/newsfirstlive-kannada/media/post_attachments/wp-content/uploads/2024/06/kangana8.jpg)
ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಭಾರತದ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಇದೊಂದು ಐತಿಹಾಸಿಕ ದಿನವಾಗಿದ್ದು, ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಮಾಣವಚನ ಸ್ವೀಕರಿದ್ದಾರೆ.
ಇದನ್ನೂ ಓದಿ: ಒಂದು ವರ್ಷದಿಂದಲೇ ಡಿವೋರ್ಸ್ ಪ್ಲಾನ್.. ಚಂದನ್ ನಂಗೆ ಬೇಡ ಅಂತ ನಿವೇದಿತಾ ಡಿಸೈಡ್ ಮಾಡಿದ್ದೇಕೆ?
ಇನ್ನು, ರಾಷ್ಟ್ರಪತಿ ಭವನದ ಮುಂಭಾಗ ನಡೆದ ಸಮಾರಂಭಕ್ಕೆ ದೇಶ-ವಿದೇಶದ ಗಣ್ಯರು ಸಾಕ್ಷಿಯಾದರು. ಧಾರ್ಮಿಕ ಮುಖಂಡರು, ಬಾಲಿವುಡ್ ಸ್ಟಾರ್‌ಗಳು ಕೂಡ ಆಗಮಿಸಿದರು. ನರೇಂದ್ರ ಮೋದಿ ಪದಗ್ರಹಣ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಅಧಿಕ ಗಣ್ಯರು ಹಾಜರಾಗಿದ್ದರು.
ಇದನ್ನೂ ಓದಿ:ಬರೋಬ್ಬರಿ 155 ನಿಮಿಷ.. ಪ್ರಧಾನಿ ಮೋದಿ 3.O ಸಂಪುಟ ಸೇರಿದ ಒಟ್ಟು ಕೇಂದ್ರ ಸಚಿವರು ಎಷ್ಟು?
ಅದರಲ್ಲಿ ಮಂಡಿ ಕ್ಷೇತ್ರದಿಂದ ಕಂಗನಾ ರಣಾವತ್ ಗೆದ್ದು ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ನಿನ್ನೆ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಸಖತ್ ಆಗಿ ಮಿಂಚಿದರು. ಇನ್ನು, ಈ ವಿಶೇಷ ಕ್ಷಣಕ್ಕೆ ಕಂಗನಾ ರನೌತ್ ರಾಣಿಯಂತೆ ರೆಡಿಯಾಗಿ ಬಂದಿದ್ದರು. ಸಮಾರಂಭದ ಕೇಂದ್ರ ಬಿಂದುವಿನಂತೆ ಬಿಟೌನ್ ಕ್ವೀನ್ ಕಂಗೊಳಿಸುತ್ತಿದ್ದರು. ಬಿಳಿ ಬಣ್ಣದ ಸೀರೆಯಲ್ಲಿ, ಮುತ್ತಿನ ನೆಕ್ಲೇಸ್ ಧರಿಸಿ ಕಂಗನಾ ಅವರಿಗೆ ಬಹಳ ಅಂದವಾಗಿ ಕಾಣಿಸುತ್ತಿತ್ತು.
ELEGANCE Personfied - MP Kangana Ranaut Making a Stylish Entrance ?? #OathCeremony#ModiCabinet#KanganaRanautpic.twitter.com/E3gyp3e7f7
— Rosy (@rose_k01)
ELEGANCE Personfied - MP Kangana Ranaut Making a Stylish Entrance 😍👑 #OathCeremony#ModiCabinet#KanganaRanautpic.twitter.com/E3gyp3e7f7
— Rosy (@rose_k01) June 9, 2024
">June 9, 2024
ಇನ್ನು, ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ರಾಷ್ಟ್ರಪತಿ ಭವನ ಅಂಗಳದಲ್ಲಿ ನಡೆದುಕೊಂಡು ಬರುತ್ತಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಜೊತೆಗೆ ಸಮಾರಂಭಕ್ಕೆ ಹೋಗುವ ಮೊದಲು ನಟಿ ಸಾಮಾಜಿಕ ಜಾಲತಾಣಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದರು. ಸದ್ಯ ಇದೇ ವಿಡಿಯೋ ನೋಡಿದ ನೆಟ್ಟಿಗರು ನಟಿಯ ಮಸ್ತ್ ಲುಕ್ಗೆ ಫಿದಾ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ