ್ಯಕ್ತಿಗಳು ತುಂಬಾ ಪ್ರಭಾವಿಗಳು ಆಗಿದ್ದರು. ಅವಾಗ ಸರ್ಕಾರ ನನ್ನ ಮೇಲೆ ಭರವಸೆ ಇಟ್ಟು ಕೇಸ್ ಕೊಟ್ಟಿದ್ದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: IND vs SA; ಹಿಟ್​​​ಮ್ಯಾನ್ ಇಂದಿನ ಬಿಗ್ ಮ್ಯಾಚ್​ ವಿನ್ನರ್.. ಇದಕ್ಕೆ ಅಸಲಿ ಕಾರಣ ಇಲ್ಲಿದೆ!

publive-image

ಬೆಂಗಳೂರು ಕಮಿಷನರ್ ಅಗಿದ್ದಾಗ ಸ್ಯಾಂಡಲ್​ವುಡ್​ ನಟ ಪುನೀತ್ ರಾಜ್​ಕುಮಾರ್ ಅವರು ನಿಧನರಾಗಿದ್ದಾಗ ಸಾಕಷ್ಟು ಅತಂಕವಿತ್ತು. ಆಗ ಪೊಲೀಸ್ ಇಲಾಖೆಯ ಅಧಿಕಾರಿಗಳು ತುಂಬಾ ಉತ್ತಮವಾಗಿ ಕಾಯನಿರ್ವಹಿಸಿದ್ದಾರೆ. ಯಾವುದೇ ರೀತಿಯಲ್ಲೂ ಸಮಸ್ಯೆಯಾಗದಂತೆ ಅವರ ಅಂತ್ಯಕ್ರಿಯೆ ಮುಗಿಯುವವರೆಗೂ ಉತ್ತಮ ಕೆಲಸ ಮಾಡಿದ್ದಾರೆ. ಇದೇ ವೇಳೆ ಪುನೀತ್ ಅವರ ಕುಟುಂಬಸ್ಥರು ನಮಗೆ ಬೆಂಬಲವಾಗಿ ನಿಂತಿದ್ದರು. ನನ್ನೂರು ಕರ್ನಾಟಕ, ನಾನು ಕರ್ನಾಟಕ ಬಿಟ್ಟು ಎಲ್ಲಿಗೂ ಹೋಗಲ್ಲ. ಹೋಗೋದಕ್ಕೂ ಎಲ್ಲಿಯೂ ಜಾಗವಿಲ್ಲ. ನೀವೇ ನನ್ನ ಸಂಬಂಧಿಕರು ಎಂದು ಕೊನೆಯಲ್ಲಿ ಕಮಲ್ ಪಂತ್ ಅವರು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಇದನ್ನೂ ಓದಿ: IND vs SA; ಆಫ್ರಿಕಾದ ಲಕ್ಕಿ ಕ್ಯಾಪ್ಟನ್​.. ನಾಯಕನಾಗಿ ಮಾಕ್ರಮ್ ಸೋತ ಇತಿಹಾಸವೇ ಇಲ್ಲ..! ರೋಚಕ ಜರ್ನಿ

publive-image

1990ರ ಬ್ಯಾಚ್​ನ ಐಪಿಎಸ್ ಅಧಿಕಾರಿ ಕಮಲ್ ಪಂತ್

ರಾಜ್ಯದ ದಕ್ಷ ಪೊಲೀಸ್ ಅಧಿಕಾರಿ ಕಮಲ್ ಪಂತ್
ತಮ್ಮ ಸೇವಾವಧಿಯಲ್ಲಿ ಹಲವು ಹಗರಣಗಳನ್ನ ಬಯಲಿಗೆಳೆದಿದ್ದಾರೆ
ಸಿಬಿಐನಲ್ಲಿದ್ದಾಗ ನಕಲಿ ಛಾಪಾ ಕಾಗದ ಹಗರಣದ ತನಿಖೆ
ಲೋಕಾಯುಕ್ತ ಡೀಲ್ ಕೇಸ್​ನಲ್ಲಿ SITಯ ಮುಖ್ಯಸ್ಥರಾಗಿದ್ದರು
ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ
ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ, ಬೆಂಗಳೂರು ರೌಡಿಗಳ ಮಟ್ಟ ಹಾಕಲು ಕ್ರಮ, ಡ್ರಗ್ಸ್ ಮಾಫಿಯಾ ವಿರುದ್ಧ ಸಮರ ಸಾರಿದ್ದರು.
ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಯ ಎಸ್​ಪಿಯಾಗಿ ಕರ್ತವ್ಯ ನಿರ್ವಹಣೆ
ಕಾನೂನು ಸುವ್ಯವಸ್ಥೆಯ ಎಡಿಜಿಪಿಯಾಗಿ ಕರ್ತವ್ಯ ನಿರ್ವಹಣೆ
ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯದ ವೇಳೆ ಅಚ್ಚುಕಟ್ಟಾದ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
34 ವರ್ಷಗಳ ಸುದೀರ್ಘ ಸೇವೆಯ ಬಳಿಕ ಕಮಲ್ ಪಂತ್ ನಿವೃತ್ತಿ
ಹಿರಿಯ ಪೊಲೀಸ್ ಅಧಿಕಾರಿಗಳಿಂದ ಕಮಲ್ ಪಂತ್ ಅವರಿಗೆ ಬೀಳ್ಕೊಡುಗೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment