newsfirstkannada.com

×

WATCH: ನಾವು ಆಗಲೇ ಮಾತಾಡಿ ಆಗಿದೆ.. ಒಂದೇ ಸಾಲಿನಲ್ಲಿ ಭಾಷಣ ಮುಗಿಸಿದ್ದೇಕೆ ನಟ ದರ್ಶನ್‌?

Share :

Published September 29, 2023 at 3:59pm

Update September 29, 2023 at 4:03pm

    ಕನ್ನಡ ಕಲಾವಿದರನ್ನು ಮಾತ್ರ ಹೋರಾಟಕ್ಕೆ ಕರೆಯೋದು ಯಾವ ನ್ಯಾಯ?

    ನಟ ದರ್ಶನ್ ಅವರ ಮಾತುಗಳನ್ನು ಖಂಡಿಸಿದ್ದ ಕಾವೇರಿ ಹೋರಾಟಗಾರರು

    ಇಂದು ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರೋದ್ಯಮದಿಂದ ಸಂಪೂರ್ಣ ಬೆಂಬಲ

ಬೆಂಗಳೂರು: ಕಾವೇರಿ ನೀರಿಗಾಗಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಕನ್ನಡ ಪರ ಹೋರಾಟಗಾರರು, ರೈತರು ಪ್ರತಿಭಟನೆ ನಡೆಸಿದ್ದಾರೆ. ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಇವತ್ತು ಕನ್ನಡ ಚಿತ್ರೋದ್ಯಮ ಕೂಡ ಬೆಂಬಲ ಕೊಟ್ಟಿತ್ತು. ಕನ್ನಡ ಫಿಲಂ ಚೇಂಬರ್ ಆಯೋಜಿಸಿದ್ದ ಕಾವೇರಿ ಪ್ರತಿಭಟನೆಯಲ್ಲಿ ಸ್ಯಾಂಡಲ್‌ವುಡ್‌ನ ಬಹಳಷ್ಟು ಕಲಾವಿದರು ಭಾಗಿಯಾಗಿದ್ದರು.

ಕಾವೇರಿ ನಮ್ಮದು.. ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದನ್ನ ನಿಲ್ಲಿಸಲು ಕನ್ನಡಿಗರು ರೋಡಿಗಿಳಿದಿದ್ರು. ಈ ಹೋರಾಟದ ಭಾಗವಾಗಿ ಕನ್ನಡ ಚಿತ್ರರಂಗದ ಹಲವು ನಟ, ನಟಿಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಹೋರಾಟದಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಕಲಾವಿದರು, ಕಾವೇರಿ ಸಮಸ್ಯೆ ಬಗೆಹರಿಯಬೇಕು. ಕರ್ನಾಟಕಕ್ಕೆ ಅನ್ಯಾಯವಾಗಬಾರದು. ರೈತರ ಪರವಾಗಿ ನಾವಿದ್ದೇವೆ ಎಂದು ಬೆಂಬಲ ಘೋಷಿಸಿದರು.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಕನ್ನಡ ಚಿತ್ರೋದ್ಯಮ ಈ ಪ್ರತಿಭಟನೆ ಹಮ್ಮಿಕೊಂಡಿತ್ತು. ಕಾವೇರಿ ಹೋರಾಟಕ್ಕೆ ಆಗಮಿಸಿದ ನಟ ದರ್ಶನ್ ವೇದಿಕೆಯಲ್ಲಿ ಭಾಗಿಯಾಗಿ ತಮ್ಮ ಬೆಂಬಲ ಸೂಚಿಸಿದರು. ಇದೇ ವೇಳೆ ಭಾಷಣ ಮಾಡಲು ಆಹ್ವಾನಿಸಿದಾಗ ನಾವು ಆಗಲೇ ಮಾತಾಡಿ ಆಗಿದೆ. ಮತ್ತೆ ಮಾತಾಡೋದು ಬೇಡ. ದೊಡ್ಡೋರು ಇದ್ದಾರೆ ಶಿವಣ್ಣ ಅವರು ಮಾತಾಡ್ತಾರೆ ಅಂತಾ ಹೇಳ್ತೀನಿ ಎಂದಷ್ಟೇ ಹೇಳಿದರು.

ಇತ್ತೀಚೆಗೆ ಮೈಸೂರಿನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಾವೇರಿ ಚಳವಳಿಗೆ ಕನ್ನಡ ಚಿತ್ರರಂಗದ ಸ್ಟಾರ್​ಗಳು ಬರ್ತಿಲ್ಲ ಎಂದು ಆರೋಪ ಮಾಡ್ತಾರೆ. ಕಾವೇರಿ ಹೋರಾಟ ಬಂದಾಗಲೆಲ್ಲಾ ದರ್ಶನ್, ಸುದೀಪ್, ಶಿವಣ್ಣ, ಯಶ್ ಮತ್ತೊಬ್ಬರು ಮಾತ್ರ ಕಾಣಿಸೋದಾ? ಎಂದು ಬೇಸರ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: 6 ಕೋಟಿಗೆ ತಮಿಳು ಸಿನಿಮಾ ಖರೀದಿಸಿ ಕನ್ನಡ ನೆಲದಲ್ಲಿ 37 ಕೋಟಿ ಸಂಪಾದಿಸಿದರು, ಅವರನ್ಯಾಕೆ ಹೋರಾಟಕ್ಕೆ ಕರೆಯಲ್ಲ? -ದರ್ಶನ್

ಇತ್ತೀಚೆಗೆ ತಮಿಳು ಸಿನಿಮಾ ಒಂದು ಬಿಡುಗಡೆಯಾಯಿತು. ಆ ಸಿನಿಮಾವನ್ನು ಕನ್ನಡದ ವಿತರಕರೊಬ್ಬರು ಕರ್ನಾಟಕ‌ದಲ್ಲಿ ಹಂಚಿಕೆ ಮಾಡಲು ಬರೋಬ್ಬರಿ 6 ಕೋಟಿಗೆ ಖರೀದಿ ಮಾಡಿದ್ದರು. ಅದರಿಂದ ಅವರು ಸುಮಾರು 36 ರಿಂದ 37 ಕೋಟಿ ರೂಪಾಯಿ ಸಂಪಾದಿಸಿದರು. ಅಂದು ಕನ್ನಡದವರು ತಮಿಳು ಸಿನಿಮಾಗೆ 37 ಕೋಟಿ ರೂಪಾಯಿ ಕೊಂಡೊಯ್ಯಲು ಬಿಟ್ಟು ಈಗ, ಕನ್ನಡ ಕಲಾವಿದರನ್ನು ಮಾತ್ರ ಹೋರಾಟಕ್ಕೆ ಕರೆಯೋದು ಯಾವ ನ್ಯಾಯ? ಎಂದು ಪ್ರಶ್ನೆ ಮಾಡಿದರು. ದರ್ಶನ್ ಅವರ ಈ ಮಾತನ್ನು ಕಾವೇರಿ ಹೋರಾಟಗಾರರು ಖಂಡಿಸಿದ್ದು, ಪ್ರತಿಭಟನೆಯನ್ನು ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಕಾವೇರಿ ಪ್ರತಿಭಟನೆಯಲ್ಲಿ ಭಾಗಿಯಾದ ದರ್ಶನ್ ಅವರು ಒಂದೇ ಸಾಲಿನಲ್ಲಿ ತಮ್ಮ ಮಾತು ಮುಗಿಸಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: ನಾವು ಆಗಲೇ ಮಾತಾಡಿ ಆಗಿದೆ.. ಒಂದೇ ಸಾಲಿನಲ್ಲಿ ಭಾಷಣ ಮುಗಿಸಿದ್ದೇಕೆ ನಟ ದರ್ಶನ್‌?

https://newsfirstlive.com/wp-content/uploads/2023/09/Darshan-4.jpg

Load More