newsfirstkannada.com

‘ಕಂಗನಾ ಮಾತ್ರ ಈ ದೇಶದ ಮಗಳೇ..? ಮಿಯಾ ಖಲೀಫಾ ಜೊತೆ ನನ್ನ..’ ಆಕ್ರೋಶ ಹೊರ ಹಾಕಿದ ಜನಪ್ರಿಯ ಗಾಯಕಿ..!

Share :

Published March 26, 2024 at 1:30pm

  ನನಗೆ ಆಗಿರುವ ಅವಮಾನಕ್ಕೆ ಒಬ್ಬಂಟಿಯಾಗಿ ಹೋರಾಡಬೇಕೇ..?

  ರಾಷ್ಟ್ರೀಯ ಮಹಿಳಾ ಆಯೋಗ ಬಿಜೆಪಿ ಅಭ್ಯರ್ಥಿ ಪರ ಮಾತ್ರ ಇರೋದಾ?

  ಸರ್ಕಾರಕ್ಕೆ ನಾನು ಪ್ರಶ್ನಿಸಿದ್ರೆ ಎಷ್ಟು ಶಿಕ್ಷೆ ಕೊಡ್ತೀರಿ ಎಂದ ನೇಹಾ ಸಿಂಗ್

ಬಾಲಿವುಡ್ ನಟಿ, ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕಂಗನಾ ರಣಾವತ್ ವಿರುದ್ಧ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೆಟ್ ಮಾಡಿದ್ದ ವಿವಾದಾತ್ಮಕ ಪೋಸ್ಟ್​ ಚುನಾವಣಾ ರಾಜಕೀಯದಲ್ಲಿ ಬಿಸಿಬಿಸಿ ಚರ್ಚೆ ಆಗ್ತಿದೆ.

ಕಾಂಗ್ರೆಸ್​ ವಕ್ತಾರೆ ಮಾಡಿರುವ ಪೋಸ್ಟ್ ಭಾರೀ ಚರ್ಚೆಗೆ ಕಾರಣವಾಗ್ತಿದ್ದಂತೆ, ಅದನ್ನು ನಾನು ಮಾಡಿಲ್ಲ. ಬೇರೆ ಯಾರೋ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಹಿಳಾ ಆಯೋಗ, ಸಿಡಿದು ನಿಂತಿದೆ. ಇದರ ಮಧ್ಯೆ ಉತ್ತರ ಪ್ರದೇಶದ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್, ತನಗೆ ಅವಮಾನ ಮಾಡುವವರ ವಿರುದ್ಧ ಯಾವಾಗ ಕ್ರಮ ತೆಗೆದುಕೊಳ್ತೀರಿ ಎಂದು ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ನಟಿ ಊರ್ಮಿಳಾಗೆ ‘ಸಾಫ್ಟ್​​ ಪೋರ್ನ್​​ ಸ್ಟಾರ್​’ ಎಂದ ಕಂಗನಾ.. ಹಳೇಯ ವಿಡಿಯೋ ಹಂಚಿಕೊಂಡ ಯುವ ಕಾಂಗ್ರೆಸ್​​ ಅಧ್ಯಕ್ಷ

ನೇಹಾ ಸಿಂಗ್ ರಾಥೋಡ್ ಟ್ವೀಟ್ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗ್ತಿದೆ. ಇನ್ನು ನೇಹಾ ಅವರು ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಟ್ಯಾಗ್ ಮಾಡಿದ್ದಾರೆ. ಮಹಿಳಾ ಆಯೋಗವು ಬಿಜೆಪಿಯ ಮಹಿಳಾ ಅಭ್ಯರ್ಥಿಗಳಿಗಾಗಿ ಮಾತ್ರ ಹೋರಾಡುತ್ತದೆಯೇ..? ಎಂದು ಪ್ರಶ್ನೆ ಮಾಡಿದ್ದಾರೆ.

ನೇಹಾ ಸಿಂಗ್ ರಾಥೋಡ್ ಮೋದಿ ಸರ್ಕಾರಕ್ಕೆ ಪ್ರಶ್ನೆ

 1. ಕಂಗನಾ ರಣಾವತ್ ಮಾತ್ರ ಈ ದೇಶದ ಮಗಳೇ..?
 2. ಬಿಜೆಪಿ ಮಾಧ್ಯಮಗಳಿಗೆ ಅವಳ ನೋವು ಮಾತ್ರ ಕಾಣುತ್ತಿದೆಯೇ?
 3. ಇಂದು ಬೆಳಗ್ಗೆಯಿಂದ ನೀಲಿಚಿತ್ರ ತಾರೆ ಮಿಯಾ ಖಲಿಫ್ ಜೊತೆ ನನ್ನ ಫೋಟೋ ಕೊಲಾಜ್ ಮಾಡಿ ಟ್ವಿಟರ್​ನಲ್ಲಿ ಟ್ರೆಂಡ್ ಮಾಡ್ತಿದ್ದಾರೆ. ಬುದ್ಧಿ ಇರೋರು ಯಾರೂ ನೋಡ್ತಿಲ್ಲವೇ?
 4. ಮೋದಿಜೀ ಅವರ ಕುಟುಂಬದಿಂದ ಪಾರಾಗಲು ನಾನು ಒಬ್ಬಂಟಿಯಾಗಿ ಹೋರಾಡಬೇಕೇ..?
 5. ಬಿಜೆಪಿ ಮಹಿಳಾ ಅಭ್ಯರ್ಥಿಗಾಗಿ ರಾಷ್ಟ್ರೀಯ ಮಹಿಳಾ ಆಯೋಗ ಎಲ್ಲಾ ರೀತಿಯ ಹೋರಾಟ ನಡೆಸುತ್ತದೆಯೇ?
 6. ರಾಷ್ಟ್ರೀಯ ಮಹಿಳಾ ಆಯೋಗ ನನ್ನ ನೋವನ್ನು ಯಾವಾಗ ಆಲಿಸುತ್ತದೆ?
 7. ನನಗೆ ಆಗಿದ ಅವಮಾನ ದೇಶದ ಮಗಳಿಗೆ ಆಗಿರುವ ಅವಮಾನ ಅಲ್ಲವೇ?
 8. ನನಗೆ ಆಗಿರುವ ಅವಮಾನದ ಬಗ್ಗೆ ಮಹಿಳಾ ಆಯೋಗಕ್ಕೆ ಗೊತ್ತಿದೆಯಾ?
 9. ನನ್ನ ಹೆಸರಲ್ಲಿ ಅವಹೇಳನಾಕಾರಿ ಟ್ವೀಟ್​ಗಳನ್ನು ಮಾಡುವ ಮೂಲಕ ಅವಮಾನ ಮಾಡ್ತಿದ್ದಾರೆ, ಅವರಿಗೆ ಯಾವಾಗ ಶಿಕ್ಷೆ ಕೊಡ್ತೀರಿ?
 10. ನನ್ನ ಗೌರವಕ್ಕಾಗಿ ನಾನು ಮಾತ್ರ ಹೋರಾಡಬೇಕೇ..?
 11. ಪ್ರಜಾಪ್ರಭುತ್ವ ಇರುವ ದೇಶದಲ್ಲಿ ಸರ್ಕಾರಕ್ಕೆ ಪ್ರಶ್ನೆ ಕೇಳಿದ್ದಕ್ಕೆ ಎಷ್ಟೊಂದು ಶಿಕ್ಷೆ ವಿಧಿಸಲಾಗುತ್ತದೆ?
 12. ನನ್ನ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬೇಕು

ನೇಹಾ ಸಿಂಗ್ ರಾಥೋಡ್ 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲು ಬಿಡುಗಡೆಯಾದ ‘ಯುಪಿ ಮೇ ಕಾ ಬಾ’ ಹಾಡಿಗೆ ಪ್ರಸಿದ್ಧರಾದರು. ಇನ್ನು 2020ರಲ್ಲಿ ಅವರ ಹಾಡು ‘ಬಿಹಾರ್ ಮೇ ಕಾ ಬಾ’ ಸಹ ಸಾಕಷ್ಟು ಪ್ರಸಿದ್ಧಿಯಾಗಿತ್ತು.

‘ಕಂಗನಾ ಮಾತ್ರ ಈ ದೇಶದ ಮಗಳೇ..? ಮಿಯಾ ಖಲೀಫಾ ಜೊತೆ ನನ್ನ..’ ಆಕ್ರೋಶ ಹೊರ ಹಾಕಿದ ಜನಪ್ರಿಯ ಗಾಯಕಿ..!

https://newsfirstlive.com/wp-content/uploads/2024/03/KANGANA-5.jpg

Load More