newsfirstkannada.com

ಬಿಜೆಪಿ ಅಭ್ಯರ್ಥಿ ನಟಿ ಕಂಗನಾ ರಣಾವತ್​​​​​​ ಗೋಮಾಂಸ ತಿಂದ್ರಾ? ಇದು ಎಷ್ಟು ನಿಜ?

Share :

Published April 8, 2024 at 5:16pm

Update April 8, 2024 at 5:41pm

  ನಟಿ ಕಂಗನಾ ರಣಾವತ್‌ ಗೋಮಾಂಸ ಇಷ್ಟಪಟ್ಟು ಸೇವಿಸಿದ್ದು ನಿಜಾನಾ?

  ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಜೈಶ್ರೀರಾಮ್‌ ಎಂದು ಕಂಗನಾ ಖಂಡನೆ

  ‘ಮಂಡಿ’ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕಂಗನಾ ಮತಬೇಟೆ

ಬಾಲಿವುಡ್ ನಟಿ ಕಂಗನಾ ರಣಾವತ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಮೇಲೆ ಪ್ರಚಾರದ ಅಬ್ಬರ ರಂಗೇರಿದೆ. ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಕಂಗನಾ ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಮತಯಾಚನೆಯ ಮಧ್ಯೆ ಕಂಗನಾ ವಿರುದ್ಧ ಕಾಂಗ್ರೆಸ್‌ ನಾಯಕರು ಕಿಡಿಕಾರುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಹೇಳಿಕೆಗೆ ಕಂಗನಾ ರಣಾವತ್ ಕೂಡ ಖಡಕ್ ತಿರುಗೇಟು ನೀಡಿದ್ದಾರೆ.

ನಟಿ ಕಮ್ ರಾಜಕಾರಣಿ ಕಂಗನಾ ವಿರುದ್ಧ ಅಶ್ಲೀಲ ಫೋಟೋ ಹರಿ ಬಿಟ್ಟ ಬಳಿಕ ಕಾಂಗ್ರೆಸ್‌ ನಾಯಕರು ಮತ್ತೆ ಟಾರ್ಗೆಟ್ ಮಾಡಿದ್ದಾರೆ. ಕಂಗನಾ ರಣಾವತ್ ಅವರು ಗೋಮಾಂಸ ತಿನ್ನುತ್ತಿದ್ದರು ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದಾರೆ. ನಾನು ಗೋಮಾಂಸ ತಿನ್ನುತ್ತೇನೆ ಎಂದು ಕಾಂಗ್ರೆಸ್ ನಾಯಕರ ಹೇಳಿಕೆಯನ್ನು ಕಂಗನಾ ರಣಾವತ್ ತಳ್ಳಿ ಹಾಕಿದ್ದು, ನಾನು ಹೆಮ್ಮೆಯ ಹಿಂದೂ ಎಂದು ಹೇಳಿದ್ದಾರೆ.

ಗೋಮಾಂಸ ತಿಂದಿದ್ದೇನೆ ಅನ್ನೋ ಆರೋಪದ ಬಗ್ಗೆ Xನಲ್ಲಿ ಪ್ರತಿಕ್ರಿಯೆ ನೀಡಿದ ಕಂಗನಾ ಅವರು ನಾನು ಗೋಮಾಂಸ ಅಥವಾ ಯಾವುದೇ ರೀತಿಯ (red meat) ಮಾಂಸವನ್ನು ಸೇವಿಸುವುದಿಲ್ಲ. ನನ್ನ ಬಗ್ಗೆ ಮಾಡಿರುವ ಆರೋಪ ಆಧಾರರಹಿತ ವದಂತಿಗಳು. ಈ ರೀತಿಯ ವದಂತಿಗಳನ್ನು ಹರಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಂಗನಾ ರಣಾವತ್ ಹೇಳಿದ್ದಾರೆ.

ನಾನು ದಶಕಗಳಿಂದ ಯೋಗ ಮತ್ತು ಆಯುರ್ವೇದದ ಜೀವನ ಪದ್ಧತಿಯನ್ನು ಅನುಸರಿಸುತ್ತಿದ್ದೇನೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇಂತಹ ಆರೋಪ, ತಂತ್ರಗಳು ನನ್ನ ಘನತೆಯನ್ನು ಹಾಳು ಮಾಡಲು ಸಾಧ್ಯವಿಲ್ಲ. ನಾನು ಹೆಮ್ಮೆಯ ಹಿಂದೂ. ನನ್ನ ಬಗ್ಗೆ ನನ್ನ ಜನರಿಗೆ ತಿಳಿದಿದೆ. ಅವರನ್ನು ಯಾರು ದಾರಿ ತಪ್ಪಿಸಲು ಸಾಧ್ಯವಿಲ್ಲ. ಜೈ ಶ್ರೀರಾಮ್ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ‘ಕಂಗನಾ ಮಾತ್ರ ಈ ದೇಶದ ಮಗಳೇ..? ಮಿಯಾ ಖಲೀಫಾ ಜೊತೆ ನನ್ನ..’ ಆಕ್ರೋಶ ಹೊರ ಹಾಕಿದ ಜನಪ್ರಿಯ ಗಾಯಕಿ..!

‘ಗೋಮಾಂಸ’ದ ಆರೋಪ ಮಾಡಿದ್ಯಾರು?
ಮಹಾರಾಷ್ಟ್ರದ ಕಾಂಗ್ರೆಸ್‌ ನಾಯಕ, ವಿಧಾನಸಭೆಯ ವಿಪಕ್ಷ ನಾಯಕ ವಿಜಯ್ ವಡೆತ್ತಿವಾರ್ ಅವರು ಬಿಜೆಪಿ ಲೋಕಸಭಾ ಅಭ್ಯರ್ಥಿ ಕಂಗನಾ ರಣಾವತ್ ಅವರು ಒಮ್ಮೆ ಗೋಮಾಂಸವನ್ನು ಇಷ್ಟಪಟ್ಟಿದ್ದರು ಮತ್ತು ಸೇವಿಸಿದ್ದಾರೆ ಎಂದು ಹೇಳಿದ್ದರು. ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ವಡೆತ್ತಿವಾರ್‌ ಅವರು ಎಲ್ಲಾ ಭ್ರಷ್ಟ ನಾಯಕರನ್ನು ಬಿಜೆಪಿ ಸ್ವಾಗತ ಮಾಡುತ್ತಿದೆ ಎಂದಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ಅಭ್ಯರ್ಥಿ ನಟಿ ಕಂಗನಾ ರಣಾವತ್​​​​​​ ಗೋಮಾಂಸ ತಿಂದ್ರಾ? ಇದು ಎಷ್ಟು ನಿಜ?

https://newsfirstlive.com/wp-content/uploads/2024/04/Kangana-Ranauth-BJP.jpg

Load More